Sign In

By signing in or creating an account, you agree with Associated Broadcasting Company's Terms & Conditions and Privacy Policy.

International Day of Disabled Persons: ವಿಶೇಷ ಚೇತನರಿಗೆಪ್ರಶಸ್ತಿ ಪ್ರದಾನ ಮಾಡಿ, ವಿಶೇಷ ಆರೋಗ್ಯ ವಿಮೆ ಘೋಷಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಚೇತನರಿಗೆಸಿಎಂ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು.

International Day of Disabled Persons: ವಿಶೇಷ ಚೇತನರಿಗೆಪ್ರಶಸ್ತಿ ಪ್ರದಾನ ಮಾಡಿ, ವಿಶೇಷ ಆರೋಗ್ಯ ವಿಮೆ ಘೋಷಿಸಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಆಯೇಷಾ ಬಾನು

Updated on:Dec 03, 2022 | 1:44 PM

ಬೆಂಗಳೂರು: ಇಂದು (ಡಿ.3) ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ(International Day of Disabled Persons) ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಚೇತನರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇದೇ ವೇಳೆ ವಿಕಲಚೇತನರಿಗೆ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ ಘೋಷಿಸಿದ್ದಾರೆ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಶೇಷ ಚೇತನರಿಗೆ ಸಿಎಂ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಮಾತನಾಡಿದ ಅವರು, ನನ್ನೆಲ್ಲ ದೇವರ ಮಕ್ಕಳಿಗೆ ನಮಸ್ಕಾರ. ನಿಮ್ಮ‌ ಬಗ್ಗೆ ಏನೆಲ್ಲಾ ಮಾಡಬೇಕು ಎಂಬ ಚಿಂತನೆ ಮಾಡಿದ್ದೇವೆ. ನಿಮ್ಮ ಸಚಿವರೇ ಆದ ಹಾಲಪ್ಪ ಆಚಾರ್ ಇದ್ದಾರೆ. ದೇವರು ಸೃಷ್ಟಿಸುವಾಗ ಹಲವಾರು ಸವಾಲುಗಳನ್ನು ಮನುಷ್ಯರಲ್ಲಿ ಹುಟ್ಟಿಹಾಕ್ತಾನೆ. ಎಲ್ಲಾ ಅಂಗಾಂಗವಿದ್ದರೂ ಹಲವು ಹತ್ತು ಕೊರತೆಗಳು ಇರುತ್ತವೆ. ನಿಮ್ಮಲ್ಲಿ ಯಾರಿಗೂ ಕಡಿಮೆ ಇದ್ದೇವೆ ಎಂಬ ಕೊರಗು ಬೇಡ. ನೀವು ದೇವರ ಮಕ್ಕಳು. ವಿಶೇಷ ಶಕ್ತಿ ಹೊಂದಿರುವ ಮಕ್ಕಳು‌ ನೀವು. ನಮ್ಮೆಲ್ಲರಿಗಿಂತಲೂ ಶಕ್ತಿಶಾಲಿ ಮಕ್ಕಳು ನೀವು. ಬದುಕಿ ತೋರಿಸೋ ಛಲ ನಿಮ್ಮಲ್ಲಿ ಇರಲಿ. ಮಾನವೀಯ ಧರ್ಮವನ್ನ ಪ್ರತಿಯೊಬ್ಬ ಮನುಷ್ಯನಿಗೂ ದೇವರು ಕೊಟ್ಟಿರ್ತಾನೆ. ಅದನ್ನ‌ ಕೆಲವರು ಮರೆಯುತ್ತಾರೆ. ಕೆಲವರು ಅಳವಡಿಸಿಕೊಳ್ತಾರೆ. ಇಡೀ ಸಮಾಜ ಅವಲೋಕನ ಮಾಡಬೇಕು. ದೇವರ ಮಕ್ಕಳಿಗೆ ಸಹಾಯ‌ ಮಾಡಬೇಕು. ನಿಮ್ಮ ‌ಬದುಕಿನಲ್ಲಿ ಇದನ್ನ‌ ಅಳವಡಿಸಿಕೊಳ್ಳಿ. ಅವರ ಬದುಕಿಗೆ ಸಹಾಯ ಮಾಡಿ. ಇಲ್ಲಿ ಯಾವುದು ಅಸಾಧ್ಯ ಇಲ್ಲ. ಮಾಡುವ ಮನಸ್ಸಿರಬೇಕು ಎಂದು ಸಿಎಂ ಬೊಮ್ಮಾಯಿ ವಿಕಲಚೇತನರಿಗೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಎಸ್​.ಎಂ.ಕೃಷ್ಣ; ಕಾರ್ಯಕರ್ತರಿಂದ ವಿಶೇಷ ‌ಪೂಜೆ

ವಿಶೇಷವಾದ ಆರೋಗ್ಯಸಿರಿ ಯೋಜನೆ ಘೋಷಿಸಿದ ಸಿಎಂ

ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ವಿಶೇಷ ಚೇತನರಿಗೆ 5 ಲಕ್ಷ ರೂ.ವರೆಗೆ ವಿಶೇಷ ಆರೋಗ್ಯ ವಿಮೆ ಘೋಷಿಸಿದ್ದಾರೆ. ಮುಂದಿನ ಬಜೆಟ್​ನಲ್ಲಿ ವಿಶೇಷ ಅನುದಾನ ಕೊಡುತ್ತೇನೆ. ಅಂಗವಿಕಲರ ಆರೋಗ್ಯಕ್ಕೋಸ್ಕರ ವಿಶೇಷವಾದ ಆರೋಗ್ಯಸಿರಿ ಯೋಜನೆಯನ್ನ ನಿಮಗಾಗಿ ಪ್ರಾರಂಭ ಮಾಡುತ್ತೇನೆ. ವಿಕಲಚೇತನರಿಗೆ ಮೀಸಲಾತಿ ಪ್ರಮಾಣ 3% ಏರಿಸುತ್ತೇವೆ. ಬುದ್ದಿಮಾಂಧ್ಯ ಮಕ್ಕಳಿಗೆ ಶೆಲ್ಟರ್ಡ್ ವರ್ಕ್ ಶಾಪ್ ಗಳನ್ನ ಮಾಡುವ ತೀರ್ಮಾನ ಮಾಡುತ್ತೇನೆ. ಇದೇ ವರ್ಷ ಪವರ್ ಟ್ರೇ ಸೈಕಲ್ ಕೊಡುತ್ತೇನೆ. ಅದಕ್ಕಾಗಿ 15 ಕೋಟಿ ಜೊತೆಗೆ ಇನ್ನು 22 ಕೋಟಿ ಮೀಸಲಿಟ್ಟು ಒಟ್ಟು 200 ಪವರ್ ಟ್ರೈ ಸೈಕಲ್ ಕೊಡುತ್ತೇನೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:44 pm, Sat, 3 December 22

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು