AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Crime Rating: ಬೆಂಗಳೂರು ಕ್ರೈಂ ರೇಟಿಂಗ್​ ಹೇಗಿದೆ? ನಗರದಲ್ಲಿ ಕಳೆದ ವರ್ಷ ನಡೆದ ಕ್ರೈಂ ಗಳೆಷ್ಟು: ಇಲ್ಲಿದೆ ಆಯುಕ್ತ ಪ್ರತಾಪ್ ರೆಡ್ಡಿ ಬಿಚ್ಚಿಟ್ಟ ವರದಿ

ಬೆಂಗಳೂರಿನಲ್ಲಿ 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪರಾಧ ಪ್ರಕರಣಗಳು ಕಡೆಮೆಯಾಗಿವೆ ಎಂದು ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Bengaluru Crime Rating: ಬೆಂಗಳೂರು ಕ್ರೈಂ ರೇಟಿಂಗ್​ ಹೇಗಿದೆ? ನಗರದಲ್ಲಿ ಕಳೆದ ವರ್ಷ ನಡೆದ ಕ್ರೈಂ ಗಳೆಷ್ಟು: ಇಲ್ಲಿದೆ ಆಯುಕ್ತ ಪ್ರತಾಪ್ ರೆಡ್ಡಿ ಬಿಚ್ಚಿಟ್ಟ ವರದಿ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 04, 2023 | 5:36 PM

Share

ಬೆಂಗಳೂರು: ನಗರದಲ್ಲಿ ಅಪರಾಧ ಪ್ರಕರಣಗಳು ನಿಯಂತ್ರದಲ್ಲಿವೆ. ಕಳೆದ ವರ್ಷಾ ದೊಡ್ಡ ಮಟ್ಟದ ಮೇಜರ್ ಕ್ರೈಂ ಗಳು ನಡೆದಿಲ್ಲ. ಆದರೆ ಒಂದಷ್ಟು ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿವೆ. 2019ಕ್ಕೆ ಹೋಲಿಸಿದರೆ ಕಳೆದ ವರ್ಷ ಅಪರಾಧ ಪ್ರಕರಣಗಳು ಕಡೆಮೆಯಾಗಿವೆ ಎಂದು ನಗರ ಪೊಲೀಸ್​ ಆಯುಕ್ತ ಪ್ರತಾಪ್ ರೆಡ್ಡಿ (pratap reddy) ತಿಳಿಸಿದರು. ಇಂದು (ಜ. 4) ನಗರದಲ್ಲಿ ಆಯೋಜಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೊದಲನೆಯದಾಗಿ ಡಿಸೆಂಬರ್ 31ರ ರಾತ್ರಿ ನಗರ ಪೊಲೀಸರಿಂದ ವ್ಯಾಪಕವಾಗಿ ಬಂದೂಬಸ್ತ್ ಮಾಡಲಾಗಿದೆ. ಯಾವುದೆ ಅನಾಹುತ ಆಗದಿರುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರ ತುಂಬಾ ದೊಡ್ಡದಾಗಿತ್ತು ಎಂದರು.

ಮೇಜರ್ ಕ್ರೈಂ ಗಳು ನಡೆದಿಲ್ಲ. ಆದರೆ ಒಂದಷ್ಟು ದೊಡ್ಡ ಮಟ್ಟದ ಪ್ರತಿಭಟನೆ

ರಾಜ್ಯೋತ್ಸವ, ಜಿ 20, ಪ್ರಧಾನ ಮಂತ್ರಿಗಳ ಭದ್ರತೆ, ಈದ್ಗಾ ಮೈದಾನ ಭದ್ರತೆ ಸೇರಿ ಹಲವಾರು ಭದ್ರತೆಗಳನ್ನು ಮಾಡಲಾಗಿದೆ. ಸಂಚಾರ ವಿಭಾಗದಲ್ಲಿ ಸಹ ಸಾಕಷ್ಟು ಶ್ರವ ವಹಿಸಿ ಕೆಲಸ ಮಾಡಲಾಗಿದೆ. ಸೇಫ್ ಸಿಟಿ ಪ್ರಾಜೆಕ್ಟ್‌ ಅಡಿಯಲ್ಲಿ ಕ್ಯಾಮರಗಳು ಅಳವಡಿಕೆ ಮಾಡಲಾಗಿದೆ. ಪೇಸ್ ಒನ್ ಕೆಲಸ ಬಹುತೇಕ ಮುಗಿದಿದೆ. ಹಿಜಾಬ್, ವಿದ್ಯಾರ್ಥಿ, ಕಾರ್ಮಿಕರು ಹಾಗೂ ರೈತ ಸಂಘದ ಸಂಸ್ಥೆಗಳಿಂದ ಸುಮಾರು 500 ಹೆಚ್ಚು ಪ್ರತಿಭಟನೆಗಳು ನಡೆದಿದೆ. ನಗರಕ್ಕೆ ಎಂಟು ಮೊಬೈಲ್ ಎಫ್​ಎಸ್​ಎಲ್​ಗಳು ಕೆಲಸ ಮಾಡಿ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ ಅದು ಮತ್ತಷ್ಟು ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು.

