ಬೆಂಗಳೂರು: ಬಹುನಿರೀಕ್ಷಿತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಚುನಾವಣೆಗಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಬಿಬಿಎಂಪಿ ಚುನಾವಣೆ ಮೀಸಲಾತಿ ಪ್ರಕರಣಗಳು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆಯೇ ಇಂದು(ಸೆಪ್ಟೆಂಬರ್ 28) ಚುನಾವಣೆ ಆಯೋಗ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
ಚುನಾವಣೆ ಆಯೋಗದ ಪ್ರಕಟಿಸಿದ ಮತದಾರರ ಪಟ್ಟಿ ಪ್ರಕಾರ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರು ಇದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1433 ಇತರೆ ಮತದಾರರು ಇದ್ದಾರೆ.
ಅಂತಿಮ ಮತದಾರರ ಪಟ್ಟಿಯನ್ನು ಬಿಬಿಎಂಪಿ ವೆಬ್ಸೈಟ್ bbmp.gov.in ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೊಸದಾಗಿ ಮತದಾರರಾಗಿ ನೊಂದಾಯಿಸಿಕೊಳ್ಳಲು ಮೊಬೈಲ್ ಪ್ ಆದ Voter Helpline App ಮತ್ತು NVSP Portal ವೆಬ್ಸೈಟ್ ಮುಖೇನಾ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: BBMP Election: ಬಗೆಹರಿಯದ ಮೀಸಲಾತಿ ಗೊಂದಲ, ಸರ್ಕಾರಕ್ಕೆ ಮಹತ್ವದ ವರದಿ ಕೇಳಿದ ಕೋರ್ಟ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ಗಳ ಪುನರ್ ವಿಂಗಡಣೆ ಕರಡು ಪ್ರಕಟವಾಗಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಎಲ್ಲ 243 ವಾರ್ಡ್ಗಳಿಗೂ ಮತದಾರರನ್ನು ವಿಂಗಡಣೆ ಮಾಡಲಾಗಿದೆ. ಕೆಲ ವಾರ್ಡ್ಗಳ ಮತದಾರರ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಿರಬಹುದು. ಕೆಲ ವಿಧಾನಸಭಾ ಕ್ಷೇತ್ರದಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಾಗಿದ್ದರೆ, ಹಲವೆಡೆ ಕಡಿಮೆಯಾಗಿದೆ.
2011ರ ಜನಗಣತಿ ಆಧರಿಸಿ 198 ವಾರ್ಡ್ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಳ ಮಾಡಿದೆ. ಇದಕ್ಕೆ ಅನೇಕ ಆಕ್ಷೇಪಗಳು ವ್ಯಕ್ತವಾಗಿದ್ದವು, ಆದರೂ ರಾಜ್ಯ ಸರಕಾರವು ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆಯನ್ನು ಅಂತಿಮಗೊಳಿಸಿ ಈಗಾಗಲೇ ವಿರೋಧದ ನಡುವೆ ಅಧಿಸೂಚನೆ ಹೊರಡಿಸಿದೆ.
ವಾರ್ಡ್ ಮರು ವಿಂಗಡಣೆಯ ಕರಡು ಪಟ್ಟಿಗೆ ಸುಮಾರು 2,500 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಈ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ಅದರಂತೆ ಜುಲೈ 11 ಮತ್ತು 12 ರಂದು ನಡೆದ ಸಮಿತಿ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ, ವಾರ್ಡ್ಗಳ ಮರು ವಿಂಗಡಣಾ ಕರಡು ಅಧಿ ಸೂಚನೆಗೆ ಕೆಲವೊಂದು ಬದಲಾವಣೆಗಳನ್ನು ಸೂಚಿಸಿ ಶಿಫಾರಸು ಮಾಡಿತ್ತು.
ಜನಸಂಖ್ಯೆಯ ಏಕರೂಪತೆಯನ್ನು ಸಾಧಿಸುವ ಸಲುವಾಗಿ 243 ವಾರ್ಡುಗಳ ಸೀಮಾರೇಖೆಯನ್ನು ಗುರುತಿಸುವ ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರವು ಪುನರ್ವಿಂಗಡಣಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು BBMP Act 2020 (Karnataka ACT NO. 53 OF 2020 The Bruhat Bengaluru Mahanagara Palike ACT, 2020 FT PAR: G.O. No UDD 4 MLR 2014 dt.215.02.2014) ರಲ್ಲಿನ ಮಾನದಂಡಗಳನ್ನು ಅನುಸರಿಸಿ, 2011ರ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಬಿಬಿಎಂಪಿ ವ್ಯಾಪ್ತಿಯಲ್ಲಿ 243 ವಾರ್ಡುಗಳ ವಿಂಗಡಣೆ ಮಾಡಿ ಪ್ರತೀ ವಾರ್ಡಿನ ಗಡಿಗಳನ್ನು ಗುರುತಿಸಿದೆ.
Published On - 6:59 pm, Wed, 28 September 22