ಹಿರಿಯ ಅಧಿಕಾರಿಗಳಿಂದ ಬಿಬಿಎಂಪಿ ಮಾರ್ಷ್​​ಗಳ ದುರಪಯೋಗ: ವೈಯಕ್ತಿಕ ಕಾರ್ಯಗಳಿಗೆ ಬಳಕೆ

|

Updated on: Apr 12, 2023 | 11:38 AM

ಬಿಬಿಎಂಪಿ ಮಾರ್ಷ್​​ಲ್​ಗಳನ್ನು ಹಿರಿಯ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿರಿಯ ಅಧಿಕಾರಿಗಳಿಂದ ಬಿಬಿಎಂಪಿ ಮಾರ್ಷ್​​ಗಳ ದುರಪಯೋಗ: ವೈಯಕ್ತಿಕ ಕಾರ್ಯಗಳಿಗೆ ಬಳಕೆ
ಬಿಬಿಎಂಪಿ ಮಾರ್ಷಲ್ಸ್​​​
Follow us on

ಬೆಂಗಳೂರು: ಕೊರೊನಾ (Covid) ಅವಧಿಯಲ್ಲಿ ವಾರಿಯರ್ಸ್​​​ ಜೊತೆಗೆ ಕೆಲಸ ಮಾಡಿದ್ದ, ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (BBMP) ಮಾರ್ಷಲ್ಸ್​​ಗಳನ್ನು, ಈಗ ಪ್ಲಾಸ್ಟಿಕ್ ಬ್ಯಾನ್ ಹಾಗೂ ಮಾಸ್ಕ್ ಹಾಕುವುದು, ರಸ್ತೆಯಲ್ಲಿ ಕಸಹಾಕುವವರ ಮೇಲೆ ನಿಗಾ ಇಡಲು ನೇಮಿಸಲಾಗಿದೆ. ಈ ಮಾರ್ಷ್​​ಲ್​ಗಳನ್ನು ಹಿರಿಯ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಈ ಮಾರ್ಷಲ್​​ಗಳನ್ನು ಕೆಲ ಹಿರಿಯ ಅಧಿಕಾರಿಗಳು ತಮ್ಮ ಭದ್ರತಾ ಸಿಬ್ಬಂದಿಯಾಗಿ ನೇಮಿಸಿಕೊಂಡಿದ್ದಾರೆ. ಅಲ್ಲದೇ ಊಟದ ಡಬ್ಬ ಮತ್ತು ಫೈಲ್​ಗಳನ್ನು ಸರಬರಾಜು ಮಾಡಲು ಬಳಸಲಾಗುತ್ತಿದೆ. ಬಿಬಿಎಂಪಿಯ ನಿಯಮದ ವಿರುದ್ಧವಾಗಿ ಹಣಕಾಸು ಇಲಾಖೆಯ ಆಯುಕ್ತರು, ಆರ್​ಆರ್​ನಗರದ ವಲಯ ಆಯುಕ್ತರು ಇವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಈ ಮಾರ್ಷಲ್​​​ಗಳನ್ನು ಕರ್ನಾಟಕ ಮಾಜಿ ಸೈನಿಕರ ಕಲ್ಯಾಣ ಸಂಘದಿಂದ ನೇಮಕ ಮಾಡಿಕೊಳ್ಳಲಾಗಿದ್ದು, ಇವರನ್ನು ಬಿಬಿಎಂಪಿ ಅಧಿಕಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 2019ರಲ್ಲಿ ಬಿಬಿಎಂಪಿ ಈ ಮಾರ್ಷಲ್ಸ್​​ಗಳನ್ನು ನೇಮಕ ಮಾಡಿಕೊಂಡಿತ್ತು. ಸದ್ಯ ಬಿಬಿಎಂಪಿಯಲ್ಲಿ 500 ಜನ ಮಾರ್ಷ್​​ಲ್ಸ್​​ಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ತಮ್ಮ ಏರಿಯಾದ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಮಾದರಿಯಾದ ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು

ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲು ಪ್ರಾಯೋಗಿಕ ಆಧಾರದ ಮೇಲೆ 2017 ರಲ್ಲಿ, ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಿಸಿಕೊಳ್ಳಲು ಯೋಚನೆ ಮಾಡಿತು. 8.3 ಕೋಟಿ ರೂ. ವಾರ್ಷಿಕ ವೇತನದೊಂದಿಗೆ 240 ಮಾರ್ಷಲ್‌ಗಳನ್ನು ಒದಗಿಸುವಂತೆ ಮಾಜಿ ಸೈನಿಕರ ಕಲ್ಯಾಣ ಸೊಸೈಟಿಯೊಂದಿಗೆ, ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ 2019 ರಲ್ಲಿ ಪ್ರಸ್ತಾವನೆ ಜಾರಿಗೆ ತರಲಾಯಿತು.

BBMPಯು ಕೊರೊನಾ ನಿರ್ವಹಣೆ, ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಗಳು, ಪೌರಕಾರ್ಮಿಕರು ಮತ್ತು ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಹಾಜರಾತಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾವಲು, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಕಾವಲು ಮುಂತಾದ ವೈವಿಧ್ಯಮಯ ಕಾರ್ಯಗಳಿಗೆ ಮಾರ್ಷಲ್‌ಗಳನ್ನು ನೇಮಿಸಿಕೊಂಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Wed, 12 April 23