ಪಿತ್ರಾರ್ಜಿತ ಆಸ್ತಿ ಕೇಳಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ; ನೀರು, ಕೆಲಸ, ದಿನಸಿಯೂ ಕೊಡದಂತೆ ಸೂಚನೆ
ಗ್ರಾಮದ ಮುಖಂಡರ ವಿರುದ್ಧ ಶಿಕ್ಷೆ ನೀಡಿದರೆಂದು ಹೀಗೆ ಮಾಡಲಾಗಿದೆ. ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ ವಿಧಿಸಲಾಗಿದೆ. ನದಿಯಿಂದ ನೀರು ತರುವಂತಿಲ್ಲ, ಕೆಲಸವೂ ನೀಡಲ್ಲ, ಗ್ರಾಮದ ಅಂಗಡಿಗಳಲ್ಲಿ ದಿನಸಿ ಕೊಡದಂತೆ ಸೂಚನೆ ಕೊಡಲಾಗಿದೆ.
ಮೈಸೂರು: ಪಿತ್ರಾರ್ಜಿತ ಆಸ್ತಿ ಕೇಳಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ ನೀಡಿದ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ದೊಡ್ಡಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಪಿತ್ರಾರ್ಜಿತ ಆಸ್ತಿ ತಮಗೆ ಸೇರಬೇಕೆಂದು ಠಾಣೆಗೆ ದೂರು ನೀಡಿದ್ದರು. ಗ್ರಾಮದ ಮುಖಂಡರ ವಿರುದ್ಧ ದೂರು ನೀಡಿದ್ದರು. ಗ್ರಾಮದ ಮುಖಂಡರ ವಿರುದ್ಧ ಶಿಕ್ಷೆ ನೀಡಿದರೆಂದು ಹೀಗೆ ಮಾಡಲಾಗಿದೆ. ಮೂರು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಶಿಕ್ಷೆ ವಿಧಿಸಲಾಗಿದೆ. ನದಿಯಿಂದ ನೀರು ತರುವಂತಿಲ್ಲ, ಕೆಲಸವೂ ನೀಡಲ್ಲ, ಗ್ರಾಮದ ಅಂಗಡಿಗಳಲ್ಲಿ ದಿನಸಿ ಕೊಡದಂತೆ ಸೂಚನೆ ಕೊಡಲಾಗಿದೆ.
ಅಷ್ಟೇ ಅಲ್ಲದೆ 3 ಕುಟುಂಬಗಳ ಜೊತೆ ಮಾತನಾಡಿದರೆ 3,000 ದಂಡ ಎಂದು ಹೇಳಲಾಗಿದೆ. ಕೊಂತಯ್ಯನಹುಂಡಿಯ ಗುರುಮಲ್ಲಪ್ಪ, ಪರಶಿವಪ್ಪ, ಮಹದೇವಪ್ಪ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಅನ್ಯಾಯದ ವಿರುದ್ಧ ಹೋರಾಡಿದ್ದಕ್ಕೆ ಬಹಿಷ್ಕಾರದ ಶಿಕ್ಷೆ ಆರೋಪ ಕೇಳಿಬಂದಿದೆ.
ಮೂವರು ಸಹೋದರರಿಗೆ ಗ್ರಾಮದಲ್ಲಿ ಪಿತ್ರಾರ್ಜಿತ ಜಮೀನಿತ್ತು. ಅತಿಕ್ರಮ ಪ್ರವೇಶ ಮಾಡಿದ ಗ್ರಾಮದ ಮುಖಂಡರ ವಿರುದ್ಧ ದೂರು ನೀಡಿದ್ದರು. ಮೂರು ವರ್ಷಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದರಿಂದ ಮುಖಂಡರು ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಯಗಚಿ ನಾಲೆಗೆ ನೆಲೆ ಕಳೆದುಕೊಂಡ 22 ಕುಟುಂಬಗಳಿಗೆ ನಿವೇಶನ ನೀಡಲು ಒತ್ತಾಯ
ಹಾಸನ: ಯಗಚಿ ನಾಲೆಗೆ ನೆಲೆ ಕಳೆದುಕೊಂಡ 22 ಕುಟುಂಬಗಳಿಗೆ ನಿವೇಶನ ನೀಡಲು ಒತ್ತಾಯ ಕೇಳಿಬಂದಿದೆ. ಹಾಸನ ಡಿಸಿ ಕಛೇರಿ ಎದುರು ಸಂತ್ರಸ್ಥ ಕುಟುಂಬ ಸದಸ್ಯರು ಧರಣಿ ನಡೆಸಿದ್ದಾರೆ. ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ. ಮುವತ್ತು ವರ್ಷಗಳ ಹಿಂದೆ ಯಗಚಿ ನಾಲೆ ನಿರ್ಮಾಣ ವೇಳೆ ಮನೆ ಕಳೆದುಕೊಂಡಿರುವ ಕುಟುಂಬಗಳು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿವೆ. ನಿವೇಶನಕ್ಕಾಗಿ ಸರ್ಕಾರಿ ಭೂಮಿ ಕಾಯ್ದಿರಿಸಿದರು ಹಂಚಿಕೆ ಮಾಡದ ಆರೋಪ ಕೇಳಿಬಂದಿದೆ. ಮನೆ ಇಲ್ಲದೆ ಗುಡಿಸಲಿನಲ್ಲಿ ವಾಸವಾಗಿರೋ ಕುಟುಂಬಗಳು ಕೂಡಲೆ ಮನೆ ನಿವೇಶನ ನೀಡಲು ಆಗ್ರಹಿಸಿ ಧರಣಿ ನಡೆಸಿದ್ದಾರೆ. ಡಿಸಿ ಕಛೇರಿ ಎದುರು ಧರಣಿ ನಡೆಸಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಕೆ ಮಡಲಾಗಿದೆ.
ಮೈಸೂರು: ಇತ್ತ ಮೈಸೂರಿನ ಬೆಳವಾಡಿ ಗ್ರಾಮದ ಕೆರೆಯಲ್ಲಿ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಗರ್ಭಿಣಿ ಅಶ್ವಿನಿ ಶವ ಪತ್ತೆ ಆಗಿದೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರು: ಮನೆಯಲ್ಲಿ ಆಕಸ್ಮಿಕ ಬೆಂಕಿಗೆ ವ್ಯಕ್ತಿ ಸಜೀವದಹನ! ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಇದನ್ನೂ ಓದಿ: ಮೈಸೂರು ಲ್ಯಾಂಪ್ನ 22.50 ಎಕರೆ ಜಮೀನು ಖಾಸಗಿಯವರಿಗೆ ಏಕೆ ಹಸ್ತಾಂತರ ಮಾಡಿದ್ದೀರಿ: ಕೆ.ಟಿ.ಶ್ರೀಕಂಠೇಗೌಡ
Published On - 1:28 pm, Mon, 21 March 22