ಇನ್ನೇನು ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡಬೇಕಿದ್ದ ಆಟೋ ಚಾಲಕ ಬರ್ಬರ ಹತ್ಯೆ!
ಯುವತಿಯೊಬ್ಬಳನ್ನ ಪ್ರೀತಿಸಿ ಇನ್ನೇನು ಆಕೆಯೊಂದಿಗೆ ಸಪ್ತಪದಿ ತುಳಿದು ಸಂಸಾರ ನಡೆಸಬೇಕಿದ್ದ ಆಟೋ ಚಾಲಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಮುಂದಿನ ತಿಂಗಾಳು ಅಷ್ಟೇ ಪ್ರೀತಿಸಿದಾಕೆಯ ಕೈ ಹಿಡಿಯಬೇಕಿದ್ದ ಆಟೋ ಡ್ರೈವರ್ನನ್ನು ಕೊಚ್ಚಿ ಕೊಂದಿದ್ದಾರೆ.
ಬೆಂಗಳೂರು, (ಡಿಸೆಂಬರ್ 06): ಆಟೋ ಚಾಲಕ (Auto Driver) ಇನ್ನೇನು ಬ್ರಹ್ಮಚರ್ಯದಿಂದ ಗೃಹಸ್ತಾಶ್ರಮಕ್ಕೆ ಕಾಲಿಡುತ್ತಿರಬೇಕು ಎನ್ನುವಷ್ಟರಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ. ಬೆಂಗಳೂರಿನ (Bengaluru) ಟಿಂಬರ್ಲೇಔಟ್ನಲ್ಲಿ ನಿನ್ನೆ(ಡಿಸೆಂಬರ್ 05) ರಾತ್ರಿ 9.30ರ ಸುಮಾರಿಗೆ ಈ ಘಟನೆ ನಡೆದಿದೆ. ಕೊಲೆಯಾದ ಅರುಣ್ಗೆ (24) ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಆದ್ರೆ, 10ಕ್ಕೂ ಹೆಚ್ಚು ದುಷ್ಕರ್ಮಿಗಳು ಅರಣ್ನನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ಪರಿಶೀಲಿಸಿದ್ದು, ಕೊಲೆಗೆ ಕಾರಣವೇನು ಎನ್ನುವುದನ್ನು ತನಿಖೆ ಕೈಗೊಂಡಿದ್ದಾರೆ.
ಆಟೋ ಚಾಲಕ ಅರುಣ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆ ಪ್ರೀತಿಯೊಂದಿಗೆ ಮದುವೆಯಾಗಿ ಸಂಸಾರ ಶುರು ಮಾಡಬೇಕಿದ್ದ. ಅದಕ್ಕೆ ಅಂತಾಲೇ ಮುಂದಿನ ತಿಂಗಳು ಮದುವೆ ಫಿಕ್ಸ್ ಆಗಿತ್ತು. ಆದ್ರೆ, ದುಷ್ಕರ್ಮಿಗಳು ಅರುಣ್ನನ್ನು ಸಪ್ತಪದಿ ತುಳಿಯಲು ಬಿಟ್ಟಿಲ್ಲ. ಪ್ರೀತಿಯ ಹುಡುಗಿ ಜೊತೆ ಮದುವೆಯಾಗಬೇಕಿದ್ದ ಅರುಣ್ ಜೀವ ತೆಗೆದಿದ್ದಾರೆ.
ಹೊಟಪರವಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಕೊಚ್ಚಿ ವ್ಯಕ್ತಿಯ ಹತ್ಯೆ
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಟಪರವಿ ಗ್ರಾಮದಲ್ಲಿ ವ್ಯಕ್ತಿಯೋರ್ವನನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಟಪರವಿ ಗ್ರಾಮದ ನಿವಾಸಿ ಪ್ರಭುರಾಜ್(38) ಹತ್ಯೆ ವ್ಯಕ್ತಿ. ದುಷ್ಕರ್ಮಿಗಳು ನಿನ್ನೆ (ಡಿಸೆಂಬರ್ 05) ಸಂಜೆ ಪ್ರಭುರಾಜ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಕೊಲೆಗೆ ಇನ್ನು ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೈಂ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 am, Wed, 6 December 23