ವಿದ್ಯುತ್ ದರ ಕಡಿಮೆ ಮಾಡುವಂತೆ ಕೈಗಾರಿಕೋದ್ಯಮಿಗಳಿಂದ ಮನವಿ

ಕೈಗಾರಿಕೆಗಳಿಗೆ ವಿಧಿಸಲಾಗುತ್ತಿರುವ ವಿದ್ಯುತ್ ದರ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್ ದರ ಕಡಿಮೆ ಮಾಡಲು ಒತ್ತಾಯಿಸಲಾಗಿದೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ಕಿರು ಅಂಗಡಿಗಳ ತೆರವಿಗೆ ಕೈಗಾರಿಕಾ ಇಲಾಖೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ವಿದ್ಯುತ್ ದರ ಕಡಿಮೆ ಮಾಡುವಂತೆ ಕೈಗಾರಿಕೋದ್ಯಮಿಗಳಿಂದ ಮನವಿ
ವಿದ್ಯುತ್ ವ್ಯತ್ಯಯ

ಬೆಂಗಳೂರು: ವಿದ್ಯುತ್ ದರ ಕಡಿಮೆ ಮಾಡುವಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಕೈಗಾರಿಕೋದ್ಯಮಿಗಳು ಭಾನುವಾರ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಕೈಗಾರಿಕಾ ಇಲಾಖೆಯಿಂದ 233 ಅಹವಾಲು ಸ್ವೀಕಾರ ಮಾಡಲಾಗಿದೆ. ಸೂಕ್ತ ಸಾರಿಗೆ, ಕೈಗಾರಿಕಾ ಪ್ರದೇಶಗಳಲ್ಲಿ ತುರ್ತುಚಿಕಿತ್ಸೆ ನಿರ್ಮಿಸುವಂತೆ, ರಾಜ್ಯದ 5 ಜಿಲ್ಲೆಗಳಲ್ಲಿ ಕಾರ್ಮಿಕ ವಿಮಾ ಆಸ್ಪತ್ರೆ ನಿರ್ಮಿಸಿ ಕೊಡುವಂತೆ ಹಾಗೂ ಕೆಪಿಟಿಸಿಎಲ್ ಸಬ್ ಸ್ಟೇಷನ್, ಅಗ್ನಿಶಾಮಕ ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಯ ಕೈಗಾರಿಕೋದ್ಯಮಿಗಳು ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

ಕೈಗಾರಿಕೆಗಳಿಗೆ ವಿಧಿಸಲಾಗುತ್ತಿರುವ ವಿದ್ಯುತ್ ದರ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್ ದರ ಕಡಿಮೆ ಮಾಡಲು ಒತ್ತಾಯಿಸಲಾಗಿದೆ. ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತ ವಾಹನ ನಿಲುಗಡೆ, ಕಿರು ಅಂಗಡಿಗಳ ತೆರವಿಗೆ ಕೈಗಾರಿಕಾ ಇಲಾಖೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ.

ತರಕಾರಿ ಬೆಲೆಗಳಲ್ಲಿ ದಿಢೀರ್ ಏರಿಕೆ
ಟೊಮ್ಯಾಟೊ ಸೇರಿದಂತೆ ತರಕಾರಿಗಳ ಬೆಲೆ ಇಂದು (ಅಕ್ಟೋಬರ್ 10) ದಿಢೀರ್ ಏರಿಕೆ ಕಂಡಿದೆ. ರಾಜ್ಯದ ಹಲವೆಡೆ ಭಾರಿ ಮಳೆ ಹಿನ್ನೆಲೆ ತರಕಾರಿಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು,ಟೊಮ್ಯಾಟೊ, ಕ್ಯಾರೆಟ್ ಬೆಲೆಗಳು ಏರಿಕೆಯಾಗಿವೆ. ಪ್ರತೀ ತರಕಾರಿ ಮೇಲೆ 10 ರಿಂದ 20 ರೂಗಳಷ್ಟು ಹೆಚ್ಚಳವಾಗಿದ್ದು ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.

ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ 30 ರಿಂದ 40 ರೂ. ಗೆ ಏರಿಕೆ
ಹಸಿ ಮೆಣಸಿನಕಾಯಿ ಕೆ.ಜಿ 50 ರಿಂದ 70ಕ್ಕೆ ಏರಿಕೆ
ಬೆಂಡೇಕಾಯಿ 40 ರಿಂದ 60 ರೂ.ಗೆ ಏರಿಕೆ
ಹೂಕೋಸು ಕೆಜಿ 30 ರಿಂದ 40ಕ್ಕೆ ಏರಿಕೆ
ಬದನೆಕಾಯಿ 30 ರಿಂದ 40 ರೂ. ಏರಿಕೆ
ಹಾಗಲಕಾಯಿ 40 ರಿಂದ 50 ರೂ.ಗೆ ಏರಿಕೆ

ಇದನ್ನೂ ಓದಿ: China Economy: ಕೊರೊನಾಗೆ ಮುಂಚಿನ 2020ರ ಫೆಬ್ರವರಿಗಿಂತ ಕೆಳಗಿಳಿಯಿತು ಚೀನಾದ ಕೈಗಾರಿಕೆ ಚಟುವಟಿಕೆ

ಇದನ್ನೂ ಓದಿ: Coal Crisis: ಕಲ್ಲಿದ್ದಲು ಅಭಾವದಿಂದ ವಿದ್ಯುತ್ ಉತ್ಪಾದನೆ ಕುಸಿತ; ಅರ್ಧ ರಾಜ್ಯಕ್ಕೆ ಕತ್ತಲಿನ ಭೀತಿ

Read Full Article

Click on your DTH Provider to Add TV9 Kannada