Karnataka Covid Update: ಕರ್ನಾಟಕದಲ್ಲಿ ಇಂದು 22,823 ಜನರಿಗೆ ಕೊವಿಡ್ ದೃಢ, 52,253 ಜನರು ಗುಣಮುಖ
Bengaluru Covid Update: ಬೆಂಗಳೂರು ನಗರ ಜಿಲ್ಲೆಯಲ್ಲಿ 5736 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇಂದು ಒಂದೇ ದಿನ 31,237 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 22,823 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 52,253 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 5736 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇಂದು ಒಂದೇ ದಿನ 31,237 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ ಇದೇ ಅವಧಿಯಲ್ಲಿ 1,38,983 ಜನರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಲ್ಲಿ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.16.42ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ ಒಳಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 401 ಜನರ ನಿಧನರಾಗಿದ್ದಾರೆ. ಬಾಗಲಕೋಟೆ 252, ಬಳ್ಳಾರಿ 782, ಬೆಳಗಾವಿ 1,319, ಬೆಂಗಳೂರು ಗ್ರಾಮಾಂತರ 514, ಬೆಂಗಳೂರು ನಗರ 5,736 ಬೀದರ್ 64, ಚಾಮರಾಜನಗರ 318, ಚಿಕ್ಕಬಳ್ಳಾಪುರ 337, ಚಿಕ್ಕಮಗಳೂರು 559, ಚಿತ್ರದುರ್ಗ 489, ದಕ್ಷಿಣ ಕನ್ನಡ 799, ದಾವಣಗೆರೆ 522, ಧಾರವಾಡ 700, ಗದಗ 302, ಹಾಸನ 1170, ಹಾವೇರಿ 137, ಕಲಬುರಗಿ 91, ಕೊಡಗು 245, ಕೋಲಾರ 656, ಕೊಪ್ಪಳ 339, ಮಂಡ್ಯ 825, ಮೈಸೂರು 1,677, ರಾಯಚೂರು 365, ರಾಮನಗರ 339, ಶಿವಮೊಗ್ಗ 1135, ತುಮಕೂರು 1,326, ಉಡುಪಿ 766, ಉತ್ತರ ಕನ್ನಡ 692, ವಿಜಯಪುರ 183, ಯಾದಗಿರಿ ಜಿಲ್ಲೆಯಲ್ಲಿ ಇಂದು 184 ಕೊರೊನಾ ಪ್ರಕರಣ ಪತ್ತೆಯಾಗಿದೆ.
ಜಿಲ್ಲಾವಾರು ಮೃತರ ವಿವರ ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 401 ಜನರ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 192, ಮೈಸೂರು ಜಿಲ್ಲೆ 20 , ಬಳ್ಳಾರಿ ಜಿಲ್ಲೆ 17, ತುಮಕೂರು ಜಿಲ್ಲೆ 15, ಧಾರವಾಡ ಜಿಲ್ಲೆ 14, ಹಾಸನ, ಶಿವಮೊಗ್ಗ ಜಿಲ್ಲೆ 13, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ ಜಿಲ್ಲೆ 11, ಬೆಳಗಾವಿ ಜಿಲ್ಲೆ 10, ಚಿಕ್ಕಬಳ್ಳಾಪುರ, ಯಾದಗಿರಿ ಜಿಲ್ಲೆ 8, ಮಂಡ್ಯ, ಚಿಕ್ಕಮಗಳೂರು ಜಿಲ್ಲೆ 7, ಕೊಪ್ಪಳ ಜಿಲ್ಲೆ 6, ದಕ್ಷಿಣ ಕನ್ನಡ, ಗದಗ, ಹಾವೇರಿ, ಕಲಬುರಗಿ, ಉಡುಪಿ ಜಿಲ್ಲೆ 5, ವಿಜಯಪುರ, ರಾಯಚೂರು, ಚಾಮರಾಜನಗರ ಜಿಲ್ಲೆ 4, ಬೀದರ್, ಬಾಗಲಕೋಟೆ ಜಿಲ್ಲೆ 3, ಚಿತ್ರದುರ್ಗ, ಕೊಡಗು, ದಾವಣಗೆರೆ ಜಿಲ್ಲೆ 3 ಜನರು ನಿಧನರಾಗಿದ್ದಾರೆ.
?ರಾಜ್ಯದಲ್ಲಿ ಇಂದು 52,253 ಜನ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕಡಿಮೆಯಾಗಿದೆ
?ರಾಜ್ಯಾದ್ಯಂತ ಇಂದು 1,38,983 ಟೆಸ್ಟ್ ನಡೆಸಲಾಗಿದ್ದು, 22,823 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದ ಪಾಸಿಟಿವಿಟಿ ದರ 16.42% ರಷ್ಟಿದೆ
?ಬೆಂಗಳೂರಿನಲ್ಲಿ 5,736 ಪ್ರಕರಣ ಪತ್ತೆಯಾಗಿದ್ದು, 31,237 ಜನ ಗುಣಮುಖರಾಗಿದ್ದರೆ.
— Dr Sudhakar K (@mla_sudhakar) May 28, 2021
ಬಾಕಿ ಹಣ ಪಾವತಿಸಿಲ್ಲ ಎಂದು ಕೊವಿಡ್ ಸೋಂಕಿತರ ಮೃತದೇಹ ಹಸ್ತಾಂತರಿಸಲು ತೊಂದರೆ ಮಾಡುವಂತಿಲ್ಲ
ಬಾಕಿ ಇರುವ ಚಿಕಿತ್ಸಾ ಶುಲ್ಕವನ್ನು ಪಾವತಿ ಮಾಡದ ಕಾರಣ ನೀಡಿ ಕೋವಿಡ್ ಸೋಂಕಿತರ ಮೃತ ದೇಹವನ್ನು ಹಸ್ತಾಂತರಿಸುವಲ್ಲಿ ಆಸ್ಪತ್ರೆಗಳು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ ಸರ್ಕಾರಿ ಆದೇಶವನ್ನು ಟ್ವೀಟ್ ಮೂಲಕ ಉಲ್ಲೇಖಿಸಿ ಇಂದು (ಮೇ 28) ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಮೇ 24ರಂದು ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಅಶ್ವತ್ಥ್ ನಾರಾಯಣ ಆ ಸೂಚನೆಯನ್ನು ಇಂದು ಮತ್ತೆ ಹಂಚಿಕೊಂಡಿದ್ದಾರೆ. ಇಂತಹ ಪ್ರಕರಣಗಳು ವರದಿಯಾದಲ್ಲಿ ಅಂತಹ ಆಸ್ಪತ್ರೆಗಳ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 24ರಂದು ಖಡಕ್ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ
ಡಿಆರ್‌ಡಿಒದ ಆಂಟಿ-ಕೊವಿಡ್ ಡ್ರಗ್ ಪ್ಯಾಕೆಟ್ಗೆ ₹990; ಸರ್ಕಾರಿ ಆಸ್ಪತ್ರೆಗಳಿಗೆ ರಿಯಾಯಿತಿ ದರದಲ್ಲಿ ಲಭ್ಯ
Karnataka Covid Update 22823 new cases and 52253 discharges today tweets health minister Dr K Sudhakar
Published On - 7:54 pm, Fri, 28 May 21



