ಮಾರ್ಚ್ 22, 26ಕ್ಕೆ ತಿಥಿ ದಗ್ಧ ಯೋಗ; ಭೀಕರ ಅನಾಹುತಕ್ಕೆ ಸಾಕ್ಷಿ ಆಗಬಹುದು ಜಗತ್ತು ಎನ್ನುತ್ತಾರೆ ಕರ್ನಾಟಕದ ಖ್ಯಾತ ಜ್ಯೋತಿಷಿ

ಮಾರ್ಚ್ 22, 26ನೇ ತಾರೀಕಿನಂದು ಜ್ಯೋತಿಷ್ಯ ರೀತಿಯಾಗಿ ಅತ್ಯಂತ ಅಶುಭಕರವಾದ ದಿನಗಳು. ಈ ಸಂದರ್ಭದಲ್ಲಿ ವಿಶ್ವದಲ್ಲಿ ಭಾರೀ ಅನಾಹುತ ಸಂಭವಿಸಬಹುದು ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ.

ಮಾರ್ಚ್ 22, 26ಕ್ಕೆ ತಿಥಿ ದಗ್ಧ ಯೋಗ; ಭೀಕರ ಅನಾಹುತಕ್ಕೆ ಸಾಕ್ಷಿ ಆಗಬಹುದು ಜಗತ್ತು ಎನ್ನುತ್ತಾರೆ ಕರ್ನಾಟಕದ ಖ್ಯಾತ ಜ್ಯೋತಿಷಿ
ಜ್ಯೋತಿಷಿ ಪ್ರಕಾಶ್​ ಅಮ್ಮಣ್ಣಾಯ
Follow us
TV9 Web
| Updated By: Srinivas Mata

Updated on: Mar 21, 2022 | 4:14 PM

ಈ ತಿಂಗಳು, ಅಂದರೆ ಮಾರ್ಚ್ 22, 26ನೇ ತಾರೀಕು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿಯ ಕಾಪು ಮೂಲದ ಪ್ರಕಾಶ್ ಅಮ್ಮಣ್ಣಾಯ ಎಚ್ಚರಿಕೆ ನೀಡಿದ್ದಾರೆ. ಈ ಎರಡು ದಿನಗಳು ತಿಥಿ ದಗ್ಧ ಯೋಗ ಇದ್ದು, ಇದರ ಪರಿಣಾಮ ಭೀಕರವಾಗಿ ಇರಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಕುಜ ಗ್ರಹ ರಾಜಾಧಿಪತ್ಯದ ಕೊನೆಯ ದಿನಗಳೂ ಹಾಗೂ ಪರಮೋಚ್ಚ ಸ್ಥಿತಿಗೆ ಸಾಗುತ್ತದೆ. ಹೀಗೆ ಗ್ರಹಗಳ ಸ್ಥಿತಿ ಇರುವುದರಿಂದ ಹಾಗೂ ಇಡೀ ವಿಶ್ವವೇ ಆತಂಕಗೊಳ್ಳುವಂಥ ರಷ್ಯಾ- ಉಕ್ರೇನ್ ಯುದ್ಧ (Russia- Ukraine Crisis) ನಡೆಯುತ್ತಿರುವುದರಿಂದ ಅಣ್ವಸ್ತ್ರ ಪ್ರಯೋಗ ಸಾಧ್ಯತೆಯನ್ನು ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಪ್ರಕಾಶ್​ ಅಮ್ಮಣ್ಣಾಯ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರ ಬಗ್ಗೆಯೇ ಟಿವಿ9ಕನ್ನಡ ಡಿಜಿಟಲ್ ಇನ್ನಷ್ಟು ವಿಸ್ತೃತವಾಗಿ ವಿವರಣೆ ಕೂಡ ನೀಡಿದ್ದಾರೆ.

