AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ, ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಇ

ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ, ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಇ
ಲೋಕಾಯುಕ್ತ ಕಚೇರಿ
TV9 Web
| Edited By: ವಿವೇಕ ಬಿರಾದಾರ|

Updated on: Dec 16, 2022 | 7:50 PM

Share

ಬೆಂಗಳೂರು: ಲೋಕಾಯುಕ್ತ (Lokayukta) ಬಲೆಗೆ ಬೆಸ್ಕಾಂ (BESCOM) ಉತ್ತರ ವಿಭಾಗ ಎಇ ಆನಂದ್  ಬಿದಿದ್ದಾರೆ. ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ ಪಡೆಯುವ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾರೆ. ಎಇ ಆನಂದ್ ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 50 ಸಾವಿರ ಲಂಚ ಕೇಳಿದ್ದರು. ಈ ಹಿನ್ನೆಲೆ 40 ಸಾವಿರ ರೂ ಲಂಚವನ್ನು ಬೆಂಗಳೂರಿನ ರಾಜಾಜಿನಗರದ ಮುಖ್ಯ ರಸ್ತೆಯಲ್ಲಿ ಪಡೆಯುವ ವೇಳೆ ಲೋಕಾಯುಕ್ತ ಎಸ್​ಪಿ ಅಶೋಕ್ ನೇತೃತ್ವದ ತಂಡ ದಾಳಿ ಮಾಡಿ ಆನಂದ್​ನನ್ನು ಬಂಧಿಸಿದ್ದಾರೆ.

ಆನಂದ್​ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕೇಸ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಆನಂದ್​​ನ್ನು ಸದ್ಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಪರವಾನಗೆ ಪಡೆಯದ, ರಿನಿವಲ್ ಆಗದ ಕ್ಲಿನಿಕ್​ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ನೆಲಮಂಗಲ: ನೆಲಮಂಗಲ ಪಟ್ಟಣದಲ್ಲಿ ಪರವಾನಗೆ ಪಡೆಯದ, ರಿನಿವಲ್ ಆಗದ ಕ್ಲಿನಿಕ್​, ಲ್ಯಾಬ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಾಲೂಕು ವೈದ್ಯಾಧಿಕಾರಿ ಹೇಮಲತಾ ಹಾಗೂ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. KPME ಆ್ಯಕ್ಟ್ ಅಡಿ ನೋಂದಣಿ ಮಾಡಿಕೊಳ್ಳದ ಕ್ಲಿನಿಕ್​ಗೆ ನೋಟಿಸ್ ನೀಡಿದ್ದಾರೆ. ಹಾಗೇ ಸೂಕ್ತ ದಾಖಲೆಗಳಿಲ್ಲದ ಕ್ಲಿನಿಕ್‌ಗಳನ್ನು ಕೂಡಲೇ ಮುಚ್ಚುವಂತೆ ಸೂಚನೆ ನೀಡಿದ್ದಾರೆ. ವೈದ್ಯಾಧಿಕಾರಿ ಹೇಮಲತಾ, ಮಲ್ಲಿಗೆ ಪಾಲಿ ಕ್ಲಿನಿಕ್, ಕಾಮಧೇನು ಡಯಾಗ್ನೋಸ್ಟಿಕ್ ಲ್ಯಾಬ್ ಹಾಗೂ ಶ್ರೀಗಣೇಶ ಕ್ಲಿನಿಕ್​ನ್ನು ಸೀಜ್ ​ಮಾಡಿದ್ದಾರೆ. ಆರ್​​ಐ, ವಿಎ, ನೆಲಮಂಗಲ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.

ಗಾಂಜಾ ಬೆಳೆದಿದ್ದವನ ಮನೆ ಮೇಲೆ ಸೈಬರ್ ಕ್ರೈಂ ಪೊಲೀಸರ ದಾಳಿ

ಚಾಮರಾಜನಗರ: ಗಾಂಜಾ ಬೆಳೆದಿದ್ದವನ ಮನೆ ಮೇಲೆ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯ ಶಿವನಾಗಶೆಟ್ಟಿ ಬಂಧಿತ ಆರೋಪಿ. ಪೊಲೀಸರ ದಾಳಿ ವೇಳೆ 6 ಗಾಂಜಾ ಗಿಡ, 5 ಕೆಜಿ ಜಿಂಕೆ ಮಾಂಸ, 5 ಕರಡಿ ಉಗುರು ಹಾಗೂ 21 ಕಾಡುಬೆಕ್ಕಿನ ಉಗುರು ಪತ್ತೆಯಾಗಿವೆ. ಪೊಲೀಸರು 1 ನಾಡಬಂದೂಕು, 30 ಸಿಡಿಮದ್ದು ಜಪ್ತಿ ಮಾಡಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