ಬೆಂಗಳೂರು, ಜೂ.20: ನಟ ದರ್ಶನ್ ಮತ್ತು ಗ್ಯಾಂಗ್ ಸೇರಿಕೊಂಡು ಚಿತ್ರದುರ್ಗದ ರೇಣುಕಾ ಸ್ವಾಮಿ(Renuka Swamy) ಎಂಬಾತನ ಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯು ಚುರುಕುಗೊಂಡಿದ್ದು, ದಿನದಿಂದ ದಿನಕ್ಕೆ ಹೊಸದೊಂದು ತಿರುವು ಪಡೆಯುತ್ತಿದೆ. ಅದರಂತೆ ಇಂದು(ಜೂ.20) ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಮಧ್ಯೆ ರೇಣುಕಾಸ್ವಾಮಿಯನ್ನ ಕೊಲೆ ನಡೆಸಲಾಗಿದೆ ಎನ್ನುವ ಜಾಗವಾದ ಪಟ್ಟಣಗೆರೆ ಶೆಡ್(Pattanagere shed) ಮಾಲೀಕರಿಗೆ ಬಿಬಿಎಂಪಿ ನೋಟೀಸ್ ನೀಡಿದೆ.
ಪಟ್ಟಣಗೆರೆ ಶೆಡ್ ಮಾಲೀಕ ಕೆ ಜಯಣ್ಣ ಅವರು ನಿಗದಿಯ ಜಾಗಕ್ಕೆ ಪಾಲಿಕೆಗೆ ಆಸ್ತಿ ತೆರಿಗೆಗೆ ಪಾವತಿಸಿಲ್ಲ. ಈ ಹಿನ್ನೆಲೆ ಆರ್ಆರ್ ನಗರ ವಲಯ ಸಹಾಯಕ ಕಂದಾಯ ಅಧಿಕಾರಿ ಕೆ ಜಯಣ್ಣಗೆ ನೋಟೀಸ್ ಜಾರಿ ಮಾಡಿದ್ದಾರೆ. ಹೌದು, 2008ರಿಂದ ಈ ಸ್ವತ್ತಿಗೆ ಇದುವರೆಗೂ ಕೂಡ ಆಸ್ತಿ ತೆರಿಗೆ ಪಾವತಿಯಾಗಿಲ್ಲ. ಈ ಹಿನ್ನೆಲೆ 15 ದಿನಗಳ ಅವಧಿಯ ಒಳಗಾಗಿ ಸಂಬಂಧಪಟ್ಟ ದಾಖಲೆ ಹಾಗೂ ಕಾರಣ ನೀಡುವಂತೆ ನೋಟೀಸ್ ನೀಡಿದ್ದಾರೆ.
ಇದನ್ನೂ ಓದಿ:ಕೊಲೆ ನಡೆದ ಸ್ಥಳದಲ್ಲಿ ದರ್ಶನ್ ಕರೆತಂದು ‘ಚಿತ್ರೀಕರಣ’! ಪಟ್ಟಣಗೆರೆ ಶೆಡ್‌ನಲ್ಲಿ 13 ಆರೋಪಿಗಳ ಸ್ಥಳ ಮಹಜರು
ಇನ್ನು ಈ ಹಿಂದೆ ಪ್ರಕರಣದ ಕುರಿತು ಮಾತನಾಡಿದ್ದ ಶೆಡ್ ಮಾಲೀಕ ಜಯಣ್ಣ, ‘ಇಲ್ಲಿ ಕೊಲೆ ನಡೆದಿರುವುದು ನನಗೆ ಮಾಧ್ಯಮಗಳ ಮೂಲಕ ತಿಳಿಯಿತು. ಇನ್ನು ಈ ಶೆಡ್ನ್ನು ನನ್ನ ತಂಗಿಯ ಮಗ ಕಿಶೋರ್ ಎಂಬುವವರಿಗೆ ಬಾಡಿಗೆ ನೀಡಲಾಗಿದೆ. ಈ ಕುರಿತು ಪೊಲೀಸರು ನನ್ನನ್ನು ವಿಚಾರಣೆಗೆ ಕರೆದರೆ ಎದುರಿಸಲು ಸಿದ್ದನಿದ್ದೇನೆ. ಪೊಲೀಸರು ಕಾನೂನು ರೀತಿ ಕ್ರಮಕೈಗೊಳ್ಳಲಿ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Thu, 20 June 24