Bengaluru Avarebele Mela: ಬೆಂಗಳೂರಿನಲ್ಲಿ ಜ. 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’

|

Updated on: Dec 06, 2023 | 9:39 AM

Bengaluru Avarebele Mela: ಉದ್ಯಾನನಗರಿ ಬೆಂಗಳೂರಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2024 ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’ ನಡೆಯಲಿದೆ. ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದೆ. ಆ ಮೂಲಕ ಸಿಲಿಕಾನ್​ ಸಿಟಿ ಜನರಿಗೆ ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ.

Bengaluru Avarebele Mela: ಬೆಂಗಳೂರಿನಲ್ಲಿ ಜ. 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’
ಅವರೆ ಬೇಳೆ ಮೇಳ (ಸಂಗ್ರಹ ಚಿತ್ರ)
Follow us on

ಬೆಂಗಳೂರು, ಡಿಸೆಂಬರ್​​​ 06: ಪ್ರತಿ ವರ್ಷದಂತೆ ಈ ವರ್ಷವೂ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ 2024 ಜನವರಿ 5 ರಿಂದ 9 ರವರೆಗೆ 24ನೇ ಆವೃತ್ತಿಯ ‘ಅವರೆ ಬೇಳೆ ಮೇಳ’ (Avarebele MelaAvarebele Mela) ನಡೆಯಲಿದೆ. ಶ್ರೀ ವಾಸವಿ ಕಾಂಡಿಮೆಂಟ್ಸ್ ವತಿಯಿಂದ ಮೇಳವನ್ನು ಆಯೋಜಿಸಲಾಗಿದೆ. ಆ ಮೂಲಕ ಉದ್ಯಾನನಗರಿ ಜನರು ವರ್ಷದ ಆರಂಭದಲ್ಲೇ ಅವರೆ ಬೇಳೆ ವಿವಿಧ ಭಕ್ಷ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ. ಅವರೆ ದೋಸೆ, ಪಾಯಸ, ವಡೆ, ಮಂಚೂರಿಯನ್, ಪಫ್, ಹಲ್ವಾ, ಅವರೆ ಐಸ್‌ಕ್ರೀಂ ಮತ್ತು ನೂರಕ್ಕೂ ಹೆಚ್ಚು ತಿನಿಸುಗಳು ಲಭ್ಯವಿರುತ್ತವೆ.

ವಿವಿ ಪುರಂನಲ್ಲಿರುವ ಫುಡ್ ಸ್ಟ್ರೀಟ್ ಇಷ್ಟು ದಿನ ಬೇರೆ ಬೇರೆ ಮೇಳಗಳನ್ನು ನಡೆಸುವ ಸ್ಥಳವಾಗಿತ್ತು. ಕಳೆದ ವರ್ಷ, ಫುಡ್ ಸ್ಟ್ರೀಟ್‌ನಲ್ಲಿ ನವೀಕರಿಸಿದ್ದು ಹೆಚ್ಚಿನ ಜನಸಂದಣಿಯ ಕಾರಣ, ಅದನ್ನು ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ಕಳೆದ ವರ್ಷದ ಅವರೆ ಬೇಳೆ ಮೇಳದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದರಿಂದ ಕಾಲ್ತುಳಿತ ಉಂಟಾಗಿತ್ತು. ಇದರಿಂದಾಗಿ ಸರತಿ ಸಾಲಿನಲ್ಲಿ ನಿಂತು ಕೂಡ ತಮಗೆ ಬೇಕಾದ ಆಹಾರವನ್ನು ಸೇವಿಸಲಿಲ್ಲ. ಐದು ಲಕ್ಷಕ್ಕೂ ಹೆಚ್ಚು ಜನರು ಸ್ಥಳದಲ್ಲಿ ನೆರೆದಿದ್ದರು. ಆದರೆ, ಈ ವರ್ಷ ಅಂತಹ ಪರಿಸ್ಥಿತಿ ಮರುಕಳಿಸದಂತೆ ಆಯೋಜಕರು ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: Bengaluru Avarebele Mela: ತಿಂಡಿ ಪ್ರಿಯರಿಗೆ ಸಿಹಿಸುದ್ದಿ : ಜನವರಿ 5ರಿಂದ ಬೆಂಗಳೂರಿನಲ್ಲಿ ಅವರೆ ಬೇಳೆ ಮೇಳ, ಈ ತಿನಿಸುಗಳು ಲಭ್ಯ

