ಸರ್ಕಾರಿ ನೌಕರಿಗೆ ವಿಡಿಯೊ ಬ್ಲಾಕ್​ಮೇಲ್: ಲಕ್ಷಗಟ್ಟಲೆ ಹಣಕ್ಕೆ ಆರೋಪಿಯಿಂದ ಬೇಡಿಕೆ

ಪೊಲೀಸರಿಗೆ 11 ಸಾವಿರ ಕೋಟಿ ಮೀಸಲಿಟ್ಟು ವಸತಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. 20 ಸಾವಿರ ಪೊಲೀಸರಿಗೆ ವಸತಿ ಸೌಕರ್ಯ ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸರ್ಕಾರಿ ನೌಕರಿಗೆ ವಿಡಿಯೊ ಬ್ಲಾಕ್​ಮೇಲ್: ಲಕ್ಷಗಟ್ಟಲೆ ಹಣಕ್ಕೆ ಆರೋಪಿಯಿಂದ ಬೇಡಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 20, 2022 | 1:33 PM

ಬೆಂಗಳೂರು: ಸರ್ಕಾರಿ ನೌಕರನ ಸೆಕ್ಸ್ ವಿಡಿಯೋ ಇದೆ ಎಂದು ಬೆದರಿಸಿ ಬ್ಲಾಕ್ ಮೇಲ್ (Black mail) ಮಾಡುತ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಲಾಯರ್ ಜಗದೀಶ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಸೇರಿ ಮೂವರನ್ನು ಬಂಧಿಸಿಲಾಗಿದೆ. ಗಣಪತಿ ನಾಯಕ್, ಕಿಶನ್ ಮತ್ತು ಕೇಶವನ್ ಬಂಧಿತ ಅರೋಪಿಗಳು. ಆರೋಪಿಗಳ ಪೈಕಿ ಗಣಪತಿ ನಾಯಕ್ ಲಾಯರ್ ಜಗದೀಶ್ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ. ಕೋಲಾರದಲ್ಲಿ ಕೆಲಸ ಮಾಡುವ ಶಿರಸ್ತೆದಾರ ಜೊತೆಗೆ ಯುವತಿ ಓರ್ವಳ ಪರಿಚಯ ಆಗಿದೆ. ಇಬ್ಬರು ಸಲುಗೆಯಿಂದ ಇದ್ದಾರೆ. ನಂತ್ರ ಇಬ್ಬರು ಸಂಬಂಧ ಇಟ್ಟುಕೊ‌ಂಡಿದ್ದಾರೆ. ಈ ವೇಳೆ ಯುವತಿ ಖಾಸಗಿ ಕ್ಷಣದ ವಿಡಿಯೋ ರೆಕಾರ್ಡ್ ಮಾಡಿದ್ದಾಳೆ‌. ನಂತರ ಆ ವಿಡಿಯೋವನ್ನು ಕಿಶನ್​ಗೆ ಯುವತಿ ನೀಡಿದ್ದಾಳೆ. ವಿಡಿಯೋ ವಾಟ್ಸಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಕಿಶನ್, ಗಣಪತಿ ನಾಯಕ್ ಅಂಡ್ ಟೀಮ್, ಬಳಿಕ ಇಪ್ಪತ್ತೈದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಮಾಡಲಾಗಿದೆ. ಇಲ್ಲಾವಾದ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಹೇಳಿದ್ದಾರೆ. ನಂತರ ಹೆದರಿದ ದೂರುದಾರ ಕೆ. ಆರ್. ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಅನ್ವಯ ಮೂವರ ಅರೆಸ್ಟ್ ಮಾಡಲಾಗಿದ್ದು, ಸದ್ಯ ಯುವತಿ ಇನ್ನೂ ಪತ್ತೆಯಾಗಿಲ್ಲಾ. ಕೆಆರ್ ಪುರಂ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಯಶವಂತಪುರ ಕ್ಷೇತ್ರದಲ್ಲಿ 4 ಪೊಲೀಸ್ ಠಾಣೆಯನ್ನು ವರ್ಚುವಲಾಗಿ ಉದ್ಘಾಟಿಸಿದ; ಆರಗ ಜ್ಞಾನೇಂದ್ರ: 

ಪೊಲೀಸರಿಗೆ 11 ಸಾವಿರ ಕೋಟಿ ಮೀಸಲಿಟ್ಟು ವಸತಿ ಕಟ್ಟಡ ನಿರ್ಮಾಣ ಮಾಡುತ್ತಿದ್ದೇವೆ. 20 ಸಾವಿರ ಪೊಲೀಸರಿಗೆ ವಸತಿ ಸೌಕರ್ಯ ನೀಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಯಶವಂತಪುರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಗ್ಗಲೀಪುರ, ಕುಂಬಳಗೋಡು, ತಾವರೆಕೆರೆ, ತಲಘಟ್ಟಪುರ ಪೊಲೀಸ್ ಠಾಣೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 200 ಕೋಟಿ ಅನುದಾನದಲ್ಲಿ ಹೊಸ ಪೊಲೀಸ ಕಟ್ಟಡ ನಿರ್ಮಾಣಲಾಗುತ್ತಿದೆ. ಪೊಲೀಸರು ಸಧೃಡವಾಗಿ ಕೆಲಸ ಮಾಡುವ ವ್ಯವಸ್ಥೆಯನ್ನು ಸರ್ಕಾರ ನಿರ್ಮಿಸುತ್ತಿದೆ. ತಾತ್ಕಾಲಿಕ ಕಟ್ಟಡ ಇರುವ ಕಡೆ ಹೊಸ ಪೋಲಿಸ್ ಠಾಣೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:

ಕಾಡಾನೆ ಕೊಂದು ದಂತ ಮಾರುವ ವೇಳೆ ಸಿಕ್ಕಿಬಿದ್ದ ಆರೋಪಿಗಳು: ಆನೆ ಕಳೇಬರ ಹೊರತೆಗೆದು ಮರಣೋತ್ತರ ಪರೀಕ್ಷೆ!

‘ದಿ ಕಾಶ್ಮೀರ್​ ಫೈಲ್ಸ್​’ 200 ಕೋಟಿ ರೂ. ಗಳಿಸೋದು ಖಚಿತ; ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರದ್ದೇ ಆರ್ಭಟ

Published On - 1:32 pm, Sun, 20 March 22