ಬೆಂಗಳೂರು: ಸೈಟ್​ ಕೊಡಿಸುವುದಾಗಿ ನಂಬಿಸಿ, ಕೋಟಿ ಕೋಟಿ ಹಣ ಪೀಕಿದ ಬಿಜೆಪಿ ಮುಖಂಡ

ಜಯಕುಮಾರ್ ಎಂಬಾತ ನಾನು ಬಿಜೆಪಿ ಮುಖಂಡ ಎಂದು ಹೇಳಿಕೊಂಡು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಸೈಟ್​ ಕೊಡಿಸುವುದಾಗಿ ನಂಬಿಸಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾನೆ.

ಬೆಂಗಳೂರು: ಸೈಟ್​ ಕೊಡಿಸುವುದಾಗಿ ನಂಬಿಸಿ, ಕೋಟಿ ಕೋಟಿ ಹಣ ಪೀಕಿದ ಬಿಜೆಪಿ ಮುಖಂಡ
ಬಿಜೆಪಿ ನಾಯಕರುಗಳ ಜೊತೆ ಫೋಟೋಗೆ ಫೋಸ್​ ಕೊಟ್ಟು ಸೈಟ್​ ಕೊಡಿಸುವುದಾಗಿ ವಂಚಿಸುತ್ತಿದ್ದ ಜಯಕುಮಾರ್​
Edited By:

Updated on: Feb 05, 2023 | 12:29 PM

ಬೆಂಗಳೂರು: ಶಾಂತಿಪುರ ನಿವಾಸಿ ಜಯಕುಮಾರ್ ಎಂಬಾತ ತಾನು ಬಿಜೆಪಿ ಮುಖಂಡ ಎಂದು ಹೇಳಿಕೊಂಡು, ಬಿಜೆಪಿಯ ನಾಯಕರುಗಳಾದ ಕೇಂದ್ರ ಸಚಿವ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜತೆ ಫೋಟೋಗೆ ಪೋಸ್ ಕೊಟ್ಟು, ಸೈಟ್ ಕೊಡಿಸೋದಾಗಿ ನಂಬಿಸಿ ಐಟಿ ಬಿಟಿ ಮಂದಿ ಸೇರಿದಂತೆ ಹೊರ ರಾಜ್ಯದವರಿಂದ ಲಕ್ಷ ಲಕ್ಷ ಹಣ ಕಟ್ಟಿಸಿಕೊಂಡು, ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ್ದಾನೆ. ಅತ್ತ ಸೈಟು ಸಿಗದೇ ಇತ್ತ ಹಣವೂ ಸಿಗದೇ ಕಂಗಾಲಾದ ಯುವತಿಯರು ಮೈಕೋ ಲೆಔಟ್ ಪೊಲೀಸ್ ಠಾಣೆ ಸೇರಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇನ್ನು ಇತ ಎಲೆಕ್ಟ್ರಾನಿಕ್ ಸಿಟಿಯ ಕಾನ್ ಕಾರ್ಡ್ ವಿಲ್ಲಾದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಜಯಕುಮಾರ್​. ಕೊಟ್ಟ ದುಡ್ಡು ವಾಪಸ್ ಕೇಳಲು ಹೋದರೆ ಜಾತಿ ನಿಂದನೆ ಕೇಸ್ ಹಾಕಿಸುವ ಬೆದರಿಕೆ ಒಡ್ಡುತ್ತಿದ್ದ. ಅಷ್ಟೇ ಅಲ್ಲದೇ ಜಯಕುಮಾರ್ ಗ್ರಾಹಕರಿಂದ‌ ನೇರವಾಗಿ ಹಣ ಪಡೆಯದೇ ಮೂರನೇ ವ್ಯಕ್ತಿ ಕಡೆಯಿಂದ ವ್ಯವಹಾರ ಮಾಡಿಸುತ್ತಿದ್ದನು. ಗ್ರಾಹಕರು ತಮ್ಮ ಹಣ ವಾಪಾಸ್ ಕೇಳಲು ಬಂದ ಸಮಯದಲ್ಲಿ ಹಣ‌ ನನಗೆ ಕೊಟ್ಟಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದ. ಇತನ ಮೋಸದಾಟಕ್ಕೆ ಅನೇಕ ಬಿಜೆಪಿ ನಾಯಕರನ್ನು ಬಳಸಿಕೊಂಡಿದ್ದಾನೆ. ಇನ್ನು ಜಯಕುಮಾರ್​ ಮೇಲೆ 2007‌ರಿಂದ ಪರಪ್ಪನ ಅಗ್ರಹಾರ‌‌ ಠಾಣೆಯಲ್ಲಿ ರೌಡಿಶೀಟ್ ಓಪನ್ ಆಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Sun, 5 February 23