AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!

Nailing trees in BBMP parks: ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ.

ಮರಗಳಿಗೆ ಮೊಳೆ ಹೊಡೆಯುತ್ತಿದ್ದರೂ ಕುರುಡಾಗಿರುವ ಬಿಬಿಎಂಪಿ, ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
ಬಿಬಿಎಂಪಿ ಪಾಲಿಕೆಯ ಪಾರ್ಕ್​ನಲ್ಲೇ ರೂಲ್ಸ್ ಬ್ರೇಕ್!
ಸಾಧು ಶ್ರೀನಾಥ್​
|

Updated on: May 18, 2024 | 11:08 AM

Share

ರಾಜ್ಯ ರಾಜಧಾನಿ ಬೆಂಗಳೂರಿನ ಅಂದವನ್ನು ಹೆಚ್ಚಿಸೋ ಮರಗಳಿಗೆ ಇದೀಗ ಪಾಲಿಕೆಯಿಂದಲೇ ಕುತ್ತು ಬಂದಿದೆ ಅನ್ನೋ ಆರೋಪ ದೃಶ್ಯಾಂತವಾಗಿ ಕಾಣಿಬರುತ್ತಿದೆ. ಮರಗಳಿಗೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಮಾಡಿದ್ದ ಪಾಲಿಕೆಯೇ ಇದೀಗ ತಮ್ಮ ವ್ಯಾಪ್ತಿಯ ಪಾರ್ಕ್ ನಲ್ಲಿ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದರೂ ಸೈಲೆಂಟ್ ಆಗಿರೋದಕ್ಕೆ ಪರಿಸರಪ್ರೇಮಿಗಳು ಕಿಡಿಕಾರುತ್ತಿದ್ದಾರೆ. ವೃಕ್ಷೋ ರಕ್ಷತಿ ರಕ್ಷಿತಃ ಅಂತಾ ಪಾಠ ಹೇಳೋ ಪಾಲಿಕೆ ಬೆಂಗಳೂರಿನ ಹಲವೆಡೆ ಪಾರ್ಕ್ ಗಳ ನಿರ್ಮಾಣದ ಮೂಲಕ ಮರ ಬೆಳಸಿ ಅನ್ನೋ ಸಂದೇಶ ನೀಡ್ತಿದೆ. ಬೆಂಗಳೂರಿನ ರಸ್ತೆ ಬದಿಯಲ್ಲಿರೋ ಮರಗಳಿಗೆ ಜಾಹೀರಾತು ಫಲಕ ಅಥವಾ ಬೇರೆ ಉದ್ದೇಶಕ್ಕೆ ಮೊಳೆ ಹೊಡೆಯಬಾರದು ಅಂತಾ ರೂಲ್ಸ್ ಕೂಡ ಮಾಡಿದೆ. ಆದ್ರೆ ಇದೀಗ ಗಿರಿನಗರದಲ್ಲಿರೋ ರಾಮಕೃಷ್ಣ ಉದ್ಯಾನವನ ಅಂತಾ ಕರೆಯಲ್ಪಡುವ ವಿವೇಕಾನಂದ ಪಾರ್ಕ್ ನಲ್ಲಿ ವಿದ್ಯುತ್ ದೀಪ ಹಾಕೋಕೆ ನೂರಾರು ಮರಗಳಿಗೆ ಮೊಳೆ ಹೊಡೆದಿದ್ದು ಪರಿಸರ ಪ್ರೇಮಿಗಳನ್ನ ಕೆರಳಿಸಿದೆ (Nailing trees in BBMP parks).

ಪಾರ್ಕ್ ನಲ್ಲಿರೋ ಮರಗಳ ಅಲಂಕಾರಕ್ಕೆ ಅಂತಾ ಪ್ರತಿ ಮರದಲ್ಲೂ 100 ವೋಲ್ಟ್ ಸಾಮರ್ಥ್ಯದ ವಿದ್ಯುತ್ ದೀಪ (BBMP Lighting) ಅಳವಡಿಸಲಾಗಿದೆ. ವಿದ್ಯುತ್ ದೀಪ ಹಾಗೂ ಜಂಕ್ಷನ್ ಬಾಕ್ಸ್ ಹಾಕಲು ಮರಗಳಿಗೆ ಮೊಳೆ ಹೊಡೆದಿದ್ದು, ಗುತ್ತಿಗೆದಾರರ ಯಡವಟ್ಟಿನಿಂದ ಮರಗಳ ಮೇಲೆ ಪರಿಣಾಮ ಬೀರ್ತಿದೆ. ಮೊಳೆಯಿಂದ ಮರಗಳಿಗೆ ಸೋಂಕು ತಗುಲೋದಲ್ಲದೇ, ಪಕ್ಷಿಗಳಿಗೂ ಎಫೆಕ್ಟ್ ತಟ್ಟುತ್ತೆ ಅಂತಿರೋ ಪರಿಸರ ಪ್ರೇಮಿಗಳು ಇದನ್ನ ಕೂಡಲೇ ತೆರವು ಮಾಡಲು ಆಗ್ರಹ ಮಾಡ್ತಿದ್ದಾರೆ.

ಇತ್ತ ಮರಗಳಿಗೆ ಮೊಳೆ ಹೊಡೆಬಾರದು ಅಂತಾ ರೂಲ್ಸ್ ಮಾಡಿರೋ ಪಾಲಿಕೆಯ ಅರಣ್ಯಾಧಿಕಾರಿಗಳು, ಪಾರ್ಕ್ ನಲ್ಲಿ ಮರಗಳಿಗೆ ಮೊಳೆ ಹೊಡೆದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ. ಅಲ್ಲದೇ ಯಾರೇ ಮರಗಳಿಗೆ ಹಾನಿ ಮಾಡಿದರೂ ಕ್ರಮ ತೆಗೆದುಕೊಳ್ತೀವಿ ಅಂತಾ ಜಿ.ಎಲ್.ಜಿ. ಸ್ವಾಮಿ, ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರುಗಳದ್ದೇ ಹವಾ! ಮಹಿಳಾ ಆಟೋ ಪ್ರಯಾಣಿಕರೂ ನಿರಾಳ

ಒಟ್ಟಿನಲ್ಲಿ ಗ್ರೀನ್ ಸಿಟಿ ಬೆಂಗಳೂರಿನ ಜನರಿಗೆ ಉಸಿರು ನೀಡ್ತಿರೋ ಮರಗಳಿಗೆ ಕೇಡು ಮಾಡುವವರ ಮೇಲೆ ಕ್ರಮ ಆಗಬೇಕಿದೆ. ಕಾಂಕ್ರೀಟ್ ಕಾಡಿನಲ್ಲಿ ಅಳಿದುಳಿದ ಮರಗಳನ್ನ ರಕ್ಷಿಸಲು ಪಾಲಿಕೆ ಜೊತೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ. ಸದ್ಯ ಮರಗಳಿಗೆ ಹೊಡೆದಿರೋ ಮೊಳೆಗಳ ತೆರವಿನ ಭರವಸೆ ನೀಡಿರೋ ಪಾಲಿಕೆ, ಆದಷ್ಟು ಬೇಗ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

(ವರದಿ: ಶಾಂತಮೂರ್ತಿ, ಟಿವಿ9, ಬೆಂಗಳೂರು)

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