ಬೆಂಗಳೂರು: ಐಬಿ (IB) ಅಧಿಕಾರಿ ಅಂತಾ ಹೇಳಿಕೊಂಡು ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ (Bengaluru) ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್ ಅಲಿಯಾಸ್ ಅರಹಂತ್ ಲಕ್ಕವಳ್ಳಿ ಬಂಧನಕ್ಕೊಳಗಾದ ಆರೋಪಿ. ಮೋಹನ್ RAW, IB, PMO ಅಧಿಕಾರಿಯೆಂದು ನಂಬಿಸಿ ವಂಚಿಸಿದ್ದ. ಬರೋಬ್ಬರಿ 89 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ವಂಚಿಸಿ ಪಡೆದ ಹಣದಲ್ಲಿ ವರ್ಷಕ್ಕೆ ಹಲವು ಬಾರಿ ವಿದೇಶಿ ಪ್ರವಾಸ ಮಾಡುತ್ತಿದ್ದ. ಸಿಂಗಾಪುರ, ಮಲೇಷಿಯಾ, ಯುರೋಪ್ ಪ್ರವಾಸಕ್ಕೆ ಹೋಗುತ್ತಿದ್ದ. ರಾಜಕೀಯ ವ್ಯಕ್ತಿಗಳ ಲಿಂಕ್ ಇರೋದಾಗಿ ನಂಬಿಸುತ್ತಿದ್ದ. ಪೊಲೀಸ್ ಅಧಿಕಾರಿಗಳು, ಗಣ್ಯರ ಲಿಂಕ್ ಇದೆ ಎಂದು ನಂಬಿಸಿದ್ದ. ನಂತರ ಉತ್ತರ ಪ್ರದೇಶದ ಮಹಿಳೆಗೆ ವಂಚಿಸಿ ತಗಲಾಕಿಕೊಂಡಿದ್ದಾನೆ.
ಆರೋಪಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಸರಿನಲ್ಲಿ ಮಹಾ ವಂಚನೆ ಮಾಡಿದ್ದಾನೆ. ಯುಪಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವೀಸಾ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಈತ ನಂಬಿಸಿದ್ದ. ಉಗ್ರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆ ಎಂದು ಹೆದರಿಸಿದ್ದ. ಹೀಗೆ ನಂಬಿಸಿ ಮಹಿಳೆಯಿಂದ ದೊಡ್ಡ ಮಟ್ಟದ ಹಣ ದೋಚಿದ್ದ. ಬಳಿಕ ಅಸಲಿ ಸಂಗತಿ ತಿಳಿದು ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು.
ತನಿಖೆ ವೇಳೆ ಆರೋಪಿಯಿಂದ ಹಲವು ಸಂಗತಿಗಳು ಬಯಲಾಗಿದೆ. ಕೆಲಸ ಇಲ್ಲದಿದ್ದರೂ 10 ಬ್ಯಾಂಕ್ಗಳಲ್ಲಿ 16 ಖಾತೆ ಹೊಂದಿದ್ದಾನೆ. ಪಾಸ್ಪೋರ್ಟ್ನಲ್ಲಿ ಹಲವು ದೇಶಗಳ ಸುತ್ತಾಟದ ಪಟ್ಟಿ ಬೆಳಕಿಗೆ ಬಂದಿದೆ. ವಂಚಕ ಮೋಹನ್ ಮೂಲತಃ ಶಿವಮೊಗ್ಗ ಮೂಲದವನು. ಬೆಂಗಳೂರಿನ ರಾಜಾಜಿನಗರದಲ್ಲಿ ಸೋದರನೊಂದಿಗೆ ವಾಸವಿದ್ದ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿರೋದಾಗಿ ಮನೆಯಲ್ಲಿ ಹೇಳಿದ್ದ. ಮೋಹನ್ ಕುಮಾರ್ ಬಂಧನದ ಬಳಿಕ ಪೋಷಕರು ಶಾಕ್ ಆಗಿದ್ದಾರೆ. ಮೊಬೈಲ್ ಪಾಸ್ವರ್ಡ್ ನೀಡದೆ ಪೊಲೀಸರ ಜೊತೆ ಚೆಲ್ಲಾಟ ಆಡಿದ್ದಾನೆ. ಸುಳ್ಳು ಪಾಸ್ವರ್ಡ್ ನೀಡಿ ಮೋಹನ್ ಕುಮಾರ್ ಹುಚ್ಚಾಟ ಮೆರೆದಿದ್ದಾನೆ.
ಈತನ ಕೆಲಸಕ್ಕೆ ಬೇಸತ್ತು ಪೊಲೀಸರು ಕೋರ್ಟ್ ಮೊರೆಹೋಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮೊಬೈಲ್ ಅನ್ಲಾಕ್ಗೆ ಮುಂದಾಗಿದ್ದಾರೆ. ವಿಚಾರಣೆಗೆ ಆರೋಪಿ ಮೋಹನ್ ಸಹಕರಿಸದ ಹಿನ್ನೆಲೆ ಅನುಮಾನ ಹೆಚ್ಚಾಗಿದೆ. ಈವರೆಗೂ ಯುಪಿ ಯುವತಿ ಬಿಟ್ಟರೆ ಯಾವುದೇ ಕೇಸ್ ಬಾಯಿಬಿಟ್ಟಿಲ್ಲ. ಇದೇ ಮಾದರಿ ಹಲವರಿಗೆ ದೊಡ್ಡವರ ಹೆಸರು ಹೇಳಿ ವಂಚನೆ ಮಾಡಿರುವ ಶಂಕೆ ಮೂಡಿದೆ. ಸದ್ಯ ಬೆಳ್ಳಂದೂರು ಪೊಲೀಸರು ಮೋಹನ್ ಕುಮಾರ್ನ ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ
Crime News: ವಿವಿಧೆಡೆ ಅಪಘಾತ; 6 ಮಂದಿ ಸಾವು, ಬಾಗಲಕೋಟೆಯಲ್ಲಿ ಪೆಟ್ರೋಲ್ ಕಳ್ಳತನ
Published On - 12:58 pm, Sun, 1 May 22