Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುತ್ತಿಗೆದಾರರ ಸಂಘದಿಂದ ಇಂದು ಸುದ್ದಿಗೋಷ್ಠಿ, ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗ ಏನು ಹೇಳ್ತಾರೆ?

ರಾಜ್ಯ ಸರ್ಕಾರದ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ ಸಂಘ ಸಮರ ಸಾರಿದೆ. ಇದರ ಮಧ್ಯೆ ರಾಜ್ಯ ಗುತ್ತಿಗೆದಾರರ ಸಂಘವೂ ಇಂದು (ಆಗಸ್ಟ್ 11) ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಅಂದು ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಅಧ್ಯಕ್ಷ ಕೆಂಪಣ್ಣ ಈಗ ಏನು ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಗುತ್ತಿಗೆದಾರರ ಸಂಘದಿಂದ ಇಂದು ಸುದ್ದಿಗೋಷ್ಠಿ, ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗ ಏನು ಹೇಳ್ತಾರೆ?
ಕೆಂಪಣ್ಣ (ಸಂಗ್ರಹ ಚಿತ್ರ)
Follow us
Shivaraj
| Updated By: ರಮೇಶ್ ಬಿ. ಜವಳಗೇರಾ

Updated on:Aug 11, 2023 | 8:56 AM

ಬೆಂಗಳೂರು, (ಆಗಸ್ಟ್ 11): ರಾಜ್ಯ ಸರ್ಕಾರದ ವಿರುದ್ಧ ಬಿಬಿಎಂಪಿ ಗುತ್ತಿಗೆದಾರರ (Contractors)ಸಂಘ ಸಮರ ಸಾರಿದೆ. ಸಚಿವರ ವಿರುದ್ಧ ಕಮಿಷನ್​​ ಆರೋಪ ಮಾಡಿದೆ. ಇದರ ಮಧ್ಯೆ ರಾಜ್ಯ ಗುತ್ತಿಗೆದಾರರ ಸಂಘವೂ (Karnataka Contractors Association) ಇಂದು (ಆಗಸ್ಟ್ 11) ಮಹತ್ವದ ಸುದ್ದಿಗೋಷ್ಠಿ ಕರೆದಿದೆ. ಇಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ಅಂದು ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರವೇ ಗುತ್ತಿಗೆದಾರರ ಬಾಕಿ ಬಿಲ್​ ಪಾವತಿಸದೇ ಪೆಂಡಿಂಗ್ ಇಟ್ಟಿದೆ. ಹೀಗಾಗಿ ಈ ಬಗ್ಗೆ ಕೆಂಪಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಏನು ಹೇಳುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.​

ಇದನ್ನೂ ಓದಿ: ಸರ್ಕಾರದ ಕುತ್ತಿಗೆಗೆ ಗುತ್ತಿಗೆ ಕುಣಿಕೆ! ಬೊಮ್ಮಾಯಿ, ಅಶೋಕ್ ಜತೆ ಗುತ್ತಿಗೆದಾರರ ಸಮಾಲೋಚನೆ, ಪಟ್ಟು ಬಿಡದ ಡಿಕೆ ಶಿವಕುಮಾರ್

ಬಿಜೆಪಿಯದ್ದು 40 ಪರ್ಸೆಂಟ್ ಸರ್ಕಾರ ಅಂತಾ ಕಾಂಗ್ರೆಸ್ ದೊಡ್ಡ ಸಮರವನ್ನೇ ಸಾರಿತ್ತು. ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎಸ್ಐಟಿ ರಚನೆ ಮಾಡಿ ನಕಲಿ ಕಾಮಗಾರಿಗಳ ತನಿಖೆಗೆ ಮುಂದಾಗಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಗುತ್ತಿಗೆದಾರರಿಂದ ಲಂಚದ ಬಾಂಬ್ ಸ್ಫೋಟಗೊಂಡಿದೆ. ಬಾಕಿ ಹಣ ಬಿಡುಗಡೆ ಮಾಡೋದಕ್ಕೆ ಡಿ.ಕೆ.ಶಿವಕುಮಾರ್ 15ಪರ್ಸೆಂಟ್ ಕಮಿಷನ್‌ಗಾಗಿ ಡಿಮ್ಯಾಂಡ್ ಇಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಕೆಲ ಬಿಬಿಎಂಪಿ ಗುತ್ತಿಗೆದಾರರು ಈ ಆರೋಪ ಮಾಡಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಅವರ ತಂಡ ಈ ಸಂಬಂಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ. ದೂರಿನ ಬೆನ್ನಲ್ಲೇ ನಿನ್ನೆ ಸಂಜೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ಗೆ ರಾಜ್ಯಪಾಲರು ಬುಲಾವ್ ನೀಡಿದ್ರು. ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಬಿಬಿಎಂಪಿ ಆಯುಕ್ತರನ್ನ ಕರೆಸಿಕೊಂಡು ಸ್ಪಷ್ಟನೆ ಪಡೆದಿದ್ದಾರೆ.

