ಬೆಂಗಳೂರು; ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರ ವಿರುದ್ಧದ ಆರೋಪಗಳಿಗೆ ಕಡಿವಾಣ ಹಾಕಲು ಬಾಡಿವೋರ್ನ್ ಕ್ಯಾಮೆರಾ ಬಳಕೆ
ಇತ್ತೀಚೆಗೆ ರಾತ್ರಿ ಪಾಳಯದ ಪೊಲೀಸರ ವಿರುದ್ಧ ಪದೇ ಪದೇ ಸುಲಿಗೆ ಸೇರಿದಂತೆ ಅನುಚಿತ ವರ್ತನೆ ಆರೋಪಗಳು ಕೇಳಿ ಬಂದಿತ್ತು. ಇದಕ್ಕೆ ಕಡಿವಾಣ ಹಾಕಲು ಆಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಅವರು ಬಾಡಿ ವೋರ್ನ್ ಕ್ಯಾಮೆರಾ ಬಳಕೆಗೆ ಮೊರೆಹೋಗಿದ್ದಾರೆ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರದ ಪೊಲೀಸರ (Bengaluru Police) ವಿರುದ್ಧ ಸುಲಿಗೆ, ಅನುಚಿತ ವರ್ತನೆ ಇತ್ಯಾದಿ ಆರೋಪಗಳು ಮೇಲಿಂದ ಮೇಲೆ ಬರಲು ಆರಂಭವಾಗಿದ್ದವು. ಇದಕ್ಕೆ ಕಡಿವಾಣ ಹಾಕಲು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ (DCP C.K.Baba) ಅವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಮಾಯಕರನ್ನ ಸುಲಿಗೆ ಮಾಡುವ ಪೊಲೀಸರಿಗೆ ಕಡಿವಾಣ ಹಾಕಲು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮೆರಾ (Body worn Camera) ಬಳಕೆಗೆ ಚಾಲನೆ ನೀಡಲಾಗಿದೆ. ಆ ಮೂಲಕ ಬಾಡಿವೋರ್ನ್ ಕ್ಯಾಮೆರಾ ಬಳಸಿದವರಲ್ಲಿ ಆಗ್ನೇಯ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ಮೊದಲಿಗರು ಎಂದು ಎನಿಸಿಕೊಂಡಿದ್ದಾರೆ.
ರಾತ್ರಿ ತಪಾಸಣೆ ವೇಳೆ ಬಾಡಿವೋರ್ನ್ ಕ್ಯಾಮೆರಾ ಬಳಕೆಗೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ 50 ಬಾಡಿ ವೋರ್ನ್ ಕ್ಯಾಮೆರಾ ಬಳಕೆ ಮಾಡಲು ಮುಂದಾಗಿದ್ದಾರೆ. ಆ ಮೂಲಕ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಅಥವಾ ತಪಾಸಣೆ ಮಾಡುವ ಪೊಲೀಸ್ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಧರಿಸಿ ತಪಾಸಣೆ ಮಾಡಬೇಕು. ಈ ಕ್ಯಾಮೆರಾ ಬಳಕೆಯಿಂದಾಗಿ ಪೊಲೀಸರ ನಡವಳಿಕೆಯನ್ನು ನೋಡಿಕೊಳ್ಳಬಹುದು.
ಇದನ್ನೂ ಓದಿ: Karnataka Weather Today: ಚಳಿಗೆ ಬೆಂಗಳೂರು ಗಡಗಡ; ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಶೀತ ಅಲೆ
ಬಾಡಿವೋರ್ನ್ ಕ್ಯಾಮೆರಾ ಬಳಕೆ ಮಾಡುವ ಪೊಲೀಸರ ಪ್ರತಿ ನಿತ್ಯದ ವಿಡಿಯೋ ರೆಕಾರ್ಡ್ ಅನ್ನು ಡಿಸಿಪಿ ಮಾನಿಟರಿಂಗ್ ಮಾಡುತ್ತಾರೆ. ಈ ಮೂಲಕ ಪೊಲೀಸರ ಮೇಲಿನ ಆರೋಪಗಳಿಗೆ ಕಡಿವಾಣ ಹಾಕಲು ಡಿಸಿಪಿ ಸಿ.ಕೆ.ಬಾಬಾ ಅವರು ಮುಂದಾಗಿದ್ದಾರೆ. ಈ ಬಗ್ಗೆ ತಡರಾತ್ರಿ ಟಿವಿ9 ರಿಯಾಲಿಟಿ ಚೆಕ್ ನಡೆಸಿದಾಗ ಸಿಬ್ಬಂದಿ ಬಾಡಿವೋರ್ನ್ ಕ್ಯಾಮೆರಾ ಬಳಸುತ್ತಿರುವುದು ಕಂಡುಬಂದಿದೆ.
ಬಾಡಿವೋರ್ನ್ ಕ್ಯಾಮೆರಾಗಳನ್ನು ಆರಂಭದಲ್ಲಿ ಸಂಚಾರಿ ಪೊಲೀಸ್ ಇಲಾಖೆಯಲ್ಲಿ ಬಳಕೆ ಮಾಡಲು ಆರಂಭಿಸಲಾಗಿತ್ತು. ಸದ್ಯ ವಾಹನಗಳನ್ನು ತಪಾಸಣೆ ಮಾಡುವ ಸಂಚಾರಿ ಪೊಲೀಸ್ ಸಿಬ್ಬಂದಿ ಈ ಕ್ಯಾಮೆರಾವನ್ನು ಬಳಕೆ ಮಾಡುತ್ತಿದ್ದಾರೆ. ಇದೀಗ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೂ ಬಳಕೆಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 am, Thu, 12 January 23