ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟ: ಮತದಾರರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟ ಮಾಡಿದ್ದು, ಮತದಾರರ ಸಂಖ್ಯೆ ಎಷ್ಟು ಹೆಚ್ಚಾಗಿದೆ? ಎಷ್ಟು ಡಿಲೀಟ್ ಆಗಿವೆ? ಎನ್ನುವ ಮಾಹಿತಿಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೀಡಿದ್ದಾರೆ.

ಬೆಂಗಳೂರಿನ 25 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪ್ರಕಟ: ಮತದಾರರ ಸಂಖ್ಯೆ ಎಷ್ಟು? ಇಲ್ಲಿದೆ ಮಾಹಿತಿ
ಸಾಂಧರ್ಬಿಕ ಚಿತ್ರ
Edited By:

Updated on: Jan 05, 2023 | 7:18 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 25 ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಇಂದು(ಜನವರಿ 05) ಪಕಟವಾಗಿದೆ. ಇನ್ನು ಮೂರು ಕ್ಷೇತ್ರಗಳಾದ ಮಹಾದೇವಪುರ, ಚಿಕ್ಕಪೇಟೆ, ಶಿವಾಜಿನಗರ ಕ್ಷೇತ್ರದ ಮತದಾರರ ಪಟ್ಟಿಯನ್ನು ಮುಂದಿನ 10‌ ದಿನಗಳ ಅಂದರೆ ಜನವರಿ 15 ರಂದು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ವೋಟರ್ ಐಡಿ ಅಕ್ರಮ : ಕಾಂಗ್ರೆಸ್ ವಾರ್ಡ್ ಅಧ್ಯಕ್ಷರ ಹೆಸರು ಡಿಲೀಟ್​, ಪಟ್ಟಿಯಲ್ಲಿ ಸತ್ತವರು ಜೀವಂತ

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ತುಷಾರ್ ಗಿರಿನಾಥ್, ಈ ಹಿಂದೆ 25 ಕ್ಷೇತ್ರ ವ್ಯಾಪ್ತಿಯಲ್ಲಿ 81,48,998 ಮತದಾರರು ಇದ್ದರು. ಈಗ 25 ಕ್ಷೇತ್ರದ ಮತದಾರರ ಸಂಖ್ಯೆ 82,29,375ಕ್ಕೆ ಏರಿಕೆಯಾಗಿದೆ. ಪುರುಷ ಮತದಾರರು-42,65,140, ಮಹಿಳಾ ಮತದಾರರು-39,62,712 ಹಾಗೂ 1,523 ತೃತೀಯಲಿಂಗ ಮತದಾರರು ಇದ್ದಾರೆ ಎಂದು ಮಾಹಿತಿ ನೀಡಿದರು.

ಈ ಬಾರಿ ಹೊಸದಾಗಿ 1,02,460 ಮತದಾರರು ಸೇರ್ಪಡೆಯಾಗಿದ್ದು,. ಮತದಾರರ ಪಟ್ಟಿಯಿಂದ 22,244 ಜನರ ಹೆಸರು ಡಿಲೀಟ್​​ ಆಗಿದೆ. 75 ಸಾವಿರಕ್ಕೂ ಹೆಚ್ಚು ಮತದಾರರ ದಾಖಲಾತಿ ಸರಿಯಾಗಿ ಇರಲಿಲ್ಲ. ಆ ಮತದಾರರ ಹೆಸರನ್ನು ಬಿಎಲ್ಓಗೆ ಕಳುಹಿಸಿ ಪರಿಶೀಲಿಸಲಾಗಿದ್ದು,ಈ ವೇಳೆ 65 ಸಾವಿರ ಮತದಾರರು ದಾಖಲೆ ನೀಡಿದ್ದಾರೆ. ಇನ್ನು ಯುವ ಮತದಾರರು ಮಾರ್ಚ್ ವರೆಗೂ ಓಟರ್ ಲಿಸ್ಟ್ ಗೆ ಸೇರಿಸಲು ಅವಕಾಶ ಇದೆ ಎಂದು ಹೇಳಿದರು.

ಮಹಾದೇವಪುರ, ಚಿಕ್ಕಪೇಟೆ, ಶಿವಾಜಿನಗರ ಈ 3 ಕ್ಷೇತ್ರದಲ್ಲಿ ಎಲೆಕ್ಷನ್ ಕಮಿಷನ್ ಸೂಚನೆ ಮೇರೆಗೆ ಪರಿಶೀಲನೆ ಆಗುತ್ತಿದೆ. ಇದಕ್ಕಾಗಿ ಹೆಚ್ಚುವರಿ ಸಮಯಾವಕಾಶ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮತದಾರರ ಪಟ್ಟಿ 10‌ ದಿನಗಳ ಬಳಿಕ ಅಂದರೆ ಜನವರಿ 15 ರಂದು ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 7:12 pm, Thu, 5 January 23