AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಕಷ್ಟು ರಕ್ತ ನೋಡಿದೆ ಪಟ್ಟಣಗೆರೆ ಶೆಡ್, ದರ್ಶನ್​ಗೂ ಇದೆ ರೌಡಿಗಳ ನಂಟು

ರೇಣುಕಾ ಸ್ವಾಮಿಯನ್ನು ಹಿಂಸಿಸಿ ಕೊಂದ ಪಟ್ಟಣಗೆರೆ ಶೆಡ್​ನಲ್ಲಿ ಈ ಹಿಂದೆಯೂ ಹಲ್ಲೆ, ಬೆದರಿಕೆ, ಸೆಟಲ್​ಮೆಂಟ್​ನಂಥಹಾ ಪ್ರಕರಣಗಳು ನಡೆದಿದ್ದು, ದರ್ಶನ್​ಗೆ ಸಹ ಹಲವು ರೌಡಿ ಆಸಾಮಿಗಳೊಟ್ಟಿಗೆ ಸಂಪರ್ಕ ಇರುವ ವಿಷಯ ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಸಾಕಷ್ಟು ರಕ್ತ ನೋಡಿದೆ ಪಟ್ಟಣಗೆರೆ ಶೆಡ್, ದರ್ಶನ್​ಗೂ ಇದೆ ರೌಡಿಗಳ ನಂಟು
ಪಟ್ಟಣಗೆರೆ ಶೆಡ್
ಮಂಜುನಾಥ ಸಿ.
|

Updated on: Jun 19, 2024 | 12:37 PM

Share

ಬಡ ಮಧ್ಯಮ ಕುಟುಂಬದ, ಕೃಷ ದೇಹಿ, ರೇಣುಕಾ ಸ್ವಾಮಿಯನ್ನು (Renuka Swamy) ಅಮಾನುಷವಾಗಿ ಹಲ್ಲೆ ಮಾಡಿ ಕೊಲ್ಲಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿಸಿ, ಪಟ್ಟಣಗೆರೆ ಶೆಡ್​ಗೆ ಕರೆತಂದು ಅಲ್ಲಿ ದರ್ಶನ್ ಮತ್ತು ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗುತ್ತಿದೆ. ಅಪರಾಧ ನಡೆದ ಸ್ಥಳ ಪಟ್ಟಣಗೆರೆ ಶೆಡ್​ ಬಗ್ಗೆ ಈಗ ಹಲವು ವಿಷಯಗಳು ಹೊರಬರುತ್ತಿವೆ. ಆ ಶೆಡ್​ಗೆ ರಕ್ತ ಹೊಸದೇನೂ ಅಲ್ಲ ಎನ್ನಲಾಗುತ್ತಿದೆ. ಮಾತ್ರವಲ್ಲ ದರ್ಶನ್​ಗೂ ಸಹ ಹಿಂಸೆ ಹೊಸದಲ್ಲ ಎನ್ನುತ್ತಿದೆ ಪೊಲೀಸ್ ತನಿಖೆ.

ರೇಣುಕಾ ಸ್ವಾಮಿಯನ್ನು ಹೊಡೆದು ಕೊಲ್ಲಲಾದ ಪಟ್ಟಣಗೆರೆ ಶೆಡ್​ ನಲ್ಲಿ ಪೊಲೀಸರು ಸುಮಾರು ಐದು ದಿನ ತನಿಖೆ ಹಾಗೂ ಮಹಜರು ಕಾರ್ಯ ಮಾಡಿದ್ದಾರೆ. ಆರೋಪಿಗಳನ್ನು ಕರೆದೊಯ್ದು ಎರಡು ದಿನಗಳ ಕಾಲ ಮಹಜರು ಮಾಡಲಾಗಿತ್ತು, ಅಲ್ಲದೆ ಪೊಲೀಸರು ಸಹ ಪ್ರತ್ಯೇಕವಾಗಿ ತೆರಳಿ ಸಾಕ್ಷ್ಯ ಸಂಗ್ರಹದ ಕೆಲಸ ಮಾಡಿದ್ದರು. ಶೆಡ್​ನಲ್ಲಿರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದು, ಪೊಲೀಸರ ತನಿಖೆಯಿಂದ ಶೆಡ್​ನಲ್ಲಿ ನಡೆದಿರುವ ಇನ್ನಷ್ಟು ಹಲ್ಲೆ ಪ್ರಕರಣಗಳ ಮಾಹಿತಿ ಹೊರಬಿದ್ದಿದೆ.

ಪಟ್ಟಣಗೆರೆ ಜಯಣ್ಣ ಎಂಬುವರಿಗೆ ಸೇರಿದ ಈ ಶೆಡ್​ ಒಂದು ರೀತಿ ಸೆಟಲ್​ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ. ತಮಗಾಗದವರನ್ನು ಇದೇ ಶೆಡ್​ಗೆ ಕರೆದುಕೊಂಡು ಬಂದು ಹಲ್ಲೆ ಮಾಡುವ ಕಾರ್ಯವನ್ನು ಕೆಲವು ರೌಡಿ ಆಸಾಮಿಗಳು ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ನಟ ದರ್ಶನ್​ಗೂ ಈ ಶೆಡ್​ಗೂ ಹಳೆಯ ನಂಟಿದ್ದು, ದರ್ಶನ್​ಗೆ ಸಂಬಂಧಿಸಿದ ಕೆಲವು ಸೆಟಲ್​ಮೆಂಟ್ ವ್ಯವಹಾರಗಳು ಸಹ ಶೆಡ್​ನಲ್ಲಿ ನಡೆದಿವೆಯಂತೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೇಸ್: ದರ್ಶನ್ ಸ್ವ-ಇಚ್ಛಾ ಹೇಳಿಕೆ, ಕೊಲೆಯಲ್ಲಿ ತನ್ನ ಪಾತ್ರ ವಿವರಿಸಿದ ನಟ

ದರ್ಶನ್​ರ ಮೊಬೈಲ್ ಕರೆ ವಿವರಗಳ ತಪಾಸಣೆ ವೇಳೆ, ದರ್ಶನ್​ಗೆ ಹಲವು ರೌಡಿಗಳ ಜೊತೆ ನಂಟಿರುವ ವಿಷಯವೂ ಬೆಳಕಿಗೆ ಬಂದಿದೆ. ಹಲವು ಜಿಲ್ಲೆಗಳಲ್ಲಿ ದರ್ಶನ್​ಗೆ ರೌಡಿಗಳ ಪರಿಚಯ ಹಾಗೂ ಆಪ್ತ ಬಂಧ ಇದೆಯೆಂಬುದು ತಿಳಿದುಬಂದಿದೆ. ಅಲ್ಲದೆ ಈಗ ದರ್ಶನ್​ ಜೊತೆಗೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿನಯ್ ಎಂಬಾತ ರೌಡಿತನದಿಂದ ಪೊಲೀಸರಿಗೆ ಚಿರಪರಿಚಿತ. ಈ ಹಿಂದೆಯೂ ಸಹ ಕೆಲವರೊಟ್ಟಿಗೆ ಸೇರಿ ವ್ಯಕ್ತಿಯೊಬ್ಬರ ಮೇಲೆ ವಿನಯ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈಗ ದರ್ಶನ್ ಜೊತೆಗೆ ಆತನೂ ಸಹ ಜೈಲಿನಲ್ಲಿ ಬಂಧಿಯಾಗಿದ್ದಾನೆ.

ದರ್ಶನ್​ರ ಈ ಹಿಂದಿನ ಕೆಲವು ಪ್ರಕರಣಗಳು ಹಾಗೂ ಸಾರ್ವಜನಿಕವಾಗಿ ಅವರು ನಡೆದುಕೊಳ್ಳುವ, ಮಾತನಾಡಿರುವ ರೀತಿ, ಈಗ ನಡೆದಿರುವ ಪ್ರಕರಣಗಳು, ಅವರ ಸ್ನೇಹಿತರು ಮತ್ತು ಆಪ್ತ ವಲಯ ಇದನ್ನೆಲ್ಲ ಗಮನಿಸಿ ದರ್ಶನ್ ಮೇಲೆ ರೌಡಿ ಶೀಟ್ ತೆರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಪೊಲೀಸರು ಶೀಘ್ರವೇ ನಿರ್ಣಯ ಪ್ರಕಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!