ಕಾಡಾನೆ ಕೊಂದು ದಂತ ಮಾರುವ ವೇಳೆ ಸಿಕ್ಕಿಬಿದ್ದ ಆರೋಪಿಗಳು: ಆನೆ ಕಳೇಬರ ಹೊರತೆಗೆದು ಮರಣೋತ್ತರ ಪರೀಕ್ಷೆ!
ಆನೆ ಮೃತಪಟ್ಟಾಗ ಮಾಹಿತಿ ಮುಚ್ಚಿಟ್ಟು ಆನೆಯನ್ನ ಆರೋಪಿ ಹೂತಿದ್ದ. ವೀರಾಪುರ ಗ್ರಾಮದ ಚಂದ್ರೇಗೌಡ,ನಾಗರಾಜ್, ತಿಲಕ್ರಿಂದ ಕೃತ್ಯವ್ಯಸಗಲಾಗಿದೆ. ಆರು ತಿಂಗಳ ಹಿಂದೆ ಆನೆ ಕರೆಂಟ್ ಶಾಕ್ನಿಂದ ಕಾಡಾನೆ ಸಾವನ್ನಪ್ಪಿದೆ.
ಹಾಸನ: ಕಾಡಾನೆ ಕೊಂದು ದಂತ ತೆಗೆದು ಮಾರಾಟ ಮಾಡೋ ವೇಳೆ ಆರೋಪಿಗಳು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆನೆ ಹೂತಿದ್ದ ಸ್ಥಳದಲ್ಲಿ ಆನೆ ಮೃತದೇಹ ತೆಗೆದು ಮರಣೋತ್ತರ (Postmortem) ಪರೀಕ್ಷೆ ಮಾಡಲಾಗಿದೆ. ಅರಣ್ಯ ತನಿಖಾ ದಳದ ಡಿಸಿಎಫ್ ರವೀಂದ್ರ ನೇತೃತ್ವದಲ್ಲಿ ಸ್ಥಳ ಮಹಜರ್ ಮಾಡಲಾಗಿದ್ದು, ನೆನ್ನೆ ಆನೆ ದಂತ ಮಾರಾಟಮಾಡಲು ಮುಂದಾಗಿದ್ದ ವೇಳೆ ಮೂರು ಆರೋಪಿಗಳ ಬಂಧನ ಮಾಡಲಾಗಿದೆ. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ಬಂಧನ ಮಾಡಲಾಗಿದೆ. ಹಾಸನ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಬೆಳೆ ರಕ್ಷಣೆಗಾಗಿ ಅಕ್ರಮ ವಿದ್ಯುತ್ ಹರಿಸಿದ್ದ ವೇಳೆ ಕಾಡಾನೆ ಬಲಿಯಾಗಿದೆ. ಆನೆ ಮೃತ ಪಟ್ಟಾಗ ಮಾಹಿತಿ ಮುಚ್ಚಿಟ್ಟು ಆನೆಯನ್ನ ಆರೋಪಿ ಹೂತಿದ್ದ. ವೀರಾಪುರ ಗ್ರಾಮದ ಚಂದ್ರೇಗೌಡ,ನಾಗರಾಜ್, ತಿಲಕ್ರಿಂದ ಕೃತ್ಯವ್ಯಸಗಲಾಗಿದೆ. ಆರು ತಿಂಗಳ ಹಿಂದೆ ಆನೆ ಕರೆಂಟ್ ಶಾಕ್ನಿಂದ ಕಾಡಾನೆ ಸಾವನ್ನಪ್ಪಿದೆ. ಆನೆ ಮೃತದೇಹ ಕೊಳೆತ ಬಳಿಕ ಮತ್ತೆ ಹೂತಿದ್ದಾರೆ. ಬಳಿಕ ಕಾಡಾನೆಯಿಂದ ದಂತ ಕಿತ್ತು ಮಾರಾಟಕ್ಕೆ ಯತ್ನಿಸಿದ್ದಾರೆ. ಕೋಟ್ಯಾಂತರ ರೂ. ಮೌಲ್ಯಕ್ಕೆ ದಂತ ಮಾರಾಟ ಮಾಡಲು ಆರೋಪಿಗಳು ಸಜ್ಜಾಗಿದ್ದು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಆನೆ ಕಳೇಬರ ಹೊರತೆಗೆದು ಪರೀಕ್ಷೆ ಮಾಡಲಾಗಿದೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯಲ್ಲಿ 50 ಸಾವಿರದಿಂದ 1 ಲಕ್ಷಕ್ಕೆ ಸಿಗುತ್ತೆ ಹೈಟೆ ಕ್ವಾಲಿಟಿ ಇಲ್ಲೀಗಲ್ ಗನ್:
