ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಟ್ಟುನಿಟ್ಟು ಕ್ರಮಕ್ಕೆ ಸೂಚನೆ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆ್ಯಪ್ ಆಧಾರಿತ ಅಗತ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನ ನೀಡಿದ್ದಾರೆ.

ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿ, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಟ್ಟುನಿಟ್ಟು ಕ್ರಮಕ್ಕೆ ಸೂಚನೆ
ಸಿಹೆಚ್ ಪ್ರತಾಪ ರೆಡ್ಡಿ, ಪೊಲೀಸ್ ಕಮಿಷನರ್ , ಬೆಂಗಳೂರು
Follow us
TV9 Web
| Updated By: ಆಯೇಷಾ ಬಾನು

Updated on:Dec 03, 2022 | 1:02 PM

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಅಗತ್ಯ ಸೇವಾ ಕಂಪನಿಗಳಿಗೆ ಟಫ್ ರೂಲ್ಸ್ ಹೇರಲಾಗಿದೆ. ಇತ್ತೀಚಿನ ಕೆಲ ಘಟನೆಗಳ ಬಳಿಕ ಎಚ್ಚೆತ್ತ ನಗರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನಗರದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಚಾಲಕರಿಂದ ಲೈಂಗಿಕ ದೌರ್ಜನ್ಯ, ಕಿರುಕುಳ, ಕೆಲವು ವೇಳೆ ದರೋಡೆ, ಸುಲಿಗೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಆ್ಯಪ್ ಆಧಾರಿತ ಅಗತ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪೊಲೀಸರು ಸಭೆ ನಡೆಸಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆ್ಯಪ್ ಆಧಾರಿತ ಅಗತ್ಯ ಸೇವಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆದಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನ ನೀಡಿದ್ದಾರೆ. ಅಪರಾಧ ಹಿನ್ನಲೆಯುಳ್ಳವರು ಕಾರ್ಯ ನಿರ್ವಹಣೆ ಹಿನ್ನೆಲೆ, ಅಂಥವರ ಮೇಲೆ ಕಣ್ಣಿಡಲು ಸೂಚಿಸಿದ್ದಾರೆ. ಕೆಲಸ‌ಕ್ಕೆ ಸೇರುವವರ ಹಿನ್ನಲೆ‌ ಪರಿಶೀಲನೆ ನಡೆಸುವುದು ಕಂಪನಿಗಳ ಜವಾಬ್ದಾರಿ. ಕೆಲಸಕ್ಕೆ‌ ಸೇರುವವರ ವಿಳಾಸ ಪರಿಶೀಲನೆ ನಡೆಸುವುದು ಕಡ್ಡಾಯ. ಅಪರಾಧ ಹಿನ್ನಲೆ‌ಯುಳ್ಳವರನ್ನ ಕೆಲಸಕ್ಕೆ ನೇಮಿಸಿಕೊಳ್ಳಬಾರದು. ಹಾಗೂ ಈ ಬಗ್ಗೆ ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು. ಸಿಬ್ಬಂದಿ ನೇಮಕವಾದ ನಂತರ ತಿಂಗಳಿಗೊಮ್ಮೆ ಅವರ ಹಿನ್ನಲೆ‌ ಪರಿಶೀಲನೆ‌ ಮಾಡುವುದು ಕಡ್ಡಾಯ. ನೇಮಕವಾದವರ ಸಂಪೂರ್ಣ ಮಾಹಿತಿ ಆ್ಯಪ್ ನಲ್ಲಿ ನಮೂದನೆ ಕಡ್ಡಾಯ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಸಂಬಂಧಪಟ್ಟವರೆ ನೇರ ಹೊಣೆ. ಹೀಗೆ ನಗರ ಪೊಲೀಸ್ ಆಯುಕ್ತರು ಹತ್ತಕ್ಕೂ ಹೆಚ್ಚು ಸಲಹೆ ಸೂಚನೆಗಳನ್ನ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರ‍್ಯಾಪಿಡೋ ರೈಡ್ ಬುಕ್ ಮಾಡಿ ಮನೆಗೆ ಹೊರಟಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರಿನಲ್ಲಿ ರ‍್ಯಾಪಿಡೋ ರೈಡ್ ಬುಕ್ ಮಾಡಿ ಮನೆಗೆ ಹೊರಟಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಬೆಂಗಳೂರಿನಲ್ಲಿ ನ.28ರ ರಾತ್ರಿ ಭೀಕರ ಘಟನೆಯೊಂದು ನಡೆದಿತ್ತು. ರ‍್ಯಾಪಿಡೋ ಬೈಕ್ ಸವಾರ ಹಾಗೂ ಆತನ ಸ್ನೇಹಿತರು ಸೇರಿಕೊಂಡು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹೇಯ ಕೃತ್ಯ ಎಸಗಿದ್ದರು. ಅಂದು ರಾತ್ರಿ ಮುಸ್ಲಿಂ ಯುವತಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಈ ವೇಳೆ ರ‍್ಯಾಪಿಡೋ ಬೈಕ್ ಸವಾರ ಯುವತಿಯನ್ನು ಬಿಟಿಎಂ ಲೇಔಟ್​ನಿಂದ ಪಿಕ್​ ಮಾಡಿ ಎಲೆಕ್ಟ್ರಾನಿಕ್​ಸಿಟಿಯಲ್ಲಿರುವ ಆಕೆಯ ಮನೆಗೆ ಡ್ರಾಪ್​ ಮಾಡಬೇಕಿತ್ತು. ಆದ್ರೆ ಯುವತಿ ಕುಡಿದ ನಶೆಯಲ್ಲಿರುವುದನ್ನು ಗಮನಿಸಿ ಆಕೆಯನ್ನು ಮನೆಗೆ ಬಿಡುವ ಬದಲು ರೂಮ್​ಗೆ ಕರೆದೊಯ್ದಿದ್ದಿದ್ದಾನೆ. ಯುವತಿಯನ್ನು ತನ್ನ ರೂಮ್​ಗೆ ಕರೆದೊಯ್ದು ರ‍್ಯಾಪಿಡೋ ಬೈಕ್ ಸವಾರ ಮತ್ತು ಆತನ ಸ್ನೇಹಿತ ಅತ್ಯಾಚಾರವೆಸಗಿದ್ದಾರೆ. ಘಟನೆ ಬಗ್ಗೆ ಎಲೆಕ್ಟ್ರಾನಿಕ್​ಸಿಟಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು ರ‍್ಯಾಪಿಡೋ ಬೈಕ್ ಸವಾರ ಶಹಾಬುದ್ದೀನ್ ಮತ್ತು ಆತನ ಸ್ನೇಹಿತ ಅಖ್ತರ್​ ಹಾಗೂ ಅತ್ಯಾಚಾರ ನಡೆದರೂ ಏನೂ ಮಾಡದೆ ರೂಮಿನಲ್ಲಿದ್ದ ಯುವತಿಯನ್ನು ಪೊಲೀಸರು​ ವಶಕ್ಕೆ ಪಡೆದಿದ್ದಾರೆ.

Published On - 1:02 pm, Sat, 3 December 22