ಇದನ್ನೂ ಓದಿ: ಹೋಟೆಲ್​ಗಳಲ್ಲಿ ಸಿಸಿಕ್ಯಾಮೆರಾ ಕಡ್ಡಾಯ: ಹೊಟೇಲ್​ ಮಾಲಿಕರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ

ನಗರದಲ್ಲಿ ನಡೆದ ಅಪರಾಧ ಪ್ರಕರಣಗಳ ಮಾಹಿತಿ ಹೀಗಿದೆ 

  • 2022ರಲ್ಲಿ 34 ವಿದೇಶಿ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ
  • 172 ಕೊಲೆ ಕೇಸ್ ದಾಖಲಾಗಿದ್ದು ಎಲ್ಲ ಕೇಸ್​ಗಳು ಪತ್ತೆ
  • 478 ದರೋಡೆ ಪ್ರಕರಣ ಪೈಕಿ 351 ಕೇಸ್ ಪತ್ತೆ
  • 151 ಸರಗಳ್ಳತನ ಕೇಸ್ ಪೈಕಿ 134 ಕೇಸ್ ಪತ್ತೆ
  • 22 ರೌಡಿಗಳನ್ನು ಗೂಂಡಾ ಕಾಯ್ದೆಯಡಿ ಅರೆಸ್ಟ್
  • 179 ಹಗಲು ಮನೆಗಳ್ಳತನ ಕೇಸ್ ಪೈಕಿ 70 ಕೇಸ್ ಪತ್ತೆ
  • 701 ರಾತ್ರಿ ಮನೆಗಳ್ಳತನ ಕೇಸ್​ ಪೈಕಿ 229 ಪತ್ತೆ
  • 5,066 ವಾಹನ ಕಳ್ಳತನ ಪ್ರಕರಣ​ಗಳ ಪೈಕಿ 1,189 ಕೇಸ್ ಪತ್ತೆ
  • 2,511 ಕಳ್ಳತನ ಪ್ರಕರಣ ಪೈಕಿ 561 ಕೇಸ್ ಪತ್ತೆ
  • ಬೆಂಗಳೂರಲ್ಲಿ 2022ರಲ್ಲಿ ಒಟ್ಟು 9,281 ಕೇಸ್ ದಾಖಲಾಗಿದ್ದವು
  • 9,281 ಪ್ರಕರಣಗಳ ಪೈಕಿ 2,728 ಕೇಸ್​ಗಳು ಪತ್ತೆ

2021ಕ್ಕೆ ಹೋಲಿಸಿದ್ರೆ 2022ರಲ್ಲಿ 30 ಪರ್ಸೆಂಟ್ ಹೆಚ್ಚಳ

ಇನ್ನು ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಏರಿಕೆ ಆಗಿದ್ದು, 2021ಕ್ಕೆ ಹೋಲಿಸಿದ್ರೆ 2022ರಲ್ಲಿ 30 ಪರ್ಸೆಂಟ್ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಒಟ್ಟು 153 ಅತ್ಯಾಚಾರ ಕೇಸ್ ದಾಖಲಾಗಿದ್ದು, 153 ಅತ್ಯಾಚಾರ ಪ್ರಕರಣ ಪೈಕಿ 149 ಕೇಸ್ ಲವ್, ಮದುವೆ, ಲಿವ್ ಇನ್ ರಿಲೇಷನ್​ಶಿಪ್ ಮತ್ತು ಸಂಬಂಧಿಕರಿಂದ ಕೃತ್ಯಗಳು ನಡೆದಿವೆ. ಇನ್ನುಳಿದ 4 ಅತ್ಯಾಚಾರ ಕೇಸ್​ನ ಆರೋಪಿಗಳನ್ನ ಬಂಧಿಸಿದ್ದೇವೆ. ನಗರದಲ್ಲಿ ಒಟ್ಟು 579 ಡ್ರಗ್​ ಪೆಡ್ಲರ್ಸ್​​ ಬಂಧನ ಮಾಡಿದ್ದು, ಆರೋಪಿಗಳಿಂದ 3,746 ಕೆಜಿ ಗಾಂಜಾ, 167 ಕೆಜಿ ಡ್ರಗ್ಸ್, ಒಟ್ಟು 89.53 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ವಾಹನ ಸವಾರರಿಂದ 179 ಕೋಟಿ ದಂಡ ವಸೂಲಿ ಮಾಡಲಾಗಿದೆ ಎಂದು ಪ್ರತಾಪ್ ರೆಡ್ಡಿ ಮಾಹಿತಿ ನೀಡಿದರು.

ಇದನ್ನೂ ಓದಿ: ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಟ್ಟುನಿಟ್ಟು ಕ್ರಮಕ್ಕೆ ಸೂಚನೆ

ಇನ್ನು ಪೊಲೀಸರಿಂದ ಹಣ ವಸೂಲಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ತಪ್ಪು ಮಾಡಿದವರ ವಿರುದ್ದ ಕ್ರಮ ಆಗೋದಕ್ಕೂ ಸಮಯ ಬೇಕಿದೆ. ಅಂತವರ ವಿರುದ್ದ ಖಂಡಿತ ಕ್ರಮವಾಗುತ್ತದೆ. ಮುಂದಿನ ವರ್ಷ ಸಹ ಇನ್ನೂ ಹೆಚ್ಚಿನ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!