Coronavirus 4th Wave: ಕರ್ನಾಟಕದಲ್ಲಿ ಕೊರೊನಾ BA.2.12 ರೂಪಾಂತರಿ ಪತ್ತೆ; ಮತ್ತಷ್ಟು ಹೆಚ್ಚಾಯ್ತು ಕೊರೊನಾ 4ನೇ ಅಲೆ ಆತಂಕ
ಈಗಾಗಲೇ ಕೊರೊನಾ 4ನೇ ಅಲೆ ಆತಂಕ ಹೆಚ್ಚಾಗಿದ್ದು ಇದರ ನಡುವೆ ರಾಜ್ಯದಲ್ಲಿ BA.2.12 ರೂಪಾಂತರಿ ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ ನಡೆಸುತ್ತಿರುವ ಜೀನೋಮ್ ಸೀಕ್ವೆನ್ಸಿಂಗ್ ನಲ್ಲಿ ಒಮಿಕ್ರಾನ್ ಉಪತಳಿಗಳಾದ BA.2.12 ಹಾಗೂ bA.2.10 ಲಕ್ಷಣಗಳನ್ನೆ ಹೆಚ್ಚು ಹೋಲುತ್ತಿದ್ದು, ಈ ತಳಿಗಳಿಂದಲೇ ದೆಹಲಿ, ಮುಂಬೈನಲ್ಲಿ ಕೇಸ್ ಗಳು ಹೆಚ್ಚಾಗಿವೆ.
ಬೆಂಗಳೂರು: ಒಮಿಕ್ರಾನ್ ರೂಪಾಂತರ ತಳಿಗಳು ರಾಜ್ಯದಲ್ಲಿ ನಾಲ್ಕನೇ ಅಲೆಗೆ ಕಾರಣವಾಗಲಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಈಗಾಗಲೇ ಕೊರೊನಾ 4ನೇ ಅಲೆ ಆತಂಕ ಹೆಚ್ಚಾಗಿದ್ದು ಇದರ ನಡುವೆ ರಾಜ್ಯದಲ್ಲಿ BA.2.12 ರೂಪಾಂತರಿ ಪತ್ತೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ವರದಿ ಬರುವ ಸಾಧ್ಯತೆ ಇದೆ. ತಳಿಗಳು ಪತ್ತೆಯಾಗಿರುವ ಬಗ್ಗೆ INSACOG ಲ್ಯಾಬ್ ನಿಂದ ಕೇಂದ್ರಕ್ಕೆ ರವಾನೆಯಾಗಿದೆ.
ಸದ್ಯ ರಾಜ್ಯದಲ್ಲಿ ನಡೆಸುತ್ತಿರುವ ಜೀನೋಮ್ ಸೀಕ್ವೆನ್ಸಿಂಗ್ ನಲ್ಲಿ ಒಮಿಕ್ರಾನ್ ಉಪತಳಿಗಳಾದ BA.2.12 ಹಾಗೂ bA.2.10 ಲಕ್ಷಣಗಳನ್ನೆ ಹೆಚ್ಚು ಹೋಲುತ್ತಿದ್ದು, ಈ ತಳಿಗಳಿಂದಲೇ ದೆಹಲಿ, ಮುಂಬೈನಲ್ಲಿ ಕೇಸ್ ಗಳು ಹೆಚ್ಚಾಗಿವೆ. ಹೀಗಾಗಿ ಈ ತಳಿಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಪಡೆದುಕೊಳ್ಳುತ್ತಿದೆ. ಟೆಸ್ಟ್, ಟ್ರಾಕ್, ಟ್ರೀಟ್ ಫಾರ್ಮೂಲದಂತೆ ಕ್ರಮ ವಹಿಸಲು ಸಜ್ಜಾಗುತ್ತಿದೆ. ಇನ್ನು ರಾಜ್ಯಕ್ಕೂ ರೂಪಾಂತರಿ ತಳಿಯ ಆತಂಕ ಶುರುವಾಗಿದ್ದು, ಉಪತಳಿಯಿಂದಲೇ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ದೆಹಲಿಯಿಂದ ಡೆತ್ ರೇಟ್ ಹಾಗೂ ಅನುಸರಿಸಬೇಕಾದ ಮಾಹಿತಿಗಳ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ಕಲೆಹಾಕುತ್ತಿದೆ.
ಇನ್ನು ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದು, ಈಗಾಗಲೇ ಸೀಕ್ವೆನ್ಸಿಂಗ್ ಟೆಸ್ಟಿಂಗ್ಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಲ್ಯಾಬ್ಗಳಲ್ಲಿ ರೂಪಾಂತರಿ ತಳಿಗಳು ಪತ್ತೆಯಾಗಿರುವುದು ಕಂಡುಬಂದಿದೆ. ಆದ್ರೆ ಪತ್ತೆಯಾಗಿರುವ ತಳಿಗಳು BA.2.10 , BA.2.12 , XE ನಾ ಎನ್ನುವ ಬಗ್ಗೆ ಇನ್ನು ಸರ್ಚಿಂಗ್ ಮಾಡಲಾಗುತ್ತಿದೆ. ಒಂದು ವೇಳೆ ತಳಿಗಳು ಬಂದಿರುವುದು ಖಚಿತವಾದ್ರೆ ಸಂಭಂದಿತ ವ್ಯಕ್ತಿಗಳ ಪ್ರಥಮಿಕ ಹಾಗೂ ದ್ವಿತೀಯ ಸಂಪರ್ಕವನ್ನು ಪರಿಶೀಲನೆ ಮಾಡಲಾಗುತ್ತೆ. ಕೇಸ್ಗಳ ಆಧಾರದ ಮೇಲೆ ಸ್ಥಿತಿಗಳನ್ನ ವಿಚಾರಿಸಲಾಗುತ್ತದೆ. ಈ ಹಿಂದೆ ಮೂರನೇ ಅಲೆ ಒಮಿಕ್ರಾನ್ ನಿಂದಾಲೇ ಬಂದಿತ್ತು. ಈಗಾ ಮಾಡಿರುವ ಜೀನೋಮಿಕ್ ಸ್ವೀಕ್ವೆನ್ಸಿಂಗ್ ಟೆಸ್ಟಿಂಗ್ ನಲ್ಲಿ ಸಿಂಟಮ್ಸ್ ಗಳೆಲ್ಲವು BA2 ರೂಪಂತರ ತಳಿಗಳ ಗಣವನ್ನೆ ಹೊಂದಿವೆ. ಹೀಗಾಗಿ ಕೇಸ್ಗಳು ಹೆಚ್ಚಾದ್ರು ಎಲ್ಲ ರೀತಿಯ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಇದರಿಂದ ಡೆತ್ ಪ್ರಮಾಣವು ಹೆಚ್ಚಾಗಿರುವ ಬಗ್ಗೆ ತಿಳಿದುಬಂದಿದೆ. ಈಗಾಗಲೇ BA2 ಬಂದಿರುವ ಎಲ್ಲಾ ರಾಜ್ಯಗಳ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು.
ನಾವು ಟೆಸ್ಟ್, ಟ್ರಾಕ್, ಟ್ರೀಟ್ ಫಾರ್ಮೂಲದಂತೆ ಹೆಚ್ಚಿನ ಫೋಕಸ್ ಮಾಡುತ್ತಿದ್ದೇವೆ. ಕ್ಲಸ್ಟರ್ ಮಟ್ಟದಲ್ಲಿ ಕೇಸ್ಗಳು ಹೆಚ್ಚಾಗುವುದಕ್ಕೆ ನಾವು ಬಿಡುವುದಿಲ್ಲ. ಎರಡನೇ ಅಲೆಯಲ್ಲಿ ಕೇಸ್ಗಳನ್ನ ಏನೆಲ್ಲ ಕ್ರಮ ತೆಗೆದುಕೊಂಡಿದ್ವಿ. ಆ ಕ್ರಮಗಳನ್ನೆ ತೆಗೆದುಕೊಳ್ತಿವಿ. ಸದ್ಯಕ್ಕೆ ಟೆಸ್ಟಿಂಗ್ ಟೀಮ್, ಅನಾಲಿಸಿಸ್ ಟೀಮ್, ಸಿಬ್ಬಂದಿಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಹೆಚ್ಚಿನ ಕೇಸ್ಗಳು ಇಲ್ಲ. ಆದ್ರೆ ಕೇಸ್ಗಳ ಪ್ರಮಾಣ ಹೆಚ್ಚಾದ್ರು ಅವುಗಳ ತಡೆಯುವ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಈಗಾಗಲೇ ಪಾಸಿಟಿವಿಟಿ ರೇಟ್ಗೆ ತಕ್ಕಂತೆ ಆ್ಯಕ್ಷನ್ ಪ್ಲಾನ್ ಹಾಕಿಕೊಂಡಿದ್ದೀವಿ. ಒಂದು ವೇಳೆ ಪಾಸಿಟಿವಿಟಿ ರೇಟ್ 5 % ಮೀರಿದ್ರೆ ಸಿಬ್ಬಂದಿಗಳನ್ನ ಹೆಚ್ಚಳ ಮಾಡಿಕೊಳ್ಳುತ್ತೇವೆ. ಸದ್ಯ 1.6% ರಷ್ಟೇ ಪಾಸಿಟಿವಿಟಿ ರೇಟ್ ಇರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದಾರೆ.