AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಗಾರಿ ಹೆಸರಲ್ಲಿ ಗುಂಡಿ ತೋಡಿ ಮಣ್ಣನ್ನು ಅಲ್ಲೇ ಗುಡ್ಡೆ ಹಾಕುತ್ತಿರುವ ಬಿಬಿಎಂಪಿ, ಧೂಳಿನಿಂದ ಸವಾರರು ಪರದಾಟ

ಬಿಬಿಎಂಪಿಯು ವಾರಗಟ್ಟಲೆ ರಸ್ತೆಬದಿಯಲ್ಲಿರುವ ಚರಂಡಿಗಳಿಂದ ತೆಗೆದ ಕೊಳಕು ತ್ಯಾಜ್ಯವನ್ನು ತೆರವು ಮಾಡದೇ ಅಲ್ಲಲ್ಲೇ ಬಿಡಲಾಗುತ್ತಿದೆ. ಹಾಘೂ ಕಾಮಗಾರಿಗಳಿಗಾಗಿ ಗುಂಡಿ ತೆಗೆದು ಮಣ್ಣನ್ನು ಗುಡ್ಡೆ ಹಾಕಲಾಗುತ್ತಿದೆ.

ಕಾಮಗಾರಿ ಹೆಸರಲ್ಲಿ ಗುಂಡಿ ತೋಡಿ ಮಣ್ಣನ್ನು ಅಲ್ಲೇ ಗುಡ್ಡೆ ಹಾಕುತ್ತಿರುವ ಬಿಬಿಎಂಪಿ, ಧೂಳಿನಿಂದ ಸವಾರರು ಪರದಾಟ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on: Apr 12, 2023 | 10:39 AM

Share

ಬೆಂಗಳೂರು ನಗರ ಅನೇಕ ಸಮಸ್ಯೆಗಳ ಆಗರವಾಗಿದೆ. ಲಕ್ಷಾಂತರ ಮಂದಿಗೆ ಜೀವನಾಧಾರವಾದ ಮಹಾನಗರದಲ್ಲಿ ಜನ ಪ್ರತಿದಿನ ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕುಕಟ್ಟಿಕೊಳ್ಳಬೇಕಿದೆ. ಟ್ರಾಫಿಕ್ ಸಮಸ್ಯೆ, ನೀರಿನ ಸಮಸ್ಯೆ, ರಸ್ತೆ ಸಮಸ್ಯೆ, ಮನೆ ಹುಡುಕುವ ಸಮಸ್ಯೆ, ಬೆಲೆ ಏರಿಕೆ ಹೀಗೆ ಸಮಸ್ಯೆಗಳ ಸರ ಮಾಲೆಯೇ ಇದೆ. ಆದ್ರೆ ನಾವೀಗ ಹೇಳಲು ಹೊರಟಿರುವುದು ಚರಂಡಿ ಕ್ಲೀನ್ ಮಾಡಿದಾಗ ಈ ಕೊಳಕು ಕಸವನ್ನು ವಿಲೇವಾರಿ ಮಾಡದೇ ಅಲ್ಲೆ ಬಿಡುವುದರ ಬಗ್ಗೆ. ಬಿಬಿಎಂಪಿಯು ವಾರಗಟ್ಟಲೆ ರಸ್ತೆಬದಿಯಲ್ಲಿರುವ ಚರಂಡಿಗಳಿಂದ ತೆಗೆದ ಕೊಳಕು ತ್ಯಾಜ್ಯವನ್ನು ತೆರವು ಮಾಡದೇ ಅಲ್ಲಲ್ಲೇ ಬಿಡಲಾಗುತ್ತಿದೆ. ಹಾಘೂ ಕಾಮಗಾರಿಗಳಿಗಾಗಿ ಗುಂಡಿ ತೆಗೆದು ಮಣ್ಣನ್ನು ಗುಡ್ಡೆ ಹಾಕಲಾಗುತ್ತಿದೆ. ಇದರಿಂದ ಹಲವಾರು ನಗರಗಳು ಧೂಳಿನಿಂದ ಮಾರ್ಪಟ್ಟಿವೆ. ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.

ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ವಾಹನಗಳು ಚಲಿಸುವಾಗ ನುಗ್ಗುವ ಧೂಳಿನಿಂದ ಅಂಗಡಿ ಮಾಲೀಕರು ಹಾಗೂ ನಿವಾಸಿಗಳು ಪರದಾಡುವಂತಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾಮಾನ್ಯವಾಗಿ ದಿನದ ಕೆಲಸ ಮುಗಿದ ನಂತರ ಚರಂಡಿಯಿಂದ ಹೊರತೆಗೆದ ತ್ಯಾಜ್ಯವನ್ನು, ಕಾಮಗಾರಿ ಮಾಡುವಾಗ ತೆಗೆದ ಮಣ್ಣನ್ನು ವಿಲೇವಾರಿ ಮಾಡದೆ ರಸ್ತೆ ಬದಿಯಲೇ ಗುಡ್ಡೆ ಹಾಕುತ್ತಿದೆ.

ಹೊರವರ್ತುಲ ರಸ್ತೆ, ಕಸವನಹಳ್ಳಿ ರಸ್ತೆ, ಸರ್ಜಾಪುರ ರಸ್ತೆ, ದೇವೇಗೌಡ ರಸ್ತೆ, ದಿನ್ನೂರು ಮುಖ್ಯರಸ್ತೆ, ಆರ್‌ಟಿ ನಗರ ಮುಖ್ಯರಸ್ತೆ, ರಾಚೇನಹಳ್ಳಿ ರಸ್ತೆ, ಥಣಿಸಂದ್ರ ರಸ್ತೆ, ಇಂದಿರಾನಗರ 12ನೇ ಮುಖ್ಯರಸ್ತೆ, ವಿದ್ಯಾರಣ್ಯಪುರ, ಹೊಸ ತಿಪ್ಪಸಂದ್ರ ಮತ್ತು ಹೆಚ್‌ಬಿಆರ್ ಲೇಔಟ್​ಗಳಲ್ಲಿ ತ್ಯಾಜ್ಯಗಳನ್ನು ತೆರವುಗೊಳಿಸಿಲ್ಲ.

ಇದನ್ನೂ ಓದಿ: Bengaluru: ತಮ್ಮ ಏರಿಯಾದ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಮಾದರಿಯಾದ ಬ್ರೂಕ್‌ಫೀಲ್ಡ್ ಲೇಔಟ್ ನಿವಾಸಿಗಳು

ಒಟ್ಟು 4,000 ಕೋಟಿ ರೂ ವೆಚ್ಚದ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಬೃಹತ್ ಯೋಜನೆಯ ಭಾಗವಾಗಿ ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ ನಗರವನ್ನು ಸ್ವಚ್ಛವಾಗಿ ಇಡುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಗಳು ನಗರದಾದ್ಯಂತ 2,500 ಕಿಲೋಮೀಟರ್‌ಗಳಷ್ಟು ವಿಸ್ತಾರವಾದ ರಸ್ತೆ ಡಾಂಬರೀಕರಣ ಮತ್ತು ಫುಟ್‌ಪಾತ್ ಸುಧಾರಣೆಗಳನ್ನು ಒಳಗೊಂಡಿವೆ. ಆದಾಗ್ಯೂ, ಸಮಗ್ರ ಕಾರ್ಯವು ಮುಂದುವರೆದಂತೆ, ಇಡೀ ನಗರವು ಅಂದವನ್ನು ಕಳೆದುಕೊಂಡಿದೆ. ರಸ್ತೆಗೆ ಸಂಬಂಧಿಸಿದ ಕಾಮಗಾರಿಗಳು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ನಂತರ ಎಲ್ಲವೂ ಸರಿಯಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿಯು ತರಳಬಾಳು ರಸ್ತೆಯನ್ನು ವೈಟ್ ಟಾಪಿಂಗ್ ಮಾಡುತ್ತಿದೆ, ಆದರೆ ಪ್ರಗತಿ ನಿಧಾನವಾಗಿದೆ ಎಂದು ಆರ್‌ಟಿ ನಗರದ ನಿವಾಸಿಯೊಬ್ಬರು ಬೇಸರ ವ್ಯಕ್ತಪಡಿಸಿದರು. ನನಗೆ ಧೂಳಿನಿಂದ ಅಲರ್ಜಿ ಇದೆ, ಆದರೆ ಮಾಲಿನ್ಯವನ್ನು ಹೊರಹಾಕದೆ ಹೇಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿಗೆ ತಿಳಿದಿಲ್ಲ. ನಿರ್ಮಾಣ ಹಂತದಲ್ಲಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಮಾಲಿನ್ಯ ಹೆಚ್ಚುತ್ತಿದೆ’ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!