ಅಂದಹಾಗೆ, ದಗ್ಧ ಯೋಗ ಅಂದರೇನು ಅಂತ ನೋಡುವುದಾದರೆ ಮಂಗಳವಾರ ಪಂಚಮಿ ಹಾಗೂ ಶನಿವಾರ ನವಮಿ ಬಂದಲ್ಲಿ ಹೀಗೆ ಕರೆಯಲಾಗುತ್ತದೆ. ಅದರಲ್ಲೂ ಈ ಯೋಗವು ಕೃಷ್ಣ ಪಕ್ಷದಲ್ಲಿ ಬಂದುದಾದರೆ ಅದಕ್ಕೆ ಮತ್ತೂ ಬಲ ಹೆಚ್ಚಾಗುತ್ತದೆ ಎಂದು ಅರ್ಥ. ದಗ್ಧ ಯೋಗ ಎಂದರೆ ಸುಡುವಂಥದ್ದು ಅಂತ ಅರ್ಥ. ಈ ರೀತಿಯಾದ ಯೋಗ ವರ್ಷದಲ್ಲಿ ಕೆಲವು ಬಾರಿಯೇ ಬರುತ್ತದೆ. ಆದರೆ ಅದಕ್ಕೆ ಕಾಲ ಮಿತಿ, ಭಂಗಗಳಿವೆ. ಇಲ್ಲಿ ಈ ಎರಡೂ ಗ್ರಹಗಳೂ ಯುದ್ಧ ಸ್ಥಿತಿಯಲ್ಲಿ ಮಕರ ರಾಶಿಯಲ್ಲಿ ಇವೆ.

ಮಕರ ರಾಶಿ ಅಂದರೆ ಶನಿ ಗ್ರಹಕ್ಕೆ ಸ್ವಕ್ಷೇತ್ರ. ಇನ್ನು ಕುಜ ಗ್ರಹಕ್ಕೆ ಉಚ್ಚ ಕ್ಷೇತ್ರ. ಇದಕ್ಕೆ ಪೂರಕ ಎಂಬಂತೆ ರಷ್ಯಾ- ಉಕ್ರೇನ್​ ಸಂಘರ್ಷ ತೀರಾ ನಿರ್ಣಾಯಕ ಘಟ್ಟವನ್ನು ಮುಟ್ಟಿದಂತೆ ಕಾಣುತ್ತಿದೆ. ಈ ಸನ್ನಿವೇಶದಲ್ಲಿ ಅಣ್ವಸ್ತ್ರ ಪ್ರಯೋಗದಂಥ ಅನಾಹುತಗಳು ಘಟಿಸಿ ಹೋದರೂ ಏನೂ ಅಚ್ಚರಿಪಡಬೇಕಿಲ್ಲ. ಇಲ್ಲಿ ರಷ್ಯಾ- ಉಕ್ರೇನ ಸಂಘರ್ಷ ಸದ್ಯಕ್ಕೆ ನಮ್ಮೆದುರು ಕಾಣುತ್ತಿರುವ ಒಂದು ಸಾಧ್ಯತೆ. ಆದರೆ ವಿಶ್ವದ ಯಾವುದೇ ಭಾಗದಲ್ಲಿ ಭೀಕರ ಅನಾಹುತ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವುದಕ್ಕೆ ಆಗಲ್ಲ. ನಾವೆಲ್ಲರೂ ಸೇರಿ ಮಾಡಬಹುದಾದದ್ದು ಏನೆಂದರೆ, ಏನೂ ದುರಂತ ಸಂಭವಿಸದಿರಲಿ ಎಂದು ಭಗವಂತನನ್ನು ಮನಸಾರೆ ಪ್ರಾರ್ಥಿಸಬಹುದು ಎಂಬ ಸಲಹೆಯನ್ನು ಪ್ರಕಾಶ್ ಅಮ್ಮಣ್ಣಾಯ ಅವರು ನೀಡುತ್ತಾರೆ.

ಇದನ್ನೂ ಓದಿ: Uttar Pradesh 2022 Elections Prediction: ಕರ್ನಾಟಕದ ಖ್ಯಾತ ಜ್ಯೋತಿಷಿಯಿಂದ ಉತ್ತರಪ್ರದೇಶ ಚುನಾವಣೆ ಭವಿಷ್ಯ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?