ಬಾಕಿ ಹಣ ಪಾವತಿಸಿಲ್ಲ ಎಂದು ಕೊವಿಡ್ ಸೋಂಕಿತರ ಮೃತದೇಹ ಹಸ್ತಾಂತರಿಸಲು ತೊಂದರೆ ಮಾಡುವಂತಿಲ್ಲ

TV9 Digital Desk

| Edited By: ganapathi bhat

Updated on:Aug 14, 2021 | 1:12 PM

ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು.

ಬಾಕಿ ಹಣ ಪಾವತಿಸಿಲ್ಲ ಎಂದು ಕೊವಿಡ್ ಸೋಂಕಿತರ ಮೃತದೇಹ ಹಸ್ತಾಂತರಿಸಲು ತೊಂದರೆ ಮಾಡುವಂತಿಲ್ಲ
ಸಾಂಕೇತಿಕ ಚಿತ್ರ

ಬೆಂಗಳೂರು: ಬಾಕಿ ಇರುವ ಚಿಕಿತ್ಸಾ ಶುಲ್ಕವನ್ನು ಪಾವತಿ ಮಾಡದ ಕಾರಣ ನೀಡಿ ಕೋವಿಡ್‌ ಸೋಂಕಿತರ ಮೃತ ದೇಹವನ್ನು ಹಸ್ತಾಂತರಿಸುವಲ್ಲಿ ಆಸ್ಪತ್ರೆಗಳು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ ಸರ್ಕಾರಿ ಆದೇಶವನ್ನು ಟ್ವೀಟ್ ಮೂಲಕ ಉಲ್ಲೇಖಿಸಿ ಇಂದು (ಮೇ 28) ಮತ್ತೆ ಎಚ್ಚರಿಕೆ ನೀಡಿದ್ದಾರೆ.

ಮೇ 24ರಂದು ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಅಶ್ವತ್ಥ್ ನಾರಾಯಣ ಆ ಸೂಚನೆಯನ್ನು ಇಂದು ಮತ್ತೆ ಹಂಚಿಕೊಂಡಿದ್ದಾರೆ. ಇಂತಹ ಪ್ರಕರಣಗಳು ವರದಿಯಾದಲ್ಲಿ ಅಂತಹ ಆಸ್ಪತ್ರೆಗಳ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 24ರಂದು ಖಡಕ್ ಆದೇಶ ಹೊರಡಿಸಿತ್ತು.

ಶವ ಹಸ್ತಾಂತರಕ್ಕೆ ಬಾಕಿ ಬಿಲ್ ಪಾವತಿಗೆ ಒತ್ತಡ ಹಿನ್ನೆಲೆಯಲ್ಲಿ, KPME ಕಾಯ್ದೆ ಅಡಿ ಬಾಕಿ ಬಿಲ್‌ಗೆ ಒತ್ತಾಯಿಸುವಂತಿಲ್ಲ. ಬಿಲ್ ಕಟ್ಟದಿದ್ದರೆ ಶವ ಹಸ್ತಾಂತರಕ್ಕೆ ನಿರಾಕರಿಸಬಾರದು. ಶವ ನೀಡಲು ಸಮಸ್ಯೆ ಮಾಡಿದರೆ ನೋಂದಣಿಯೇ ರದ್ದುಗೊಳಿಸುವ ಆದೇಶವನ್ನು ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ನೀಡಿತ್ತು.

ಈ ಬಗ್ಗೆ ನಿಗಾವಹಿಸುವಂತೆ ಆಯಾ ಡಿಸಿಗಳಿಗೆ ನಿರ್ದೇಶನ ನೀಡಲಾಗಿದ್ದು, ಶವ ಹಸ್ತಾಂತರಕ್ಕೆ ಸತಾಯಿಸಿದ ಪ್ರಕರಣಗಳಿದ್ದರೆ ತಿಳಿಸಿ ಎಂದು ಆಯಾ ಡಿಸಿಗಳು, ಜಿ.ಪಂ. ಸಿಇಒ, ಬಿಬಿಎಂಪಿಗೆ ನಿರ್ದೇಶನ ಮಾಡಲಾಗಿದೆ. ಈ ಬಗ್ಗೆ ವಾರಕ್ಕೆ ಒಂದು ಬಾರಿ ವರದಿ ಸಲ್ಲಿಸಲು ಕೂಡ ಸೂಚಿಸಲಾಗಿತ್ತು.

ಇದನ್ನೂ ಓದಿ: ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ಅರ್ಥಮಾಡಿಕೊಂಡಿಲ್ಲ; ಲಸಿಕಾ ಅಭಿಯಾನ ಸಮರ್ಪಕವಾಗಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

Corona Vaccine: ಡಿಸೆಂಬರ್ ಒಳಗೆ ಭಾರತದ 108 ಕೋಟಿ ಜನರಿಗೆ ಲಸಿಕೆ ನೀಡಿಕೆ: ಕೇಂದ್ರ ಸಚಿವ ಹೇಳಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada