AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಪತ್ತೆ

ಬಿಜೆಪಿ ಚುನಾವಣೆ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಇದ್ದ ಟಾಟಾ ಏಸ್ ವಾಹನ ಪತ್ತೆಯಾಗಿದೆ.

ಬಿಜೆಪಿ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಪತ್ತೆ
ನಕಲಿ ನಂಬರ್​ ಪ್ಲೇಟ್​ ವಾಹನ
ವಿವೇಕ ಬಿರಾದಾರ
|

Updated on:Apr 12, 2023 | 12:27 PM

Share

ಬೆಂಗಳೂರು: ರಾಜ್ಯದಲ್ಲಿ ನೀತಿ ಸಂಹಿತೆ (Model Code Conduct) ಜಾರಿಯಾದಾಗಿನಿಂದ ಚುನಾವಣಾ ಅಧಿಕಾರಿಗಳು ರಾಜಕೀಯ ನಾಯಕರು ಹಾಗೂ ಅವರ ವಾಹನ ಮತ್ತು ಪಕ್ಷದ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇದರಂತೆ ಈಗಾಗಲೇ ಹಲವು ನಾಯಕರ ವಾಹನಗಳನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಇದೀಗ ಬಿಜೆಪಿ (BJP) ಚುನಾವಣೆ ಪ್ರಚಾರಕ್ಕಾಗಿ ಬಳಸುತ್ತಿದ್ದ ನಕಲಿ ನಂಬರ್ ಪ್ಲೇಟ್ ಇದ್ದ ಟಾಟಾ ಏಸ್ ವಾಹನ ಪತ್ತೆಯಾಗಿದೆ. ಚುನಾವಣಾಧಿಕಾರಿಗಳು ಪರಿಶೀಲಿಸಿದಾಗ ಅನುಮತಿ ಪಡೆದ ವಾಹನ ಹಾಗೂ ಪ್ರಚಾರಕ್ಕೆ ಬಳಸುತ್ತಿದ್ದ ವಾಹನ ಬೇರೆಯಾಗಿತ್ತು. ಬಳಿಕ ನಂಬರ್ ಪ್ಲೇಟ್ ಚಾರ್ಸಿ ಸಂಖ್ಯೆಯನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆ ವಾಹನಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ್ದಾರೆಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಚುನಾವಾಣಾಧಿಕಾರಿಗಳಿಂದ ಶೇಷಾದ್ರಿಪುರ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ. ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 1988 ಕಾಯ್ದೆಯಡಿ ವಿಶ್ವ ಮತ್ತು ಅರ್ಜುನ್ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 12:27 pm, Wed, 12 April 23