ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್; ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್!

Online Gambling Ban in Karnataka: ರಾಜ್ಯದಲ್ಲಿ ಆನ್​ಲೈನ್ ಗೇಮ್ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಆದೇಶ ಅಧಿಕೃತವಾಗಿ ಹೊರಬಿದ್ದಂತಾಗಿದೆ.

ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್; ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ ಬ್ಯಾನ್!
ಪ್ರಾತಿನಿಧಿಕ ಚಿತ್ರ

ಆನ್‌ಲೈನ್ ಜೂಜುಕೋರರಿಗೆ ಸರ್ಕಾರದಿಂದ ಶಾಕ್ ನೀಡಲಾಗಿದ್ದು, ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಗ್ಯಾಂಬ್ಲಿಂಗ್ (Online gambling)​ ಅನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಡ್ರೀಮ್ ಇಲೆವೆನ್ (Dream 11), ಪೇ ಟೀಂ ಫಸ್ಟ್ (PayTM first), ಗೇಮ್​ಜಿ (Gamezy) ಆ್ಯಪ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್ (Fantasy gamess) ಆಪ್​ಗಳನ್ನು ಸ್ಥಗಿತಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸರ್ಕಾರ ಆನ್‌ಲೈನ್ ಗೇಮ್‌, ಆನ್‌ಲೈನ್ ಜೂಜು, ಬೆಟ್ಟಿಂಗ್‌ಗೆ ನಿಷೇಧ ಹೇರಿತ್ತು. ಇದೀಗ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಆನ್‌ಲೈನ್ ಜೂಜು ನಿಷೇಧದ ಆದೇಶ ಅಧಿಕೃತವಾಗಿ ಹೊರಬಿದ್ದಿದೆ.

ಇತ್ತೀಚೆಗಷ್ಟೇ ಸರ್ಕಾರ ಲಾಟರಿ ಹೊರತುಪಡಿಸಿ, ಕಂಪ್ಯೂಟರ್ ಮತ್ತು ಮೊಬೈಲ್ ‌ಸೇರಿ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ ಹಣದ ವ್ಯವಹಾರ ನಡೆಸುವ ಆನ್ ಲೈನ್ ಗ್ಯಾಂಬ್ಲಿಂಗ್ ಗೇಮ್ ನಿಷೇಧಕ್ಕೆ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿತ್ತು. ಈಗಾಗಲೇ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಆನ್​ಲೈನ್ ಜೂಜನ್ನು ನಿಷೇಧಿಸಲಾಗಿದೆ. ತಮಿಳು ನಾಡು ಸರ್ಕಾರವೂ ಈ ಕುರಿತು ಆದೇಶ ಹೊರಡಿಸಿದೆ. ಆದರೆ ಅಲ್ಲಿ ಪ್ರಕರಣವು ಸದ್ಯ ನ್ಯಾಯಾಲಯದಲ್ಲಿರುವುದರಿಂದ ಸಂಪೂರ್ಣವಾಗಿ ನಿಷೇಧವನ್ನು ಜಾರಿಗೊಳಿಸಲಾಗಿಲ್ಲ. ಇದೀಗ ಕರ್ನಾಟಕದಲ್ಲಿ ಆನ್​ಲೈನ್ ಜೂಜಿಗೆ ಅಧಿಕೃತವಾಗಿ ನಿಷೇಧದ ಆದೇಸ ಹೊರಬಿದ್ದಿದೆ. ಇತ್ತೀಚೆಗಷ್ಟೇ ಎಂಪಿಎಲ್ ಸೇರಿದಂತೆ ಹಲವು ಫ್ಯಾಂಟಸಿ ಗೇಮ್​ಗಳು ಕರ್ನಾಟಕ ರಾಜ್ಯದ ಬಳಕೆದಾರರಿಗೆ ಆಡಲು, ಸರ್ಕಾರದಿಂದ ಅನುಮತಿ ಇಲ್ಲ ಎಂಬ ಸಂದೇಶವನ್ನು ಪ್ರಕಟಿಸಿದ್ದವು.

ಆನ್​ಲೈನ್ ಜೂಜನ್ನು ಪ್ರಸ್ತುತಪಡಿಸುವ ಈ ಆಪ್​ಗಳು ಇದುವರೆಗೆ ಇವುಗಳನ್ನು ಕೌಶಲ್ಯಯುತ ಆಟಗಳು ಎಂದು ಕರೆಯುತ್ತಿದ್ದವು. ಆದ್ದರಿಂದಲೇ ಭಾರತೀಯ ಕಾನೂನಿನಲ್ಲಿ ಅವುಗಳಿಗೆ ಕಠಿಣವಾದ ನಿಯಮಗಳು ಅನ್ವಯವಾಗುತ್ತಿರಲಿಲ್ಲ. ಇದೀಗ ಕರ್ನಾಟಕದ ಆನ್​ಲೈನ್ ಜೂಜು ನಿಷೇಧ ಕಾಯ್ದೆಯ ಅನ್ವಯ, ‘ಕೌಶಲ್ಯಯುತ ಆಟಗಳೂ ಸೇರಿದಂತೆ, ಆನ್​ಲೈನ್ ಗೇಮ್​ಗಳಲ್ಲಿ, ಫಲಿತಾಂಶ ಖಚಿತವಾಗಿರದ ಆಟಗಳಲ್ಲಿ ಹಣವನ್ನು ಒಡ್ಡುವುದು ಅಪರಾಧ’ ಎಂದು ಕಾಯ್ದೆ ಹೇಳುತ್ತದೆ. ಈ ಮೂಲಕ ಆನ್​ಲೈನ್ ಜೂಜಿಗೆ ನಿಷೇಧ ಹೇರಿದೆ.

ಇದನ್ನೂ ಓದಿ:

ಆನ್​ಲೈನ್ ಗೇಮ್ ಬ್ಯಾನ್: ಅನ್ನಪೂರ್ಣೇಶ್ವರಿ ನಗರದಲ್ಲಿ ಡ್ರೀಮ್ 11 ಆನ್ಲೈನ್ ಗೇಮ್ ಆ್ಯಪ್ ವಿರುದ್ಧ ಎಫ್ಐಆರ್

ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ ನಿಷೇಧಕ್ಕೆ ಕರ್ನಾಟಕ ಸರ್ಕಾರ ತೀರ್ಮಾನ: ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಪ್ರಕಟ

Read Full Article

Click on your DTH Provider to Add TV9 Kannada