ಬೀದಿ ಬದಿ ವ್ಯಾಪಾರಸ್ತರಿಗೆ ಶಾಕ್​​ ನೀಡಿದ ಬಿಬಿಎಂಪಿ ಅಧಿಕಾರಿಗಳು: ಬೆಂಗಳೂರಿನ ಹಲವೆಡೆ ಅಂಗಡಿ ತೆರವು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 17, 2023 | 3:01 PM

ಬಿಬಿಎಂಪಿಯಿಂದ ತೆರವು ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಾದ ಪಶ್ಚಿಮ, ಯಲಹಂಕ, ಆರ್.ಆರ್ ನಗರ ಮತ್ತು ದಕ್ಷಿಣ ವಲಯದಲ್ಲೂ ಬೀದಿ ಬದಿ ವ್ಯಾಪಾರಿಗಳ ಜೊತೆಗೆ ರಸ್ತೆ ಬಳಿ ನಿಲ್ಲಿಸಿರುವ ಬಿಡಿ ವಾಹನಗಳನ್ನು ಅಧಿಕಾರಿಗಳು ತೆರವು ಮಾಡಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಬೀದಿ ಬದಿ ವ್ಯಾಪಾರಸ್ತರಿಗೆ ಶಾಕ್​​ ನೀಡಿದ ಬಿಬಿಎಂಪಿ ಅಧಿಕಾರಿಗಳು: ಬೆಂಗಳೂರಿನ ಹಲವೆಡೆ ಅಂಗಡಿ ತೆರವು
ಬೀದಿ ಬದಿ ಅಂಗಡಿಗಳ ತೆರವು
Follow us on

ಬೆಂಗಳೂರು, ನವೆಂಬರ್​​​ 17: ಇತ್ತೀಚೆಗೆ ಬಿಬಿಎಂಪಿ (BBMP) ಬೀದಿಬದಿ ಅಂಗಡಿಗಳ ತೆರವು ಮಾಡಿ ವ್ಯಾಪಾರಿಗಳಿಗೆ ಶಾಕ್​ ನೀಡಿತ್ತು. ಇದೀಗ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ಬಿಬಿಎಂಪಿ ವ್ಯಾಪ್ತಿಯ ನಾಲ್ಕು ವಲಯಗಳಲ್ಲಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಪಶ್ಚಿಮ ವಲಯ, ಯಲಹಂಕ, ಆರ್.ಆರ್ ನಗರ ಮತ್ತು ದಕ್ಷಿಣ ವಲಯದಲ್ಲೂ ತೆರವು ಕಾರ್ಯಾಚರಣೆ ಮಾಡಾಗಿದೆ. ಪಶ್ಚಿಮ ವಲಯದ ವಿಜಯನಗರದ ಪೋಸ್ಟ್ ಆಫೀಸ್ ಮುಂಭಾಗ ರಸ್ತೆ, ಪುಟ್ ಪಾತ್ ಮೇಲೆ ಹಾಕಿರುವ ತಳ್ಳುವ ಗಾಡಿ ಮತ್ತು ಅಂಗಡಿಗಳ ತೆರವು ಮಾಡಲಾಗಿದೆ.

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಮೂವತ್ತು ವರ್ಷಗಳಿಂದ ಇದೇ ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಇದೀಗ ದಿಢೀರ್​​ ಬಂದು ಅಂಗಡಿಗಳನ್ನ ತೆರವು ಮಾಡುತ್ತಿದ್ದಾರೆ. ಇದೇ ವ್ಯಾಪರವನ್ನ ನಂಬಿಕೊಂಡು ನಮ್ಮ ಜೀವನ ನಡೆಯುತ್ತಿದೆ. ದಿಢೀರ್​ ಅಂಗಡಿ ತೆರವು ಮಾಡಿದರೆ ಜೀವನ ನಡೆಯೋದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕೆಂಗೇರಿ ಉಪನಗರದಲ್ಲೂ ಬೀದಿಬದಿ ಅಂಗಡಿಗಳ ತೆರವು

