ಬಾಂಗ್ಲಾ ಯುವತಿಯ ಗ್ಯಾಂಗ್​ರೇಪ್ ಪ್ರಕರಣ: ಮೂವರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ವಶಕ್ಕೆ

|

Updated on: May 28, 2021 | 6:36 PM

ಬಾಂಗ್ಲಾದ ಓರ್ವ ಯುವತಿ, ಸಾಗರ್, ರಿದಾಯ್ ಬಾಬು, ಮೊಹಮ್ಮದ್ ಬಾಬಾಶೇಕ್, ಹೈದರಾಬಾದ್‌ನ ಹಕೀಲ್ ಅವರುಗಳೇ ಬಂಧಿತರಾಗಿದ್ದಾರೆ. ಆರೋಪಿಗಳು ಎನ್​ಆರ್​ಐ ಲೇಔಟ್​​ನಲ್ಲಿ ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

ಬಾಂಗ್ಲಾ ಯುವತಿಯ ಗ್ಯಾಂಗ್​ರೇಪ್ ಪ್ರಕರಣ: ಮೂವರು ಆರೋಪಿಗಳು 10 ದಿನಗಳ ಕಾಲ ಪೊಲೀಸ್ ವಶಕ್ಕೆ
ಪೊಲೀಸ್ ಸಿಬ್ಬಂದಿ
Follow us on

ಬೆಂಗಳೂರು: ಬಾಂಗ್ಲಾ ಯುವತಿಯ ಮೇಲೆ ಗ್ಯಾಂಗ್​ರೇಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗುರುನಾನಕ್ ಭವನದ ಕೋರ್ಟ್ 14 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ. ಜತೆಗೆ ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸ್​ ಸಿಬ್ಬಂದಿಗೆ ಕೊವಿಡ್ ಆತಂಕ ಆರಂಭವಾಗಿದೆ. ಬಂಧಿತ 6 ಆರೋಪಿಗಳ ಪೈಕಿ ಓರ್ವನಾದ ಮೊಹಮ್ಮದ್ ಬಾಬು ಶೇಕ್​​ಗೆ ಕೊರೊನಾ ದೃಢಪಟ್ಟಿದ್ದು, ಸಿಸಿಬಿ ಮತ್ತು ರಾಮಮೂರ್ತಿನಗರ ಪೊಲೀಸ್ ಸಿಬ್ಬಂದಿಗೆ ಭೀತಿ ಉಂಟಾಗಿದೆ.

ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯ ಮೇಲೆ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿ ರಾಮಮೂರ್ತಿ ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಾಂಗ್ಲಾದ ಓರ್ವ ಯುವತಿ, ಸಾಗರ್, ರಿದಾಯ್ ಬಾಬು, ಮೊಹಮ್ಮದ್ ಬಾಬಾಶೇಕ್, ಹೈದರಾಬಾದ್‌ನ ಹಕೀಲ್ ಅವರುಗಳೇ ಬಂಧಿತರಾಗಿದ್ದಾರೆ. ಆರೋಪಿಗಳು ಎನ್​ಆರ್​ಐ ಲೇಔಟ್​​ನಲ್ಲಿ ಕಳೆದ 10 ದಿನಗಳ ಹಿಂದೆ ಬಾಂಗ್ಲಾ ಮೂಲದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅತ್ಯಾಚಾರ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು.

ಸಂತ್ರಸ್ಥೆ ಮತ್ತು ಆರೋಪಿಗಳು ಇಬ್ಬರೂ ಬಾಂಗ್ಲಾದೇಶದ ಮೂಲದರಾಗಿದ್ದು, ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ. ಆರೋಪಿಗಳು ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದು, ಸಂತ್ರಸ್ಥೆ ಮೇಲಿನ ದ್ವೇಷದಿಂದ ಓರ್ವ ಯುವತಿ ಜತೆಗೆ ನಾಲ್ವರು ಯುವಕರು ಈ ಪೈಶಾಚಿಕ ಕೃತ್ಯ ಎಸಗಿದ್ದರು. ಬಾಂಗ್ಲಾ ದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ವಿಡಿಯೋ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದ ವಿಡಿಯೋ ಕುರಿತು ತನಿಖೆ ನಡೆಸಿದಾಗ ಕೃತ್ಯದಲ್ಲಿ ಬಾಂಗ್ಲಾ ದೇಶದ ಪ್ರಜೆಗಳು ಭಾಗಿಯಾರುವುದು ಬೆಳಕಿಗೆ ಬಂದಿತ್ತು.

ಯುವತಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ರಿದಾಯ್ ಬಾಬು, ಸಾಗರ್‌ ಕಾಲಿಗೆ ಗುಂಡುಹಾರಿಸಿ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ಸ್ಥಳ ಮಹಜರಿಗೆ ಕೆ.ಚನ್ನಸಂದ್ರಕ್ಕೆ ಕರೆದೊಯ್ದಿದ್ದಾಗ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶಾರಣಾಗುವಂತೆ ಕೇಳಿಕೊಂಡಿದ್ದಾರೆ. ಆದರೆ ಮಾತು ಕೇಳದೆ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಆರೋಪಿಗಳಾದ ರಿದಾಯ್ ಬಾಬು ಬಲಗಾಲಿಗೆ, ಸಾಗರ್ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಾಕಿ ಹಣ ಪಾವತಿಸಿಲ್ಲ ಎಂದು ಕೊವಿಡ್ ಸೋಂಕಿತರ ಮೃತದೇಹ ಹಸ್ತಾಂತರಿಸಲು ತೊಂದರೆ ಮಾಡುವಂತಿಲ್ಲ

ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ

(Bengaluru Bangladeshi girl rape accused the accused were detained to police for 10 days)