AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾಥ ವಾಹನ ತೆರವು ಕಾರ್ಯಾಚರಣೆಗೆ ಜಿಬಿಎ ನಿರಾಸಕ್ತಿ: ರಸ್ತೆಗಳಲ್ಲೇ ಧೂಳು ಹಿಡಿಯುತ್ತಿವೆ ಸಾವಿರಾರು ವಾಹನಗಳು!

ಬೆಂಗಳೂರಿನ ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ಜಿಬಿಎ ಮಂದಗೊಳಿಸಿದೆ. ಚಾಮರಾಜಪೇಟೆ ಹಾಗೂ ಬಸವನಗುಡಿಯಲ್ಲಿ ಅನಾಥ ವಾಹನಗಳಿಂದ ಸಂಚಾರ ದಟ್ಟಣೆ ಮತ್ತು ಪಾದಾಚಾರಿಗಳಿಗೆ ಕಿರಿಕಿರಿ ಉಂಟಾಗಿದ್ದು, ಜಿಬಿಎ ಮತ್ತು ಟ್ರಾಫಿಕ್ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ವೇಗ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅನಾಥ ವಾಹನ ತೆರವು ಕಾರ್ಯಾಚರಣೆಗೆ ಜಿಬಿಎ ನಿರಾಸಕ್ತಿ: ರಸ್ತೆಗಳಲ್ಲೇ ಧೂಳು ಹಿಡಿಯುತ್ತಿವೆ ಸಾವಿರಾರು ವಾಹನಗಳು!
ಸಾಂದರ್ಭಿಕ ಚಿತ್ರImage Credit source: Bengalore Mirror
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Oct 28, 2026 | 8:08 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಅನಾಥ ವಾಹನಗಳ ತೆರವು ಕಾರ್ಯಾಚರಣೆ ತಣ್ಣಗಾಗಿ ಜಿಬಿಎ ನಿರಾಸಕ್ತಿ ತಳೆದಿದೆ.
  • ಚಾಮರಾಜಪೇಟೆ ಮತ್ತು ಬಸವನಗುಡಿಯಲ್ಲಿ ಅನಾಥ ವಾಹನಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.
  • ತೆರವು ಕಾರ್ಯಾಚರಣೆಗೆ ವೇಗ ನೀಡುವಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 28: ನಗರದ ಸಾರ್ವಜನಿಕ ರಸ್ತೆಗಳು ಹಾಗೂ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿಕೊಂಡಿರುವ ಅನಾಥ ವಾಹನಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಾಗಿ ಘೋಷಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಆರಂಭದಲ್ಲಿ ತೋರಿಸಿದ ಉತ್ಸಾಹವನ್ನು ಈಗ ಕೈಬಿಟ್ಟಂತೆ ಕಾಣುತ್ತಿದೆ. ಕಾರ್ಯಾಚರಣೆ ತಣ್ಣಗಾಗಿರುವ ಪರಿಣಾಮ ನಗರದಲ್ಲಿ ಇಂದಿಗೂ ಸಾವಿರಾರು ಅನಾಥ ವಾಹನಗಳು ಸಂಚಾರ ದಟ್ಟಣೆ ಹಾಗೂ ಪಾದಾಚಾರಿಗಳ ಕಿರಿಕಿರಿಗೆ ಕಾರಣವಾಗಿವೆ.

ಅಂಕಿ-ಅಂಶ ಮತ್ತು ವಾಸ್ತವದ ವ್ಯತ್ಯಾಸ

ಜಿಬಿಎ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಜುಲೈ 10 ರಿಂದ ಆರಂಭವಾದ ವಿಶೇಷ ಕಾರ್ಯಾಚರಣೆಯಲ್ಲಿ ಈವರೆಗೆ 2,122 ವಾಹನಗಳಿಗೆ ನೋಟಿಸ್ ಅಂಟಿಸಲಾಗಿದ್ದು, 1,948 ವಾಹನಗಳನ್ನು ತೆರವು ಮಾಡಲಾಗಿದೆ. ಆದರೆ ನಗರದ ಮೂಲ ಮೂಲೆಗಳಲ್ಲಿ ಕಸದಂತೆ ಬಿದ್ದಿರುವ ಅನಾಥ ವಾಹನಗಳಿಗೆ ಇನ್ನೂ ನೋಟಿಸ್ ಕೂಡ ಬಿದ್ದಿಲ್ಲ ಎಂಬುದು ಸ್ಪಷ್ಟವಾಗಿದೆ.

ಚಾಮರಾಜಪೇಟೆ ಮತ್ತು ಬಸವನಗುಡಿಯಲ್ಲಿ ಹೆಚ್ಚಿದ ಸಂಕಷ್ಟ

ಟಿವಿ9 ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಚಾಮರಾಜಪೇಟೆ ಹಾಗೂ ಬಸವನಗುಡಿ ಪ್ರದೇಶಗಳಲ್ಲಿ ಅನಾಥ ವಾಹನಗಳ ಕಾಟ ಮಿತಿಮೀರಿರುವುದು ಕಂಡುಬಂದಿದೆ. ಚಾಮರಾಜಪೇಟೆಯಲ್ಲಿನ ಟ್ಯಾಂಕ್ ಮಿಲ್ ಸ್ಮಶಾನ ರಸ್ತೆಯುದ್ದಕ್ಕೂ ಅನಾಥ ಕಾರು, ಆಟೋ ಹಾಗೂ ದ್ವಿಚಕ್ರ ವಾಹನಗಳೇ ಸಾಲು ಗಟ್ಟಿ ನಿಂತಿವೆ. ರಸ್ತೆ ಮಾತ್ರವಲ್ಲದೆ ಪಾದಾಚಾರಿಗಳು ನಡೆಯುವ ಫುಟ್‌ಪಾತ್‌ಗಳನ್ನೂ ಈ ವಾಹನಗಳು ಅತಿಕ್ರಮಿಸಿವೆ. ಬಸವನಗುಡಿಯ ಈಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್‌ನಲ್ಲಿ ನಿಲ್ಲಿಸಲಾಗಿರುವ ಹಳೆಯ ವಾಹನಗಳಿಂದಾಗಿ ನಿತ್ಯವೂ ಸಂಚಾರ ದಟ್ಟಣೆ ಸೃಷ್ಟಿಯಾಗುತ್ತಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LIVE TV

ಸಾರ್ವಜನಿಕರ ಆಕ್ರೋಶ

ವಾಹನ ಖರೀದಿಸುವ ಮುನ್ನ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇದೆಯೇ ಎಂಬುದನ್ನು ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಾರ್ವಜನಿಕ ರಸ್ತೆಗಳನ್ನು ಗ್ಯಾರೇಜ್ ಅಥವಾ ಕಸದ ತೊಟ್ಟಿಯಂತೆ ಬಳಸುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇನ್ನಾದರೂ ಜಿಬಿಎ (GBA) ಹಾಗೂ ಸಂಚಾರ ಪೊಲೀಸರು ಜಂಟಿಯಾಗಿ ಎಚ್ಚೆತ್ತುಕೊಂಡು ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ತೀವ್ರಗೊಳಿಸಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More