ಬೆಂಗಳೂರು: ರಾತ್ರಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ನೀಡಿದ ಬಿಎಂಟಿಸಿ; ಏನು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 06, 2023 | 7:43 PM

ರಾತ್ರಿ ವೇಳೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 4 ರವರೆಗೆ ಸಂಚಾರ ಮಾಡುವ ಸಾಮಾನ್ಯ ಸಾರಿಗೆಯ ಬಸ್ಸುಗಳಲ್ಲಿ ಒನ್ ಅಂಡ್ ಆಫ್ ಚಾರ್ಜ್ ಅಂದರೆ ಒಂದುವರೆ ಪಟ್ಟು ಹಣ ಪಡೆಯುತ್ತಿದ್ದ ಬಿಎಂಟಿಸಿ ನಿಗಮ. ಇಂದಿನಿಂದ ರಾತ್ರಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ನೀಡಿದೆ. ಏನು ಅಂತೀರಾ?ಇಲ್ಲಿದೆ ನೋಡಿ.

ಬೆಂಗಳೂರು: ರಾತ್ರಿ ಪ್ರಯಾಣಿಸುವವರಿಗೆ ಸಿಹಿಸುದ್ದಿ ನೀಡಿದ ಬಿಎಂಟಿಸಿ; ಏನು ಗೊತ್ತಾ?
ಬಿಎಂಟಿಸಿ
Follow us on

ಬೆಂಗಳೂರು, ಸೆ.06: ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿ ಸುದ್ದಿಯನ್ನು ನೀಡಿದೆ. ಹೌದು, ನೈಟ್ ಸರ್ವಿಸ್‌ ಬಸ್‌ಗಳಲ್ಲಿಯೂ ಕೂಡ ಸಾಮಾನ್ಯ ಶುಲ್ಕ ಪಡೆಯಲು ನಿರ್ಧಾರ ಮಾಡಿದೆ. ಈ ಹಿಂದೆ 2001 ರಿಂದ ಬಿಎಂಟಿಸಿಯ ರಾತ್ರಿವೇಳೆಯಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 4 ರವರೆಗೆ ಸಂಚಾರ ಮಾಡುವ ಸಾಮಾನ್ಯ ಸಾರಿಗೆಯ ಬಸ್ಸುಗಳಲ್ಲಿ ಒನ್ ಅಂಡ್ ಆಫ್ ಚಾರ್ಜ್ ಅಂದರೆ ಒಂದುವರೆ ಪಟ್ಟು ಹಣ ಪಡೆಯುತ್ತಿದ್ದ ಬಿಎಂಟಿಸಿ ನಿಗಮ. ಇಂದಿನಿಂದ ಆ ಹಿಂದಿನ ದರವನ್ನು ಕೈಬಿಟ್ಟು ನಾರ್ಮಲ್ ದರವನ್ನು ಪಡೆಯಲು ಬಿಎಂಟಿಸಿ ನಿಗಮ ಆದೇಶ ಮಾಡಿದೆ.

ಸೆಪ್ಟೆಂಬರ್​ 25 ರಂದು ಬಿಎಂಟಿಸಿ ರಜತ ಮಹೋತ್ಸವ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ರಜತ ಮಹೋತ್ಸವ ಸಮಯದಲ್ಲಿ ಪ್ರಯಾಣಿಕರಿಗಾಗಿ ಹೊಸ ಅಪ್ಲಿಕೇಶನ್ ಒಂದನ್ನು ಲಾಂಚ್​ ಮಾಡುತ್ತಿದೆ ಎಂದು ಡಿಹೆಚ್​ ವರದಿ ಮಾಡಿದೆ. ಹೌದು, ಈ ಅಪ್ಲಿಕೇಶನ್​ ಮೂಲಕ ಬಸ್​ನ್ನು ಟ್ರ್ಯಾಕ್​ ಮಾಡಬಹುದು, ನಮ್ಮ ನಿಲ್ದಾಣಕ್ಕೆ ಬಸ್​ ಎಷ್ಟು ಗಂಟೆಗೆ ಬರಬಹುದು ಜೊತೆಗೆ ಮುಂಗಡ ಟಿಕೆಟ್​ ಖರೀದಿಸಲು ಇನ್ನಿತರ ಸೇವೆಗಳನ್ನು ಇದರಲ್ಲಿ ಪಡೆಯಬಹುದಾಗಿದೆ.

ಇದನ್ನೂ ಓದಿ:ಪ್ರಯಾಣಿಕರಿಗೆ ಗುಡ್​ನ್ಯೂಸ್: ಬಿಎಂಟಿಸಿ ಬಸ್​​ನಲ್ಲಿ ರಾತ್ರಿ ಪ್ರಯಾಣದ ಹೆಚ್ಚುವರಿ ಟಿಕೆಟ್​ ಶುಲ್ಕ ರದ್ದು

ಇಂದು ಸಾರಿಗೆ ಸಿಬ್ಬಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಹಿ ಸುದ್ದಿ ನೀಡಿದ್ದಾರೆ. ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ 4 ಕೋಟಿ 7 ಲಕ್ಷ ರೂ. ಕೊಡಲಾಗಿತ್ತು. ಈ ಬಾರಿ 17 ಕೋಟಿ ರೂ. ಮೀಸಲಿಡಲಾಗಿದೆ. ಮತ್ತು ಚಾಲಕರ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ, ಚಾಲಕರಿಗೆ ವಸತಿ ಯೋಜನೆ ನೀಡಲು ವಸತಿ ಇಲಾಖೆಗೆ ಪತ್ರ ಬರೆದಿದ್ದೇನೆ ಎಂದು ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Wed, 6 September 23