ಬೆಂಗಳೂರು, ಆಗಸ್ಟ್ 11: ಬಿಟ್ ಕಾಯಿನ್ ಪ್ರಕರಣವನ್ನು (Bitcoin case) ಎಸ್ಐಟಿ (SIT) ತನಿಖೆಗೆ ಒಳಪಡಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ. ತಾಜಾ ಆಗಿ ಹಿಂದಿನ ಸಿಸಿಬಿ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಎಸ್ ಐ ಟಿ ಡಿವೈ ಎಸ್ ಪಿ ಕೆ ರವಿಶಂಕರ್ ಅವರು ಬೆಂಗಳೂರು (Bengaluru) ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ. 2 ಪೆನ್ ಡ್ರೈವ್, ಹಾರ್ಡ್ ಡಿಸ್ಕ್ , ಹಾಗೂ ಆ್ಯಪ್ ಮ್ಯಾಕ್ ಬುಕ್ ನಲ್ಲಿ ಮೂಲ ಫೈಲ್ ಗಳನ್ನ ಅಳಿಸಲಾಗಿದೆ. ಅದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಫೈಲ್ ಗಳನ್ನ ಸೃಷ್ಟಿಸಲಾಗಿದೆ.
ಗಮನಾರ್ಹವೆಂದರೆ ಪ್ರಕರಣದ ತನಿಖೆಯನ್ನ ಸಿಸಿಬಿ ಕೈಗೆತ್ತಿಕೊಂಡ ಬಳಿಕವೇ ಸಾಕ್ಷ್ಯಗಳನ್ನ ತಿರುಚಲಾಗಿದೆ. ಸೆಪ್ಬಂಬರ್ 9 – 2020 ರಿಂದ ಡಿಸೆಂಬರ್ 16 – 2020 ರ ಅವಧಿಯಲ್ಲಿ ಸಿಸಿಬಿ ಕಚೇರಿ ಹಾಗು ಇತರೆಡೆ ಈ ಅಕ್ರಮ ನಡೆದಿದೆ. ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರೆ ಅಧಿಕಾರಿಗಳು ಒಳಸಂಚು ರೂಪಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಅಪ್ಪನ ಕೆರೆಯಲ್ಲಿ ಈಜಾಡಿದ ಎಮ್ಮೆಗಳು, ಮಾಲೀಕರ ವಿರುದ್ಧ ದೂರು ದಾಖಲು
ಡಿಜಿಟಲ್ ಉಪಕರಣಗಳಲ್ಲಿ ಹೆಚ್ಚುವರಿಯಾಗಿ ಫೈಲ್ ಸೃಷ್ಟಿಸಿದ್ದಾರೆ ಅಂತಾ ಎಸ್ ಐಟಿ ಡಿವೈ ಎಸ್ ಪಿ ಯಿಂದ ದೂರು ದಾಖಲಾಗಿದೆ. ಹಿಂದಿನ ಸಿಸಿಬಿ ತನಿಖಾಧಿಕಾರಿಗಳು ಹಾಗು ಇತರರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ.
ಬಿಟ್ ಕಾಯಿನ್ ಪ್ರಕರಣ ಮುಚ್ಚಿ ಹಾಕಲು ಹಿಂದಿನ ಸರ್ಕಾರ ಪ್ರಯತ್ನಿಸಿದೆ -ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರ ವಿರುದ್ದವೇ ಎಫ್ ಐಆರ್ ದಾಕಲಾಗಿರುವ ವಿಚಾರವಾಗಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ. ಬಿಟ್ ಕಾಯಿನ್ ಹಗರಣ ಮುಚ್ಚಿ ಹಾಕಲು ಹಿಂದಿನ ಸರ್ಕಾರ ಪ್ರಯತ್ನಿಸಿದೆ. ಆಗಿನ ಸರ್ಕಾರ ಏನೇನು ಯತ್ನ ಮಾಡಿದೆ ಅಂತ ಗೊತ್ತಾಗ್ತಿದೆ. ತನಿಖೆ ಮಾಡಿದ ಪೊಲೀಸರೇ ಸಾಕ್ಷ್ಯ ನಾಶ ಮಾಡ್ತಾರೆ ಅನ್ನುವುದಕ್ಕೆ ಇದು ಉದಾಹರಣೆ ಅಷ್ಟೇ. ಎಸ್ಐಟಿ ಮಾಹಿತಿ ಆಧಾರದಲ್ಲಿ ಪೊಲೀಸರ ಮೇಲೆ ಕ್ರಮ ತೆಗೊಂಡಿದೆ. ತನಿಖೆ ಸರಿಯಾಗಿ ನಡೆಯಲಿ ಮತ್ತು ಸ್ಪಷ್ಟವಾಗಿ ನಡೆಯಲಿ. ಮೋಸ, ವಂಚನೆ ಮಾಡಿದವರು ಸಿಕ್ಕಿಹಾಕಿಕೊಂಡರೆ ಒಳ್ಳೆಯದು ಎಂದು ಸಚಿವ ದಿನೇಶ್ ಹೇಳಿದರು.
ಬೆಳ್ಳಂದೂರಿನಲ್ಲಿ ಪತ್ತೆಯಾಗಿರುವುದು 24 ಅಕ್ರಮ ಬಾಂಗ್ಲಾ ವಲಸಿಗರು
ಇತ್ತೀಚೆಗೆ ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದು, ಆ ಪ್ರಕರಣದ ಪರಿಶೀಲನೆ ವೇಳೆ ಪತ್ತೆಯಾಗಿದ್ದು ಮೂವರಲ್ಲ 24 ಬಾಂಗ್ಲಾ ವಲಸಿಗರು ಎಂದು ತಿಳಿದುಬಂದಿದೆ. ಬೆಳ್ಳಂದೂರಿನಲ್ಲಿ ಒಟ್ಟು 24 ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿರುವ ಬಗ್ಗೆ ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೊದಲು ಕೇವಲ ಮೂವರು ಬಾಂಗ್ಲಾದೇಶಿ ಅಕ್ರಮ ವಲಸಿಗರು ಇದ್ದಾರೆ ಎಂಬ ಮಾಹಿತಿ ಇತ್ತು.
ಬಾಂಗ್ಲಾ ಪ್ರಜೆಗಳು ದೇಶದಲ್ಲಿ 2011ರಿಂದ ಅಕ್ರಮವಾಗಿ ನೆಲೆಸಿರುವ ಮಾಹಿತಿಯಿದೆ. ಇವರೆಲ್ಲ ಬ್ರೋಕರ್ ಒಬ್ಬನಿಗೆ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಮಾಹಿತಿಯಿದೆ. ತಲಾ 20 ಸಾವಿರ ರೂ ಹಣ ನೀಡಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.
ಈ ಬಾಂಗ್ಲಾದೇಶಿಯರು ಭಾರತದ ಆಧಾರ್ ಸೇರಿದಂತೆ ಹಲವು ಐಡಿ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನ್ಐಎ ಅಧಿಕಾರಿಗಳ ದೂರಿನ ಅನ್ವಯ ಫಾರಿನರ್ ಆಕ್ಟ್, ಪಾಸ್‌ಪೋರ್ಟ್ ಆಕ್ಟ್ ಅಡಿ ಕೇಸ್ ದಾಖಲಾಗಿದೆ.
ಬೆಂಗಳೂರು ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Fri, 11 August 23