ಸಾವಿರಾರು ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದೇವೆ. ಕೈ‌ಮುಗಿದರು ಬಿಡುತ್ತಿಲ್ಲ. ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಬೀದಿ ಬದಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಂಬೆಳಗ್ಗೆ ಫೀಲ್ಡ್‌ಗೆ ಇಳಿದಿದ್ದ ಪಾಲಿಕೆ ಮಾರ್ಷಲ್ಸ್‌, ಫುಟ್‌ಪಾತ್‌ ಮೇಲೆ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದ 200 ಕ್ಕೂ ಹೆಚ್ಚು ವ್ಯಾಪಾರಿಗಳನ್ನ ತೆರವು ಮಾಡಿದ್ದಾರೆ. ಟ್ರ್ಯಾಕ್ಟರ್ ಸಮೇತವೇ ಬಂದಿದ್ದ ಅಧಿಕಾರಿಗಳು ತಳ್ಳೋಗಾಡಿಗಳನ್ನೆಲ್ಲಾ ತುಂಬಿಕೊಂಡು ಹೋಗಿದ್ದಾರೆ.

ಕಣ್ಣೀರು ಹಾಕಿದ ವೃದ್ಧೆ

ತಳ್ಳೋಗಾಡಿಗೆ ಚೈನ್‌ಕಟ್ಟಿ ನಿಲ್ಲಿಸಿದ್ದರು. ಆದರೆ ಅದೇ ಚೈನ್‌ಗಳನ್ನ ತುಂಡುಮಾಡಿ ತಳ್ಳೋಗಾಡಿಗಳನ್ನೆಲ್ಲಾ ಟ್ರ್ಯಾಕ್ಟರ್‌ಗೆ ಹಾಕಿಕೊಂಡು ಹೋಗಲಾಗಿದೆ. ಅದರಲ್ಲೂ ವೃದ್ಧ ದಂಪತಿ ಚಾಟ್ಸ್ ಮಾರಾಟ ಮಾಡ್ಕೊಂಡು ಬದುಕು ಸಾಗಿಸುತ್ತಿದ್ದರು. ಆದರೆ ಪಾಲಿಕೆ ಸಿಬ್ಬಂದಿ ಅವರ ಮೇಲೂ ಕರಣೆ ತೋರಲಿಲ್ಲ. ಗಾಡಿಯೊಳಗಿದ್ದ ವಸ್ತುಗಳನ್ನ ಹೊರಗೆ ಹಾಕಿ ತಳ್ಳೋಗಾಡಿಯನ್ನ ಸೀಜ್‌ ಮಾಡಿದ್ದಾರೆ. ನಮ್ಮ ನಿತ್ಯ ಊಟಕ್ಕೆ ಇದೇ ಆಧಾರ ಅಂತಾ ಹೇಳಿದರೂ ಬಿಡಲಿಲ್ಲ. ಹೀಗಾಗಿ ವೃದ್ಧ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಜಯನಗರ: ಬೀದಿಬದಿ ಅಂಗಡಿಗಳ ತೆರವು: ಬಿಬಿಎಂಪಿ ವಿರುದ್ಧ ವ್ಯಾಪಾರಸ್ಥರ ಆಕ್ರೋಶ

ರಸ್ತೆ ಪಕ್ಕದಲ್ಲಿ ಎಳೆನೀರು ಮಾರಾಟ ಮಾಡ್ತಿದ್ದವರಿಗೂ ಒತ್ತುವರಿ ತೆರವಿನ ಬಿಸಿ ತಟ್ಟಿತ್ತು. ಎಳೆನೀರು ತೆರವು ಮಾಡಲು ಅಧಿಕಾರಿಗಳು ಮುಂದಾಗ್ತಿದ್ದಂತೆ ಮಹಿಳೆ ತಿರುಗಿ ಬಿದ್ದಿದ್ದರು. ನನಗೆ ಗಂಡ ಇಲ್ಲ ಮಕ್ಕಳು ಇಲ್ಲ, ಬದುಕೋಕೆ ಏನು ಮಾಡಬೇಕು ಅಂತಾ ಆಕ್ರೋಶ ಹೊರಹಾಕಿದ್ದರು. ತನ್ನ ಅಂಗಡಿ ತೆರವು ಮಾಡಿದರೆ ಟ್ರ್ಯಾಕ್ಟರ್ ಕೆಳಗೆ ಬಿದ್ದು ಸಾಯ್ತೀನಿ ಅಂತಾ ಅವಾಜ್‌ ಹಾಕದ್ದರು. ಹೀಗೆ ಆಕ್ರೋಶಗೊಂಡು ಸೀಜ್‌ನಿಂದ ಬಚಾವ್ ಆದ ಮಹಿಳೆ ತಾನೇ ತೆರವುಮಾಡಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:52 pm, Fri, 17 November 23