ಬೆಂಗಳೂರು: ಕೊರೊನಾದ ವಿವಿಧ ತಳಿಗಳು ಈಗಾಗಲೇ ವಿಶ್ವವನ್ನು ಬಾಧಿಸುತ್ತಿವೆ. ಅದರಲ್ಲೂ ಮುಖ್ಯವಾಗಿ ಡೆಲ್ಟಾ (Delta Variant) ಮತ್ತು ಒಮಿಕ್ರಾನ್ (Omicron Variant) ದೊಡ್ಡ ತಲೆನೋವು ಸೃಷ್ಟಿಸಿದ ತಳಿಗಳು. ಇತ್ತೀಚೆಗಷ್ಟೇ ಪತ್ತೆಯಾದ ಒಮಿಕ್ರಾನ್ ಸೋಂಕಿನ ಪ್ರಸರಣದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಮುನ್ನೇಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಲ್ಲಿ ಕಂಟೈನ್ಮೆಂಟ್ ಜೋನ್ ಸಂಖ್ಯೆ ನೂರರ ಗಡಿದಾಟಿದೆ. 8 ವಲಯಗಳಲ್ಲಿ ಕಂಟೈನ್ಮೆಂಟ್ ಜೋನ್‌ಗಳ ಸಂಖ್ಯೆ 106ಕ್ಕೇರಿಕೆಯಾಗಿದೆ.
ನಗರದಲ್ಲಿ ನೂರರ ಗಡಿದಾಟಿದ ಕಂಟೈನ್ಮೆಂಟ್ ವಲಯ
ಬೊಮ್ಮನಹಳ್ಳಿ-36, ದಕ್ಷಿಣ ವಲಯ-24, ಮಹದೇವಪುರ-12, ಪೂರ್ವ ವಲಯ-11, ಪಶ್ಚಿಮ ವಲಯ-8, ಆರ್.ಆರ್.ನಗರ-4, ಯಲಹಂಕ-4, ದಾಸರಹಳ್ಳಿ-2. 8 ವಲಯಗಳ ಪೈಕಿ ಬೊಮ್ಮನಹಳ್ಳಿಯಲ್ಲಿ ಹೆಚ್ಚು ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಒಟ್ಟಾರೆ ಕೊವಿಡ್ ಕೇಸ್ ಪತ್ತೆ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ಒಮಿಕ್ರಾನ್ ಹಾಗೂ ಕೊರೊನಾತಂಕ ಹೆಚ್ಚಳ; ಸರ್ಕಾರದಿಂದ ಶೀಘ್ರದಲ್ಲೇ ಮಹತ್ವದ ಆದೇಶ ಸಾಧ್ಯತೆ
ಕೊರೊನಾ 3ನೇ ಅಲೆ, ಒಮಿಕ್ರಾನ್ ಸೋಂಕಿನ ಆಂತಕ ಹಿನ್ನೆಲೆ ಸರ್ಕಾರ ಶೀಘ್ರದಲ್ಲೇ ಮತ್ತೊಂದು ಮಹತ್ವದ ಆದೇಶ ನೀಡುವ ಸಾಧ್ಯತೆ ಇದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಮಾಲ್, ಸಿನಿಮಾ ಥಿಯೇಟರ್, ಕಮರ್ಷಿಯಲ್ ಕಾಂಪ್ಲೆಕ್ಸ್ಗಳ ಪ್ರವೇಶಕ್ಕೆ ಸರ್ಕಾರ 2 ಡೋಸ್ ಲಸಿಕೆ ಕಡ್ಡಾಯಗೊಳಿಸಿದೆ. ಈಗ ದೇವಸ್ಥಾನ, ಬಸ್, ಮೆಟ್ರೋ, ಬಾರ್, ರೆಸ್ಟೋರೆಂಟ್ಗಳ ಪ್ರವೇಶಕ್ಕೂ 2 ಡೋಸ್ ಲಸಿಕೆ ಕಡ್ಡಾಯ ಮಾಡಲು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
2 ಡೋಸ್ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಇದ್ದರೆ ಮಾತ್ರ ದೇವಸ್ಥಾನ, ಬಾರ್, ರೆಸ್ಟೋರೆಂಟ್, ಬಸ್, ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಹೊಸ ವರ್ಷಕ್ಕೂ ಮುನ್ನವೇ ಇಂತಹದೊಂದು ಆದೇಶವನ್ನು ಸರ್ಕಾರ ಹೊರಡಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
ದೇಶದಲ್ಲಿ 161 ಒಮಿಕ್ರಾನ್ ಪ್ರಕರಣ ಪತ್ತೆ: ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ
Published On - 8:18 am, Tue, 21 December 21