AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಟೆಲ್​ಗಳಲ್ಲಿ ಸಿಸಿಕ್ಯಾಮೆರಾ ಕಡ್ಡಾಯ: ಹೊಟೇಲ್​ ಮಾಲಿಕರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ

ಹೊಸ ವರ್ಷಾಚರಣೆಗೆ ಸುರಕ್ಷತಾ ಕ್ರಮಗಳ ಬಗ್ಗೆ ಹೋಟೆಲ್​ನವರಿಗೆ ಮಾರ್ಗದರ್ಶನ ಮಾಡಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ

ಹೋಟೆಲ್​ಗಳಲ್ಲಿ ಸಿಸಿಕ್ಯಾಮೆರಾ ಕಡ್ಡಾಯ: ಹೊಟೇಲ್​ ಮಾಲಿಕರಿಗೆ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ
ಸಿಹೆಚ್ ಪ್ರತಾಪ ರೆಡ್ಡಿ, ಪೊಲೀಸ್ ಕಮಿಷನರ್ , ಬೆಂಗಳೂರು
TV9 Web
| Updated By: ವಿವೇಕ ಬಿರಾದಾರ|

Updated on:Dec 16, 2022 | 9:25 PM

Share

ಬೆಂಗಳೂರು: 2019ರ ನಂತರ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ (News Year) ನಡೆಯುತ್ತಿದೆ. ಹೀಗಾಗಿ ಬೆಂಗಳೂರಿನ ಎಲ್ಲ ಹೋಟೆಲ್​ನವರು ಹೊಸ ವರ್ಷಾಚರಣೆಯನ್ನು ಜೋರಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಹೊಟೇಲ್​ಗಳಲ್ಲಿ ಸಿಸಿಕ್ಯಾಮರಾ ಅಳವಡಿಸಬೇಕು. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಕ್ರಿಮಿನಲ್​ ಹಿನ್ನೆಲೆಯುಳ್ಳವರು ಬಂದಾಗ ಗಮನ ಹರಿಸುವಂತೆ ಹೊಟೇಲ್​ ಮಾಲಿಕರಿಗೆ ಸೂಚಿಸಿದ್ದೇನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ (Bengaluru city police commissioner pratap reddy) ಹೇಳಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಇಂದು (ಡಿ.16) ಹೊಟೇಲ್​, ಪಬ್ ಮತ್ತು ಕ್ಲಬ್ ಮಾಲೀಕರೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಡಿ.31ರಂದು ಹೊಸ ವರ್ಷಾಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಸುರಕ್ಷತಾ ಕ್ರಮಗಳ ಬಗ್ಗೆ ಹೋಟೆಲ್​ನವರಿಗೆ ಮಾರ್ಗದರ್ಶನ ಮಾಡಿದ್ದೇವೆ. ಹೋಟೆಲ್​ನವರು ನಮಗೆ ಕೆಲವು ಸಲಹೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: 78 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ: ನ್ಯೂ ಇಯರ್​ಗೆ 4 ಸಾವಿರ ಕ್ಯಾಮೆರಾ ಕಣ್ಗಾವಲು: ಆರಗ ಜ್ಞಾನೇಂದ್ರ

ವಾಹನ ಸಂಚಾರ ನಿರ್ವಹಣೆ ಬಗ್ಗೆಯೂ ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನದಟ್ಟಣೆ ನಿರ್ವಹಣೆ, ವಿದ್ಯುತ್ ಸಮಸ್ಯೆ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇವೆ. ಜನ ಜಾಸ್ತಿ ಬರೋದರಿಂದ ತಾತ್ಕಾಲಿಕವಾಗಿ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಅವರ ಬಗ್ಗೆಯು ಸಹ ವಿಚಾರಿಸೋದಕ್ಕೆ ಹೇಳಿದ್ದೇವೆ. ಕ್ರಿಮಿನಲ್ ಹಿನ್ನಲೆ ಇದ್ದರೆ ಅಂತವರ ಬಗ್ಗೆ ಗಮನ ಹರಿಸೋಕೆ ಸೂಚಿಸಿದ್ದೇವೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ, ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಇ

ಯಾರೇ ದೂರು ಕೊಟ್ಟರು ಸಹ ಕ್ರಮ ಜರುಗಿಸುತ್ತೇವೆ

ಇನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಸಭೆ ನಡೆಸಿರುವ ವಿಚಾರವಾಗಿ ಮಾತನಾಡಿದ ಅವರು 6-8 ತಿಂಗಳಲ್ಲಿ ಏನೆನೆಲ್ಲಾ ಕೆಲಸ ಆಗಿದೆ ಅದೆಲ್ಲದರ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಸೇಫ್ ಸಿಟಿ ಬಗ್ಗೆ ಸಹ ಚರ್ಚೆಯಾಗಿದೆ. ಕೆಲಸದ ಕಾರ್ಯಗಳ ಪ್ರಗತಿ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಕೆಲ ದಿನಗಳಿಂದ ಪೊಲೀಸರ ವಿರುದ್ಧ ಬಂದಂತಹ ದೂರುಗಳ ಬಗ್ಗೆ ವಿವರಣೆ ಕೇಳಿದರು ಕೊಟ್ಟಿದ್ದೇವೆ. ಯಾರೇ ದೂರು ಕೊಟ್ಟರು ಸಹ ಕ್ರಮ ಜರುಗಿಸುತ್ತೇವೆ. ಯಾರೇ ಸಾರ್ವಜನಿಕರು ದೂರು ನೀಡಿದರು ಸಹ ಆಯಾ ಭಾಗದ ಡಿಸಿಪಿಗಳು ವೈಯಕ್ತಿವಾಗಿ ನೋಡಿ ಕ್ರಮ ಕೈಗೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದೇವೆ. ಯಾರೇ ದೂರು ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ದೂರುದಾರರ ದೂರು, ಸರಿಯಾಗಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕ್ಲಬ್​ಗೆ ಮಾತ್ರ ಸಮಯ ನಿಗದಿ ಇರುತ್ತೆ, ರಸ್ತೆಯಲ್ಲಿ ನಿರ್ಬಂಧವಿಲ್ಲ

ಹೊಸ ವರ್ಷಾಚರಣೆಗೆ ಪಬ್, ಕ್ಲಬ್​ನವರು ಸಿದ್ಧತೆ ನಡೆಸಿದ್ದೇವೆ. ಬ್ರಿಗೇಡ್ ಸ್ಟೋರ್ಸ್ ಮತ್ತು ಎಸ್ಟಾಬ್ಲಿಷ್​ಮೆಂಟ್​​ ಅಸೋಸಿಯೇಷನ್​ ಕ್ಲಬ್​ಗೆ ಮಾತ್ರ ಸಮಯ ನಿಗದಿ ಇರುತ್ತೆ, ರಸ್ತೆಯಲ್ಲಿ ನಿರ್ಬಂಧವಿಲ್ಲ ಎಂದು ಅಸೋಸಿಯೇಷನ್​ ಕಾರ್ಯದರ್ಶಿ ಸುಹೇಲ್ ಯೂಸುಫ್​ ಹೇಳಿದ್ದಾರೆ.

ಜನರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪೂರ್ತಿ ಲೈಟಿಂಗ್ಸ್​ ಇರುತ್ತೆ. ಪೊಲೀಸರು ಕೆಲವು ಸಲಹೆ ಸೂಚನೆ ನೀಡಿದ್ದಾರೆ, ನಾವು ನೀಡಿದ್ದೇವೆ. ಜನರ ಓಡಾಟಕ್ಕೆ ಒನ್​ವೇ ಮಾಡಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದೇವೆ. ಹೊಸ ವರ್ಷಾಚರಣೆಗೆ ಸರ್ಕಾರ ಇನ್ನೂ ಸಮಯ ನಿಗದಿ ಮಾಡಿಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:19 pm, Fri, 16 December 22