ಬೆಂಗಳೂರು: ಸಿಟಿನಲ್ಲಿ ಪಿಸ್ತೂಲ್ ಸ್ಮಗ್ಲರ್ ಬಂಧನ ಮಾಡಲಾಗಿದೆ. ಮಹಾರಾಷ್ಟ್ರದಿಂದ ಕಡಿಮೆ ಬೆಲೆಗೆ ಖರೀದಿಸಿ ನಗರದ ರೌಡಿಗಳಿಗೆ, ಕ್ರಿಮಿನಲ್ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಶಕೀಲ್ ಅಹ್ಮದ್ ಬಂಧಿತ ಆರೋಪಿ. 21 ವರ್ಷಕ್ಕೆ ಗನ್ ಡೀಲಿಂಗ್ಗೆ ಇಳಿದಿದ್ದ ಆರೋಪಿ, ಹಲವು ಬಾರಿ ಜೈಲು ಸೇರಿದ್ರು ಕೃತ್ಯ ಬಿಟ್ಟಿರಲಿಲ್ಲ. 2019ರಲ್ಲಿ ಸಿಸಿಬಿ ಅಧಿಕಾರಿಗಳು ಶಕೀಲ್ ಅಹ್ಮದ್ನನ್ನ ಬಂಧಿಸಿದ್ದರು. 2016 ರಲ್ಲಿ ಸಂಪಿಗೆಹಳ್ಳಿ ಪೊಲೀಸರು ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿಲಾಗಿತ್ತು. ಬಳಿಕ ಮತ್ತೆ ಗನ್ ಡೀಲ್ಗೆ ಆರೋಪಿ ಇಳಿದಿದ್ದ. ಆರೋಪಿಯಿಂದ 2 ಪಿಸ್ತೂಲ್ 4 ಜೀವಂತ ಗುಂಡು ವಶ ಪಡಿಸಿಕೊಳ್ಳಲಾಗಿದೆ. 50 ರಿಂದ 1 ಲಕ್ಷಕ್ಕೆ ಪಿಸ್ತೂಲ್ ಮಾರಾಟ ಮಾಡ್ತಿದ್ದ. ಮಹಾರಾಷ್ಟ್ರದ ಅಮರಾವತಿಯಿಂದ ಕಡಿಮೆ ಬೆಲೆಗೆ ಪಿಸ್ತೂಲ್ ಖರೀದಿಸುತ್ತಿದ್ದು, ವೆಪನ್ ಡೀಲಿಂಗ್ನಲ್ಲಿ ಸಕ್ರೀಯವಾಗಿರುವ ಉದ್ದೇಶದಿಂದ ಸ್ಮಗ್ಲಿಂಗ್ ಮಾಡುತ್ತಿದ್ದ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್ ಆಗಿರುವ ಶಕೀಲ್ ಅಹ್ಮದ್, ರಿಯಲ್ ಎಸ್ಟೇಟ್ ನಡೆಸಲು, ಬೆದರಿಕೆ ಹಾಕಲು ಪಿಸ್ತೂಲ್ ಉಪಯೋಗಿಸುತ್ತಿದ್ದ. ಉತ್ತಮ ಗುಣಮಟ್ಟದ ವೆಪನ್ಗಳನ್ನ ಮಾರಾಟ ಮಾಡ್ತಿದ್ದ. ಈಗ ಮತ್ತೆ ಬಾಣಸ್ವಾಡಿ ಪೊಲೀಸರಿಗೆ ಆರೋಪಿ ಸಿಕ್ಕಿಬಿದಿದ್ದಾನೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಯತಪ್ಪಿ ಬಾವಿಗೆ ಬಿದ್ದ ಹೋರಿ ರಕ್ಷಣೆ:
ಚಿಕ್ಕೋಡಿ: ಆಯತಪ್ಪಿ ಬಾವಿಗೆ ಬಿದ್ದ ಹೋರಿಯನ್ನು ಅಗ್ನಿಶಾಮಕದಳ ರಕ್ಷಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಿರಣಗಿ ಗ್ರಾಮ ಹೊರವಲಯದಲ್ಲಿ 40 ಅಡಿ ಆಳದ ಬಾವಿಗೆ ಹೋರಿ ಬಿದ್ದಿದೆ. ಕಿರಣಗಿ ಗ್ರಾಮದ ರೈತ ಬಸಪ್ಪ ಎಂಬುವವರ ಹೋರಿ ಆಯತಪ್ಪಿ ಬಾವಿಗೆ ಬಿದ್ದಿತ್ತು. ತಕ್ಷಣ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಅಥಣಿ ಅಗ್ನಿಶಾಮಕ ಠಾಣೆ ಅಧಿಕಾರಿ ರಾಜು ತಳವಾರ ಕಾರ್ಯಪ್ರವೃತ್ತರಾಗಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಸತತ ಮೂರು ಗಂಟೆ ಕಾಲ ಕಾರ್ಯಾಚರಣೆ ಮೂಲಕ ಬಾವಿಗೆ ಬಿದ್ದಿದ್ದ ಹೋರಿಯನ್ನ ಹೊರ ತೆಗೆಯಲಾಗಿದೆ. ಬಾವಿಯಲ್ಲಿ ನೀರು ಇದ್ದಿದ್ದರಿಂದ ಹೋರಿಗೆ ಯಾವುದೇ ರೀತಿ ಅಪಾಯ ಆಗಿಲ್ಲ.
ಇದನ್ನೂ ಓದಿ: