ನೆಲಮಂಗಲ: ನಮಗೆ ಓದಿನಲ್ಲಿ ಆಸಕ್ತಿಯಿಲ್ಲ, ಸ್ಪೋರ್ಟ್ನಲ್ಲಿ ಆಸಕ್ತಿಯಿದೆ ಎಂದು ಪತ್ರ ಬರೆದು ಬೆಂಗಳೂರಿನಲ್ಲಿ ವಾಕಿಂಗ್‌ಗೆ ಹೋಗಿದ್ದ 7 ಮಕ್ಕಳು ನಾಪತ್ತೆಯಾಗಿದ್ದಾರೆ. ಹೆಸರಘಟ್ಟ ರಸ್ತೆಯ ಸೌಂದರ್ಯ ಲೇಔಟ್‌ನ 3 ಬಾಲಕರು ಮತ್ತು ಎಜಿಬಿ ಲೇಔಟ್‌ನ ಬಾಲಕರಿಬ್ಬರು, ಬಾಲಕಿಯರಿಬ್ಬರು ನಾಪತ್ತೆಯಾಗಿದವರು. ರಾಯನ್(12), ಭೂಮಿ(13), ಚಿಂತನ್(14), ವರ್ಷಿಣಿ(21), ಪರೀಕ್ಷಿತ್(15), ಕಿರಣ್(15), ನಂದನ್(15) ನಾಪತ್ತೆಯಾದ ಮಕ್ಕಳು. ಬಾಗಲಗುಂಟೆ, ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದು, ಬಸ್, ರೈಲು ನಿಲ್ದಾಣ, ಪಾರ್ಕ್‌ಗಳಲ್ಲಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ. ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿದೆ.
ಮಾನವೀಯತೆ ಮೆರೆದ ಮೈಸೂರಿನ ವಿ.ವಿ.ಪುರಂ ಠಾಣೆ ಪೊಲೀಸರು
ಅನಾಥರಾಗಿ ಬೀದಿ ಬದಿ ವಾಸಿಸುತ್ತಿದ್ದ ವೃದ್ಧನೋರ್ವನಿಗೆ ಮೈಸೂರಿನ ವಿ.ವಿ.ಪುರಂ ಠಾಣೆ ಪೊಲೀಸರು ಸಹಾಯ ಮಾಡಿದ್ದಾರೆ. ಬೃಂದಾವನ ಬಡಾವಣೆ ಚರಕ ಆಸ್ಪತ್ರೆಯ ಎದುರಿನ ಪಾರ್ಕ್‌ನ ಚರಂಡಿ ಬಳಿ ವೃದ್ದ ವಾಸವಿದ್ದ. ಈಕುರಿತು ಸಾರ್ವಜನಿಕರು ಪೊಲೀಸ್ ಕಮಿಷನರ್‌ಗೆ ಮಾಹಿತಿ ನೀಡಿದ್ದರು. ಪೊಲೀಸರಿಂದ ವೃದ್ದರಿಗೆ ಬಟ್ಟೆ ನೀಡಿ ಅವರನ್ನು ಆಶ್ರಮಕ್ಕೆ ದಾಖಲು ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಸೂಚನೆಯಂತೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ:
100 ಸಿಸಿ ಬೈಕ್ನಲ್ಲಿ ಕಾಶ್ಮೀರಕ್ಕೆ ರೈಡ್; ಧಾರವಾಡದ ಯುವಕನಿಂದ ಕೊರೊನಾ ಜಾಗೃತಿ ಅಭಿಯಾನ
17 ವರ್ಷದಿಂದ ಕಾಡಲ್ಲೇ ವಾಸ, ಕಾರೇ ಮನೆ! ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಸುಳ್ಯದ ವ್ಯಕ್ತಿಯ ಕಥೆಯಿದು
Published On - 4:41 pm, Sun, 10 October 21