ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ಶಾಕ್; ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ದಂಡ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 25, 2023 | 4:48 PM

ಕಂಬಳ(Kambala) ಆಯೋಜಕರಿಗೆ ಬಿಬಿಎಂಪಿ ಶಾಕ್ ಕೊಟ್ಟಿದ್ದು, ಅರಮನೆ ಮೈದಾನದ ಮುಂದೆ ಫ್ಲೆಕ್ಸ್, ಬ್ಯಾನರ್ ಹಾಕಿದ್ದಕ್ಕೆ ದಂಡ ವಿಧಿಸಿದೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಹಿನ್ನಲೆ ಕಂಬಳಕ್ಕೆ ಶುಭಾಶಯ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು. ಆದರೆ, ಇದು ಕಾನೂನುಬಾಹಿರ ಆದ್ದರಿಂದ ಬಿಬಿಎಂಪಿ ತೆರವುಗೊಳಿಸಿ, ದಂಡ ವಿಧಿಸಿದೆ.

ಬೆಂಗಳೂರು ಕಂಬಳ ಆಯೋಜಕರಿಗೆ ಬಿಬಿಎಂಪಿ ಶಾಕ್; ಬ್ಯಾನರ್, ಫ್ಲೆಕ್ಸ್ ಹಾಕಿದ್ದಕ್ಕೆ ದಂಡ
ಕಂಬಳ ಆಯೋಜಕರಿಗೆ ಬಿಬಿಎಂಪಿ ದಂಡ
Follow us on

ಬೆಂಗಳೂರು, ನ.25: ಕಂಬಳ(Kambala) ಆಯೋಜಕರಿಗೆ ಬಿಬಿಎಂಪಿ ಶಾಕ್ ಕೊಟ್ಟಿದ್ದು, ಅರಮನೆ ಮೈದಾನದ ಮುಂದೆ ಫ್ಲೆಕ್ಸ್, ಬ್ಯಾನರ್ ಹಾಕಿದ್ದಕ್ಕೆ ದಂಡ ವಿಧಿಸಿದೆ. ಈ ಸಂಬಂಧ ಸದಾಶಿವನಗರ ಠಾಣೆಗೆ ದೂರು ಹಿನ್ನಲೆ ಅರಮನೆ ಮೈದಾನದ ಸುತ್ತಮುತ್ತ ಹಾಕಿದ್ದ ಫ್ಲೆಕ್ಸ್, ಬ್ಯಾನರ್ ತೆರವುಗೊಳಿಸಲಾಗಿದೆ.

ಇದೇ ಮೊದಲ ಬಾರಿಗೆ ಸಿಲಿಕಾನ್​ ಸಿಟಿಯಲ್ಲಿ ಕಾರವಳಿ ಭಾಗದ ಪ್ರಮುಖ ಕ್ರೀಡೆಯಾದ ಕಂಬಳವನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಹಿನ್ನಲೆ ಕಂಬಳಕ್ಕೆ ಶುಭಾಶಯ ಕೋರಿ ಫ್ಲೆಕ್ಸ್, ಬ್ಯಾನರ್ ಹಾಕಿದ್ದರು. ಆದರೆ, ಇದು ಕಾನೂನುಬಾಹಿರ ಆದ್ದರಿಂದ ಬಿಬಿಎಂಪಿ ತೆರವುಗೊಳಿಸಿ, ದಂಡ ವಿಧಿಸಿದೆ.

ಕಂಬಳ ವೀಕ್ಷಣೆಗೆ ಬರುವವರಿಗೂ ಉಚಿತ ಊಟದ ವ್ಯವಸ್ಥೆ

ಇನ್ನು ಕೋಣಗಳ ಮಾಲೀಕರು ಹಾಗೂ ಪರಿಚಾರಕರಿಗೆ ಮಾತ್ರವಲ್ಲದೆ, ಕಂಬಳವನ್ನು ಕಣ್ತುಂಬಿಕೊಳ್ಳಲು ಬರುವವರಿಗೂ ಕೂಡ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ವಿವಿಧ ಮಾಂಸಾಹಾರಿ ಮತ್ತು ಸಸ್ಯಹಾರಿ ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ. ಸುಮಾರು 200 ಕ್ಕೂ ಹೆಚ್ಚು ಕೋಣಗಳಿಗೆ ವಿಷೇಶವಾಗಿ ಆಹಾರ ವ್ಯವಸ್ಥೆ ಮಾಡಲಾಗಿದ್ದು, ಕಂಬಳಕ್ಕೆ ಬರುವ ಜನರಿಗೆ ವಿವಿಧ ಬಗೆಯ ಕರಾವಳಿ ಭಾಗದ ವಿಷೇಶ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ:Bengaluru Kambala: ಬೆಂಗಳೂರು ಕಂಬಳದಲ್ಲಿ ನೋಡಬಹುದಾದ ವಿಶೇಷತೆಗಳು ಏನೇನು ಗೊತ್ತಾ?

ಇಂದು, ನಾಳೆ ನಡೆಯುವ ಕಂಬಳ

ಇಂದು ಮತ್ತು ನಾಳೆ ನಡೆಯುವ ಕಂಬಳವನ್ನು ನೋಡಲು ಬರುವವರಿಗೂ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ಸಂಜೆ ಟೀ, ಕಾಫಿ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಕುಚ್ಚಲಕ್ಕಿ‌ ಅನ್ನ, ವೈಟ್ ರೈಸ್, ಚಿಕನ್ ಕಬಾಬ್, ಚಿಕನ್ ಸುಕ್ಕ, ಕಡ್ಲೆ ಬೇಳೆ ಪಾಯಸ ವಿತರಣೆ ಮಾಡಲಾಗುತ್ತಿದೆ. ಸಸ್ಯಹಾರಿ ಪ್ರಿಯರಿಗೂ ವಿಶೇಷವಾದ ಭೂಜನದ ವ್ಯವಸ್ಥೆ ಮಾಡಲಾಗಿದೆ. ಇನ್ನು ಟಿಕೆಟ್ ಇದ್ದವರಿಗರ ಮಾತ್ರ ಹಾಲ್​ನಲ್ಲಿ, ಇತರರಿಗೆ ಬೇರೆಡೆ ವ್ಯವಸ್ಥೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:32 pm, Sat, 25 November 23