ಬಿಬಿಎಂಪಿಯಲ್ಲಿ ಬಾಕಿಯಿರುವ ಬಿಲ್‌ಗಳ ಬಗ್ಗೆ ಮಾಹಿತಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5000 ಕೋಟಿ ರೂಪಾಯಿ ಬಿಲ್​ ಬಾಕಿ ಇದೆಯಂತೆ. ಸರ್ಕಾರ ಅನುದಾನದ ನಗರೋತ್ಥಾನ, ಟೆಂಡರ್ ಶ್ಯೂರ್, SWM, ಬಿಬಿಎಂಪಿಯ ವಾರ್ಡ್ ವರ್ಕ್ಸ್ ಸೇರಿದಂತೆ ಹಲವು ಕಾಮಗಾರಿಗಳ ಬಿಲ್ ಬಾಕಿ ಇದೆ. ಬಿಲ್​ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಲಾಗಿದೆಯಂತೆ..ಸದ್ಯ ಸುಮಾರು 670 ಕೋಟಿ ಹಣವನ್ನು ಬಿಬಿಎಂಪಿ ಖಾತೆಗೆ ವರ್ಗಾವಣೆ ಮಾಡಿರುವ ಸರ್ಕಾರ, ಬಿಲ್ ಪಾವತಿಯನ್ನ ಮಾತ್ರ ತಡೆ ಹಿಡಿದಿದೆ.. ಹೀಗಾಗಿ ಬಿಬಿಎಂಪಿ ಗುತ್ತಿಗೆದಾರರು ಇದೀಗ ನಮ್ಮ ಹಣವನ್ನ ಪಾವತಿಸಿ ಅಂತ ಹೋರಾಟಕ್ಕಿಳಿದಿದ್ದಾರೆ.

670 ಕೋಟಿ ರೂ ವರ್ಗಾವಣೆಯಾಗಿದ್ರೂ ಪಾವತಿಗೆ ತಡೆ’

ಸದ್ಯ ಸುಮಾರು 670 ಕೋಟಿ ರೂ.ಹಣವನ್ನು ಬಿಬಿಎಂಪಿ ಖಾತೆಗೆ ವರ್ಗಾವಣೆ ಮಾಡಿರುವ ಸರ್ಕಾರ, ಬಿಲ್ ಪಾವತಿಯನ್ನ ಮಾತ್ರ ತಡೆ ಹಿಡಿದಿದೆ. ಹೀಗಾಗಿ ಬಿಬಿಎಂಪಿ ಗುತ್ತಿಗೆದಾರರು ಇದೀಗ ನಮ್ಮ ಹಣವನ್ನ ಪಾವತಿಸಿ ಎಂದು ಹೋರಾಟಕ್ಕಿಳಿದಿದ್ದಾರೆ. ಈ ನಡುವೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ, ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವೂ ಕೇಳಿ ಬಂದಿದೆ.

ಆರೋಪ ಪ್ರತ್ಯಾರೋಪಗಳ ಮಧ್ಯೆ ಬಿಬಿಎಂಪಿ ಗುತ್ತಿಗೆದಾರರ ಸಂಘವು ಇಂದು ಮತ್ತೆ ಸುದ್ದಿಗೋಷ್ಠಿ ಕರೆಯಲು ನಿರ್ಧರಿಸಿದ್ದಾರೆ. ಬಾಕಿ ಹಣ ಪಾವತಿಗಾಗಿ ಸರ್ಕಾರಕ್ಕೆ ಡೆಡ್ ಲೈನ್ ನೀಡಲು ಮುಂದಾಗಿದ್ದಾರೆ. ಒಂದು ವೇಳೆ ಆದಷ್ಟು ಬೇಗ ಬಿಲ್ ಪಾವತಿ ಮಾಡದಿದ್ದರೆ ಬಿಬಿಎಂಪಿಯ ಎಲ್ಲಾ ಕಾಮಗಾರಿಗಳನ್ನು ನಿಲ್ಲಿಸಲು ಚಿಂತನೆ ನಡೆಸಿದ್ದಾರೆ. ಒಟ್ಟಿನಲ್ಲಿ ಕಮಿಷನ್ ದಂಧೆ ಆರೋಪ ಅದೆಲ್ಲಿಗೆ ಹೋಗಿ ಮುಟ್ಟುತ್ತೋ ಕಾದುನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:56 am, Fri, 11 August 23