ಬೆಂಗಳೂರಿನಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು

| Updated By: ಆಯೇಷಾ ಬಾನು

Updated on: Sep 01, 2021 | 11:12 AM

ಅಭಿಮಾನಿಗಳು ಅನಧಿಕೃತವಾಗಿ ನಗರದಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಬಸವಣ್ಣನವರ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಅವರು ಬಿಬಿಎಂಪಿಯಿಂದ‌ ಅನುಮತಿ ಪಡೆಯದೇ ಪುತ್ಥಳಿ ಸ್ಥಾಪನೆ ಹಿನ್ನಲೆಯಲ್ಲಿ ಅಂತಹ ಪುತ್ಥಳಿಗಳನ್ನು ತೆರವುಗೊಳಿಸಲು ಬಿಬಿಎಂಪಿ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು
ಬೆಂಗಳೂರಿನಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳು ಶೀಘ್ರದಲ್ಲೇ ತೆರವು
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಬಿಎಂಪಿಯಿಂದ ಅನುಮತಿ ಪಡೆಯದೇ ಅಭಿಮಾನಿಗಳು ನಿರ್ಮಿಸಿದ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್ ಸೇರಿದಂತೆ ಮಹಾನ್ ನಾಯಕರ ಪುತ್ಥಳಿಗಳನ್ನು ಶೀಘ್ರದಲ್ಲೇ ತೆರವು ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಸಿನಿ ಪ್ರೇಮಿಗಳು ತಮಗೆ ಇಷ್ಟವಾದ ನೆಚ್ಚಿನ ನಟರ ಸಂಘಗಳನ್ನು, ಬಳಗಗಳನ್ನು ಮಾಡಿಕೊಂಡು ಏರಿಯಾದಲ್ಲಿ ಪುತ್ಥಳಿಗಳನ್ನು ನಿರ್ಮಿಸಿರುತ್ತಾರೆ. ಅಂತವರ ಕನಸಿನ ಪುತ್ಥಳಿಯ ತೆರವು ಕಾರ್ಯಾಚರಣೆಗೆ ಬಿಬಿಎಂಪಿ ಮುಂದಾಗಿದೆ. ಅಭಿಮಾನಿಗಳು ಅನಧಿಕೃತವಾಗಿ ನಗರದಲ್ಲಿ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಬಸವಣ್ಣನವರ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಅವರು ಬಿಬಿಎಂಪಿಯಿಂದ‌ ಅನುಮತಿ ಪಡೆಯದೇ ಪುತ್ಥಳಿ ಸ್ಥಾಪನೆ ಹಿನ್ನಲೆಯಲ್ಲಿ ಅಂತಹ ಪುತ್ಥಳಿಗಳನ್ನು ತೆರವುಗೊಳಿಸಲು ಬಿಬಿಎಂಪಿ ನಿರ್ಧರಿಸಿದ್ದು ಆದಷ್ಟು ಬೇಗ ತೆರವು ಕಾರ್ಯಾಚರಣೆ ಕೈಗೊಳ್ಳಲಿದೆ.

ಈಗಾಗಲೇ ಈ ಬಗ್ಗೆ ಬಿಬಿಎಂಪಿ ಸರ್ವೆ ಕಾರ್ಯ ಶುರುಮಾಡಿದೆ. ಸರ್ವೆಯಲ್ಲಿ ಅನೇಕ ಪುತ್ಥಳಿಗಳನ್ನು ಗುರುತಿಸಿದೆ ಇನ್ನೇನು ಶೀಘ್ರದಲ್ಲೇ ತೆರವು ಮಾಡಲು ತೀರ್ಮಾನಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮೂರನೇ ಅಲೆ ಆತಂಕದ ಹಿನ್ನಲೆ ಕಡ್ಡಾಯ ವ್ಯಾಕ್ಸಿನ್ ಗೆ ಬಿಬಿಎಂಪಿ ಆದೇಶ

ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್; ಇ-ಬುಕ್ ಹಾಗೂ ಆಡಿಯೊ ರೂಪದಲ್ಲಿ ಬಿಡುಗಡೆಯಾಗಲಿದೆ ಕಿಚ್ಚನ ಬದುಕಿನ ಕತೆ