ಸೋನಿಯಾ ಗಾಂಧಿ ನನ್ನನ್ನು ರಾಷ್ಟ್ರ ರಾಜಕೀಯಕ್ಕೆ ಕರೆದಿಲ್ಲ: ಸಿದ್ದರಾಮಯ್ಯ
ಈ ಹಿಂದೆ ರಾಹುಲ್‌ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಆಗು ಎಂದಿದ್ದರು, ನಾನೇ ನಿರಾಕರಿಸಿದ್ದೆ. ನಾನು ರಾಜ್ಯ ರಾಜಕಾರಣದಲ್ಲಿ ಕಂಪರ್ಟ್ ಆಗಿದ್ದೇನೆ. ಹಿಂದೆ ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದೆ ಎಂದು ಸಿಎಲ್ಪಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಂಗಳೂರು: ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನನ್ನ ಬಳಿ ರಾಷ್ಟ್ರ ರಾಜಕೀಯದ ಬಗ್ಗೆ ಚರ್ಚೆ ಮಾಡಿಲ್ಲ. ಅವರ ಬಳಿ ಕೇವಲ ಕರ್ನಾಟಕ ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಷ್ಟ್ರ ರಾಜಕಾರಣಕ್ಕೆ ಸೋನಿಯಾಗಾಂಧಿ ನನ್ನ ಕರೆದಿಲ್ಲ. ಈ ಹಿಂದೆ ರಾಹುಲ್‌ಗಾಂಧಿ ಅವರು ಪ್ರಧಾನ ಕಾರ್ಯದರ್ಶಿ ಆಗು ಎಂದಿದ್ದರು, ನಾನೇ ನಿರಾಕರಿಸಿದ್ದೆ. ನಾನು ರಾಜ್ಯ ರಾಜಕಾರಣದಲ್ಲಿ ಕಂಪರ್ಟ್ ಆಗಿದ್ದೇನೆ. ಹಿಂದೆ ಕಾರ್ಯಕಾರಿ ಸಮಿತಿಗೂ ರಾಜೀನಾಮೆ ನೀಡಿದ್ದೆ ಎಂದು ಸಿಎಲ್ಪಿ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರೈತರ ಮೇಲೆ ಕಾರ್ ನುಗ್ಗಿಸಿ ನಾಲ್ವರು ರೈತರನ್ನು ಕೊಲ್ಲಲಾಗಿದೆ. ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ಇದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಿಸುವಂತಿದೆ. ಇದಕ್ಕೆ ನೇರ ಹೊಣೆ ಸಚಿವ ಅಜಯ್ ಮಿಶ್ರಾ. ಅವರ ಮಗನನ್ನು ಕೂಡಲೇ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು. ಮೋದಿ ಸರ್ಕಾರದಲ್ಲಿ ರೈತರನ್ನು ಲಘುವಾಗಿ ಪರಿಗಣಿಸಿದ್ದಾರೆ. ರೈತರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ. ಮೋದಿ ಸರ್ಕಾರ ರೈತ ವಿರೋಧಿ ಇದೊಂದು ಸರ್ವಾಧಿಕಾರಿ ಸರ್ಕಾರ. ಬಿಜೆಪಿಗೆ ಅಸತ್ಯ, ಅಹಿಂಸೆ ಮೇಲೆ ನಂಬಿಕೆ ಇದ್ದು, ಇವರ ಕೈಗೆ ಅಧಿಕಾರ ದೊರೆತಿರುವುದು ದುರಾದೃಷ್ಟ ಎಂದು ಟೀಕಿಸಿದರು.
ಇದನ್ನೂ ಓದಿ:
ದುನಿಯಾ ವಿಜಯ್ ‘ಸಲಗ’ಕ್ಕೆ ಸಿದ್ದರಾಮಯ್ಯ ಬೆಂಬಲ; ತಂಡಕ್ಕೆ ಒಳ್ಳೆಯದಾಗಲಿ ಎಂದ ಮಾಜಿ ಸಿಎಂ
Published On - 3:19 pm, Tue, 5 October 21