AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Avarebele Mela: ತಿಂಡಿ ಪ್ರಿಯರಿಗೆ ಸಿಹಿಸುದ್ದಿ : ಜನವರಿ 5ರಿಂದ ಬೆಂಗಳೂರಿನಲ್ಲಿ ಅವರೆ ಬೇಳೆ ಮೇಳ, ಈ ತಿನಿಸುಗಳು ಲಭ್ಯ

ಅವರೆ ಬೇಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಅದರಿಂದ ಮಾಡುವ ಬಗೆ ಬಗೆಯ ತಿನಿಸುಗಳು ನೆನಪಾದರೂ ಬಾಯಲ್ಲಿ ನೀರು ಬರುವುದು ಗ್ಯಾರಂಟಿ

Bengaluru Avarebele Mela: ತಿಂಡಿ ಪ್ರಿಯರಿಗೆ ಸಿಹಿಸುದ್ದಿ : ಜನವರಿ 5ರಿಂದ ಬೆಂಗಳೂರಿನಲ್ಲಿ ಅವರೆ ಬೇಳೆ ಮೇಳ, ಈ ತಿನಿಸುಗಳು ಲಭ್ಯ
ಅವರೆಬೇಳೆ
TV9 Web
| Updated By: ನಯನಾ ರಾಜೀವ್|

Updated on: Jan 04, 2023 | 5:58 PM

Share

ಅವರೆ ಬೇಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಅದರಿಂದ ಮಾಡುವ ಬಗೆ ಬಗೆಯ ತಿನಿಸುಗಳು ನೆನಪಾದರೂ ಬಾಯಲ್ಲಿ ನೀರು ಬರುವುದು ಗ್ಯಾರಂಟಿ. ಬವಸನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ 5 ರಿಂದ 9ರವರೆಗೆ ಒಟ್ಟು 5 ದಿನಗಳ ಕಾಲ ಅವರೆ ಬೇಳೆ ಮೇಳ ನಡೆಯಲಿದೆ. ಮೇಳದಲ್ಲಿ ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಖಾಲಿ ದೋಸೆ, ಹನಿ ಜಿಲೇಬಿ, ಹಿತಕದ ಅವರೆ ಬೇಳೆ ರೋಲ್, ಅವರೆಕಾಳು ಚಿತ್ರಾನ್ನ, ಅವರೆ ಬೇಳೆ ಮಂಚೂರಿ, ಪುದೀನಾ ಹಿತಕದ ಅವರೆಬೇಳೆ, ಅವಲಕ್ಕಿ ಮಿಕ್ಸ್, ಗೋಡಂಬಿ ಮಿಕ್ಸ್, ಅವರೆಬೇಳೆ ಜಾಮೂನು, ನಿಪ್ಪಟ್ಟು, ಅವರೆಕಾಳು ಪಲಾವ್ ಹೀಗೆ ಬಗೆಬಗೆಯ ತಿನಿಸುಗಳು ಲಭ್ಯವಾಗಲಿವೆ.

ಬಸವನಗುಡಿಯ ಕಡಲೆಕಾಯಿ ಪರಿಷೆಯಿಂದ ಪ್ರೇರಿತರಾಗಿ ವಾಸವಿ ಕಾಂಡಿಮೆಂಟ್ಸ್​ ಸಜ್ಜನ್​ರಾವ್ ಸರ್ಕಲ್​ನಲ್ಲಿ ಅವರೆ ಬೇಳೆ ಮೇಳವನ್ನು 2000ರಲ್ಲಿ ಶುರು ಮಾಡಿತ್ತು.

100 ಕ್ಕೂ ಹೆಚ್ಚು ಭಕ್ಷ್ಯಗಳು ಲಭ್ಯವಿರಲಿವೆ, ಅವರೆ ಬೇಳೆ ಚಿಕ್ಕಿ, ಅವರೆ ಬೇಳೆ ಹಲ್ವಾ, ಫ್ರೈಡ್​ ರೈಸ್ ಮುಂತಾದವುಗಳು ಲಭ್ಯವಿರಲಿವೆ.

ಈ ವರ್ಷ ಆಯೋಜಕರು ದಿ. ಪುನೀತ್ ರಾಜ್​ಕುಮಾರ್ ಗೌರವಾರ್ಥ ಅಪ್ಪು ಸ್ಪೆಷಲ್ ಎಂಬ ವಿಶೇಷ ಸಿಹಿತಿಂಡಿಯನ್ನು ಪರಿಚಯಿಸಲಿದ್ದಾರೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ರೈತರು ನೇರವಾಗಿ ಈ ಮೇಳದಲ್ಲಿ ಪಾಲ್ಗೊಂಡು ಮಾರಾಟ ಮಾಡುವ ಅವಕಾಶ ನೀಡಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