ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ವೀಕ್ ಆಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ

Siddaramaiah: ಜೆಡಿಎಸ್ ಅಭ್ಯರ್ಥಿ ಸೋತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಿದ್ರೂ ಸೋತರು. ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಹೀಗೆ ಸೋಲುತ್ತಿದ್ದರಾ ಎಂದು ನಿಖಿಲ್ ಸೋಲಿನ ಬಗ್ಗೆ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ವೀಕ್ ಆಗಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
TV9 Web
| Updated By: ganapathi bhat

Updated on: Oct 10, 2021 | 2:35 PM

ಮಂಡ್ಯ: ನಾನು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಆದರೂ ಹೆಚ್‌.ಡಿ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ. ಅದಕ್ಕೆ ನಾನೇನು ಮಾಡಲಿ. ನಾನು ಹೆಚ್.ಡಿ. ದೇವೇಗೌಡ, ಹೆಚ್‌.ಡಿ. ಕುಮಾರಸ್ವಾಮಿ ಬಗ್ಗೆ ಮಾತಾಡೋದು ಬಿಟ್ಟಿದ್ದೇನೆ. ಅವರು ನನ್ನ ಮಾತಿಗೆ ಕೋಮುವಾದಿ ಬಣ್ಣ ಕಟ್ಟುತ್ತಾರೆ. ಕೋಮುವಾದಿ ಬಣ್ಣ ಕಟ್ಟಿ ತಿರುಚುವ ಕೆಲಸ ಮಾಡ್ತಾರೆ. ಅವರು ಟೀಕೆ ಮಾಡಿದರೆ ಮಾಡಿಕೊಳ್ಳಲಿ ಬಿಡಿ. ನಾನು ಅವರ ಹೇಳಿಕೆಗಳನ್ನು ನಿರ್ಲಕ್ಷ್ಯ ಮಾಡ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ವೀಕ್ ಆಗಿದೆ. ಜೆಡಿಎಸ್ ಸ್ಟ್ರಾಂಗ್ ಇದ್ದಿದ್ರೆ ಚುನಾವಣೆ ಸೋಲ್ತಿದ್ರಾ? ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಸೋಲುತ್ತಿತ್ತಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾವು ಅಭ್ಯರ್ಥಿ ಹಾಕಿರಲಿಲ್ಲ. ಆದರೂ ಕೂಡ ಜೆಡಿಎಸ್ ಅಭ್ಯರ್ಥಿ ಸೋತಿದ್ದರು. ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಶಾಸಕರಿದ್ರೂ ಸೋತರು. ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಹೀಗೆ ಸೋಲುತ್ತಿದ್ದರಾ ಎಂದು ನಿಖಿಲ್ ಸೋಲಿನ ಬಗ್ಗೆ ಟೀಕೆ ಮಾಡಿದ್ದಾರೆ.

ಮೈಶುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ಇರಬೇಕು. ಖಾಸಗೀಕರಣ ಮಾಡಬಾರದೆಂದು ಒತ್ತಾಯ ಮಾಡಿದ್ದಾರೆ. ರೈತ ಹಿತರಕ್ಷಣಾ ಸಮಿತಿ ಈ ಬಗ್ಗೆ 2 ಬಾರಿ ಒತ್ತಾಯ ಮಾಡಿದೆ. 65 ಸಕ್ಕರೆ ಕಾರ್ಖಾನೆಗಳಲ್ಲಿ ಇದೊಂದೇ ಉಳಿದಿರುವುದು. ಸರ್ಕಾರಿ ಸ್ವಾಮ್ಯದಲ್ಲಿ ಉಳಿದಿರೋದು ಇದೊಂದೆ ಕಾರ್ಖಾನೆ. ಕಾರಣಾಂತರಗಳಿಂದ ಮೈಶುಗರ್ ಕಾರ್ಖಾನೆಗೆ ನಷ್ಟವಾಗಿದೆ. ಇದಕ್ಕೆ ರೈತರು ಹೊಣೆಯಲ್ಲ, ಸರ್ಕಾರವೇ ಹೊಣೆಯಾಗಿದೆ. ಸಂಸ್ಥೆಗಳು ನಷ್ಟದಲ್ಲಿದೆ ಎಂದು ಮಾರುವುದಕ್ಕೆ ಆಗುತ್ತಾ? ಮೈಶುಗರ್ ಕಾರ್ಖಾನೆ ಉಳಿಸುವ ಕೆಲಸ ಮಾಡಬೇಕು. ಆದರೆ ಸರ್ಕಾರ ಮಾರುವ ಹುಚ್ಚು ಕೆಲಸಕ್ಕೆ ಕೈ ಹಾಕಿದೆ ಎಂದು ಮಂಡ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ನಮ್ಮ ಸರ್ಕಾರ ಬಂದ 2 ತಿಂಗಳಲ್ಲಿ ಕಾರ್ಖಾನೆ ಆರಂಭ ಮಾಡುತ್ತೇವೆ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸುತ್ತೇವೆ. ಹಿಂದೆ ನಮ್ಮ ಸರ್ಕಾರವಿದ್ದಾಗ 145 ಕೋಟಿ ರೂಪಾಯಿ ನೀಡಿದ್ದೆವು. ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲೇ ನಡೆಯುವಂತೆ ಮಾಡಿದ್ದೆವು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗಿರುವ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರದಿಂದ ಬೇಕಾದಷ್ಟು ಕಲ್ಲಿದ್ದಲು ತರಿಸಿಕೊಳ್ಳಬೇಕು. ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ನಿಲ್ಲಿಸಬಾರದು. ಉತ್ಪಾದನೆ ನಿಲ್ಲಿಸಿದರೆ ರೈತರು, ಗ್ರಾಹಕರಿಗೆ ತೊಂದರೆ ಆಗುತ್ತದೆ ಎಂದು ತಿಳಿಸಿದ್ದಾರೆ.

ಆರ್‌ಎಸ್ಎಸ್ ಒಂದು ಕೋಮುವಾದಿ ಸಂಘಟನೆ. ಅದು ಶ್ರೇಣೀಕೃತ ವ್ಯವಸ್ಥೆ ಪರವಾಗಿ ಇರುವ ಸಂಘಟನೆ. ಹೀಗಾಗಿ ನಾನು ಆರ್​ಎಸ್​ಎಸ್​ ವಿರುದ್ಧ ಮಾತನಾಡುತ್ತೇನೆ. ನಾನು ರಾಜಕೀಯಕ್ಕೆ ಬಂದಾಗಿನಿಂದ ಆರ್​ಎಸ್​ಎಸ್​ ವಿರೋಧಿಸ್ತಿದ್ದೇನೆ ಎಂದು ಮಂಡ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರಾಜಕೀಯ ಬದುಕು ಕೊಟ್ಟ ಪಕ್ಷವನ್ನೇ ನಿಂದಿಸುತ್ತಿದ್ದಾರೆ; ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಸರಣಿ ಟ್ವೀಟ್

ಇದನ್ನೂ ಓದಿ: ಸೋನಿಯಾ ಗಾಂಧಿ ನನ್ನನ್ನು ರಾಷ್ಟ್ರ ರಾಜಕೀಯಕ್ಕೆ ಕರೆದಿಲ್ಲ: ಸಿದ್ದರಾಮಯ್ಯ