ಕಳೆದ ವರ್ಷ ನಾವು ನಿರೀಕ್ಷಿಸಿರಲಾರದಷ್ಟು ಜನರು ಮೇಳಕ್ಕೆ ಭೇಟಿ ನೀಡಿದ್ದರು. ಮೆಟ್ರೋ ನಿಲ್ದಾಣದಿಂದ ಮೇಳದ ಸ್ಥಳಕ್ಕೆ ಸುಲಭವಾಗಿ ತಲುಪಲು ಸಹಕಾರಿಯಾಗಿದೆ. ಈ ವರ್ಷ ಮೇಳದಲ್ಲಿ ಭಕ್ಷ್ಯಗಳನ್ನು ಸವಿಯದೆ ಯಾರೂ ಮನೆಗೆ ಹೋಗದಂತೆ ಉತ್ತಮ ತಯಾರಿ ನಡೆಸುತ್ತಿದ್ದೇವೆ ಎಂದು ಶ್ರೀ ವಾಸವಿ ಕಾಂಡಿಮೆಂಟ್ಸ್ ಮಾಲೀಕರು ಸ್ವಾತಿ ಕೆ.ಎಸ್. ಹೇಳಿರುವುದಾಗಿ ವರದಿ ಆಗಿದೆ.

ಕಳೆದ ವರ್ಷ ನ್ಯಾಷನಲ್ ಕಾಲೇಜು ಮೈದಾನದ ಒಂದು ಭಾಗವನ್ನು ಮಾತ್ರ ಮೇಳಕ್ಕೆ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಅವರು ಸಂಪೂರ್ಣ ಸ್ಥಳವನ್ನು ಬಳಸಿಕೊಳ್ಳುವುದರೊಂದಿಗೆ ಪಾರ್ಕಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಇನ್ನು ಕಳೆದ ವರ್ಷ ಸುಮಾರು 40 ಸ್ಟಾಲ್‌ಗಳಿದ್ದರೆ, ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ ಎಂದು ಸ್ವಾತಿ ಹೇಳಿದ್ದಾರೆ. “ದೋಸಾದಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್‌ಗಳು ಇರಲಿವೆ”.

ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್​: ಬೆಂಗಳೂರಿನಲ್ಲಿ ಗುಂಡಿಗಳದ್ದೇ ದರ್ಬಾರ್​: ವಾಹನ ಸವಾರರ ಪರದಾಟ

ಹಿರಿಯ ನಾಗರಿಕರಿಗಾಗಿ ವಿಶೇಷ ಕೌಂಟರ್ ಜೊತೆಗೆ, ಅವರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಟಿಕೆಟ್​ ಇದ್ದು, ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತಿ ವ್ಯಕ್ತಿಗೆ ಸುಮಾರು ₹100 ದರದಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಕುಟುಂಬ ಮತ್ತು ಮಕ್ಕಳೊಂದಿಗೆ ಬರುವ ಜನರಿಗೆ ಮತ್ತು ಸರದಿಯಲ್ಲಿ ನಿಲ್ಲಲು ಬಯಸದವರಿಗಾಗಿ.

ಕರ್ನಾಟಕದಲ್ಲಿ ಅವರೆಕಾಯಿ ಬೆಳೆ ನಾಶವಾಗಿದೆ. ಹವಾಮಾನ ವೈಪರೀತ್ಯದಿಂದ ಕರ್ನಾಟಕದಲ್ಲಿ ಸತತ ಎರಡನೇ ವರ್ಷವೂ ಅವರೆಕಾಯಿ ಬೆಳೆ ನಾಶವಾಗಿದೆ. ಮಾರುಕಟ್ಟೆಗೆ ಬಂದಿರುವ ಸ್ಟಾಕ್ ಕೂಡ ಗುಣಮಟ್ಟದಿಂದ ಕೂಡಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಸದ್ಯ ಮಳೆಯ ಅಭಾವ ಮತ್ತು ಹಠಾತ್ ಚಳಿಯಿಂದಾಗಿ ಅವರೆಕಾಯಿಯ ಗುಣಮಟ್ಟ ಕಾಯ್ದುಕೊಳ್ಳಲು ಕಷ್ಟವಾಗುತ್ತಿದೆ. ಸಂಕ್ರಾಂತಿ ಹಬ್ಬದ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಮಲ್ಲೇಶ್ವರದ ವ್ಯಾಪಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ. ಅವರೆಕಾಯಿ ಬೆಲೆ ಸದ್ಯ ಕೆ.ಜಿ.ಗೆ ₹60ರಿಂದ ₹80ರ ಆಸುಪಾಸಿನಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.