ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ: ರೈನ್​ಬೋ ಡ್ರೈನ್ ಲೇಔಟ್, ಮಹಾದೇವಪುರ ಸೇರಿದಂತೆ ಹಲವೆಡೆ ಮತ್ತೆ ಕಾಣಿಸಿಕೊಂಡ ಜೆಸಿಬಿ

ರಾಜಕಾಲುವೆ ಒತ್ತುವರಿ ಜಾಗ ತೆರವಿಗೆ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾದ ನಿವಾಸಿಗಳಿಗೆ ಖುದ್ದು ತಹಶೀಲ್ದಾರ್ ಸೆಪ್ಟೆಂಬರ್ 12ರಂದು ನೋಟಿಸ್ ನೀಡಿದ್ದರು. ನೋಟಿಸ್ ನೀಡಿ 7 ದಿನ ಗಡುವು ನೀಡಲಾಗಿತ್ತು. ಇಂದು ತಹಶೀಲ್ದಾರ್​ ಗಡುವು​ ಮುಕ್ತಾಯ ಹಿನ್ನೆಲೆ ತೆರವು ಕಾರ್ಯಾಚರಣೆ ನಡೆಯಲಿದೆ.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ: ರೈನ್​ಬೋ ಡ್ರೈನ್ ಲೇಔಟ್, ಮಹಾದೇವಪುರ ಸೇರಿದಂತೆ ಹಲವೆಡೆ ಮತ್ತೆ ಕಾಣಿಸಿಕೊಂಡ ಜೆಸಿಬಿ
ಮಹದೇವಪುರ ವಲಯದಲ್ಲಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ
Updated By: ಆಯೇಷಾ ಬಾನು

Updated on: Sep 19, 2022 | 9:04 AM

ಬೆಂಗಳೂರು: ಬಿಬಿಎಂಪಿಯ ಆಪರೇಷನ್ ಡೆಮಾಲಿಷನ್(Operation Demolition) ಮುಂದುವರೆದಿದೆ. ನಗರದಲ್ಲಿ ರಾಜಕಾಲುವೆ(Encroachment) ಸ್ವಾಹ ಮಾಡಿ ಮನೆ ಕಟ್ಟಿಕೊಂಡವರ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸರ್ವೇ ಪ್ರಕಾರ ಬರೋಬ್ಬರಿ 696 ಕಡೆ ಒತ್ತುವರಿ ಆಗಿದೆ. ಸದ್ಯ 84 ಕಡೆ ಒತ್ತುವರಿ ತೆರವು ಕಾರ್ಯ ಆಗಿದೆ. ಎರಡು ದಿನ ಬಂದ್​ ಆಗಿದ್ದ ತೆರವು ಕಾರ್ಯ ಇಂದು ಆರಂಭವಾಗಿದೆ. ಜೊತೆಗೆ ರೈನ್​ಬೋ ಡ್ರೈನ್ ಲೇಔಟ್​​ನಲ್ಲಿ 13ಕ್ಕೂ ಹೆಚ್ಚು ವಿಲ್ಲಾಗಳಿಂದ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದ್ದು ತಹಶೀಲ್ದಾರ್ ನೋಟಿಸ್ ನೀಡಿದ್ದರು. ಇಂದು ತಹಶೀಲ್ದಾರ್​ ಗಡುವು​ ಮುಕ್ತಾಯ ಹಿನ್ನೆಲೆ ತೆರವು ಕಾರ್ಯ ನಡೆಯಲಿದೆ.

ರಾಜಕಾಲುವೆ ಒತ್ತುವರಿ ಜಾಗ ತೆರವಿಗೆ ರೈನ್​ಬೋ ಡ್ರೈವ್​ ಲೇಔಟ್ ವಿಲ್ಲಾದ ನಿವಾಸಿಗಳಿಗೆ ಖುದ್ದು ತಹಶೀಲ್ದಾರ್ ಸೆಪ್ಟೆಂಬರ್ 12ರಂದು ನೋಟಿಸ್ ನೀಡಿದ್ದರು. ನೋಟಿಸ್ ನೀಡಿ 7 ದಿನ ಗಡುವು ನೀಡಲಾಗಿತ್ತು. ಇಂದು ತಹಶೀಲ್ದಾರ್​ ಗಡುವು​ ಮುಕ್ತಾಯ ಹಿನ್ನೆಲೆ ತೆರವು ಕಾರ್ಯಾಚರಣೆ ನಡೆಯಲಿದೆ.

ಮತ್ತೊಂದೆಡೆ ಇಂದು ಮಹಾದೇವಪುರ ವಲಯದಲ್ಲಿ 5 ಕಡೆ ತೆರವು ಕಾರ್ಯಾಚರಣೆ ನಡೆಯಲಿದೆ. ಸರ್ಜಾಪುರ ರಸ್ತೆಯ ವಿಪ್ರೋ ಮುಂಭಾಗದ ಕಾಲುವೆ ತೆರವು, ಸಲಾಪುರಿ ಅಪಾರ್ಟ್ಮೆಂಟ್ ಮುಂಭಾಗ, ಗ್ರೀಬ್ ವುಡ್ ರೆಸಿಡೆನ್ಸಿ ಮುಂಭಾಗದಲ್ಲಿ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುತ್ತೆ. ಸಾಕ್ರಾ ಆಸ್ಪತ್ರೆ ಹಿಂಭಾಗ, ಪೂರ್ವಪಾರ್ಕ್ ರೈಡ್ಜ್ ವಿಲ್ಲಾ ಲೇಔಟ್ ನಲ್ಲಿ, ವಿಜಯಲಕ್ಷ್ಮಿ ಕಾಲೋನಿ ಕಾಡುಗೋಡಿಯಲ್ಲಿ, ಮಾರತಹಳ್ಳಿಯ ಬಿಡಬ್ಲ್ಯೂಎಸ್ಎಸ್ ಬ್ರಿಡ್ಜ್ ತೆರವು ಮಾಡಲಾಗುತ್ತೆ.

ಇಂದು ಯಲಹಂಕ ವಲಯದ ದೊಡ್ಡ ಬೊಮ್ಮಸಂದ್ರದಲ್ಲಿ ತೆರವು ಕಾರ್ಯ ನಡೆಯಲಿದೆ. ಆದ್ರೆ ಸರ್ವೇ ಮಾಡಿ ಮಾರ್ಕಿಂಗ್ ಮಾಡಿದ್ದನ್ನ ಅಳಿಸಿಹಾಕಲಾಗಿದೆ‌. ಹೀಗಾಗಿ ಇಂದು ಮತ್ತೆ ಸರ್ವೇ ಮಾಡಿಸಿ, ಕೂಡಲೇ ತೆರವು ಮಾಡಲು ನಿರ್ಧಾರ ಮಾಡಲಾಗಿದೆ. ಸರ್ವೇ ಜೊತೆಯಲ್ಲಿಯೇ ತೆರವು ಕಾರ್ಯ ಮಾಡಲು ಪಾಲಿಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಬೆಳಗ್ಗೆ 10:30ರಿಂದ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:02 am, Mon, 19 September 22