AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಸೈಬರ್ ಕಮಾಂಡ್ ಬಿಗ್ ಆಪರೇಶನ್: 1.40 ಕೋಟಿ ರೂ. ಬಾಸ್ ಸ್ಕ್ಯಾಮ್ ಪತ್ತೆ; ಬೆಂಗಳೂರು, ಹೈದರಾಬಾದ್‌ನಲ್ಲಿ 4 ಖದೀಮರ ಬಂಧನ

ಬೆಂಗಳೂರಿನಲ್ಲಿ ನಡೆದ ಬೃಹತ್ 'ಬಾಸ್ ಸ್ಕ್ಯಾಮ್' ಅನ್ನು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷರ ನಕಲಿ ವಾಟ್ಸ್ಆ್ಯಪ್ ಪ್ರೊಫೈಲ್ ಸೃಷ್ಟಿಸಿ, ಅಕೌಂಟೆಂಟ್‌ಗೆ ₹1.4 ಕೋಟಿ ವಂಚಿಸಲಾಗಿತ್ತು. ತನಿಖೆ ನಡೆಸಿ, ಮ್ಯೂಲ್ ಖಾತೆಗಳನ್ನು ನಿರ್ವಹಿಸುತ್ತಿದ್ದ ನಾಲ್ವರು ಅಂತಾರಾಜ್ಯ ಖದೀಮರನ್ನು ಬಂಧಿಸಲಾಗಿದೆ. ಸೈಬರ್ ವಂಚನೆ ಹೇಗೆ ನಡೆಯಿತು ಮತ್ತು ಪೊಲೀಸರು ಜಾಲವನ್ನು ಹೇಗೆ ಭೇದಿಸಿದರು ಎಂಬುದರ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ.

ಕರ್ನಾಟಕ ಸೈಬರ್ ಕಮಾಂಡ್ ಬಿಗ್ ಆಪರೇಶನ್: 1.40 ಕೋಟಿ ರೂ. ಬಾಸ್ ಸ್ಕ್ಯಾಮ್ ಪತ್ತೆ; ಬೆಂಗಳೂರು, ಹೈದರಾಬಾದ್‌ನಲ್ಲಿ 4 ಖದೀಮರ ಬಂಧನ
ಸಾಂದರ್ಭಿಕ ಚಿತ್ರ
ಶಿವಪ್ರಸಾದ್​ ಬಿ.
| Edited By: |

Updated on: Oct 08, 2026 | 12:14 PM

Share

ಬೆಂಗಳೂರು, ಅ.8: ಖ್ಯಾತ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದ ಅಧ್ಯಕ್ಷರ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಪ್ರೊಫೈಲ್ ಸೃಷ್ಟಿಸಿ, ಅಕೌಂಟೆಂಟ್‌ಗೆ ವಂಚಿಸಿ ಬರೋಬ್ಬರಿ 1.40 ಕೋಟಿ ರೂ. ಹಣ ಎಗರಿಸಿದ್ದ ಬೃಹತ್ ಬಾಸ್ ಸ್ಕ್ಯಾಮ್ (Boss Scam) ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಿಷನ್ ಆಸೆಗೆ ಮ್ಯೂಲ್ ಖಾತೆಗಳನ್ನು ನೀಡಿ ಹಣ ಪಡೆದುಕೊಳ್ಳುತ್ತಿದ್ದ ನಾಲ್ವರು ಅಂತಾರಾಜ್ಯ ಖದೀಮರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 8.50 ಲಕ್ಷ ರೂ. ನಗದು ಹಣ ಹಾಗೂ ಅಪರಾಧಕ್ಕೆ ಬಳಸಿದ್ದ 4 ಮೊಬೈಲ್ ಫೋನ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ 8 ರಂದು ಬೆಳಿಗ್ಗೆ 10:03 ಗಂಟೆಯ ಸುಮಾರಿಗೆ ವಂಚಕನೊಬ್ಬ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಚೆನ್‌ರಾಜ್ ರಾಯಚಂದ್ ಅವರ ಭಾವಚಿತ್ರ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ನಕಲಿ ವಾಟ್ಸ್ಆ್ಯಪ್ ಪ್ರೊಫೈಲ್ ರೂಪಿಸಿದ್ದ. ಅಲ್ಲಿಂದ ವಿಶ್ವವಿದ್ಯಾಲಯದ ಅಕೌಂಟೆಂಟ್ ವಿನಯ್ ಭೂಷಣ್ ಅವರಿಗೆ ಸಂದೇಶ ಕಳುಹಿಸಿದ ವಂಚಕ, ಬ್ಯಾಂಕ್ ಖಾತೆಯಲ್ಲಿರುವ ಬಾಕಿ ಹಣದ ವಿವರ ಕೇಳಿದ್ದಾನೆ. ಬಳಿಕ ಬೆಳಿಗ್ಗೆ 11:34ರ ಸುಮಾರಿಗೆ 1,40,00,000 (1.40 ಕೋಟಿ ರೂ.) ಹಣವನ್ನು ತುರ್ತಾಗಿ ವರ್ಗಾಯಿಸುವಂತೆ ಸೂಚಿಸಿದ್ದಾನೆ. ವಾಟ್ಸ್ಆ್ಯಪ್‌ನಲ್ಲಿ ಬಂದ ಮೆಸೇಜ್ ನಿಜವಾಗಿಯೂ ತಮ್ಮ ವಿಶ್ವವಿದ್ಯಾಲಯದ ಅಧ್ಯಕ್ಷರೇ ಕಳುಹಿಸಿದ್ದು ಎಂದು ನಂಬಿದ ಅಕೌಂಟೆಂಟ್, ಸಂಸ್ಥೆಯ ಖಾತೆಯಿಂದ ವಂಚಕರು ನೀಡಿದ ಖಾತೆಗೆ ಹಣ ವರ್ಗಾಯಿಸಿದ್ದರು.

ಈ ಕುರಿತು ವಿಶ್ವವಿದ್ಯಾಲಯದ ಸಂತೋಷ್ ಎ.ಎಸ್. ಅವರು ಸೆಪ್ಟೆಂಬರ್ 9 ರಂದು ದಕ್ಷಿಣ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಐಟಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಸೈಬರ್ ಕಮಾಂಡ್ ಪೊಲೀಸರ ತನಿಖೆಯಿಂದ ಸೈಬರ್ ಖದೀಮರ ಕರಾಳ ಮೋಡಸ್ ಆಪರೆಂಡಿ ಬಯಲಾಗಿದೆ. ಸೈಬರ್ ಕಿಲ್ಲರ್‌ಗಳು ಮೊದಲು ಸಂಸ್ಥೆಯ ಸಿಬ್ಬಂದಿಗೆ ಅಪರಿಚಿತ ಜಿಪ್ ಫೈಲ್ ಒಂದನ್ನು ಕಳುಹಿಸಿದ್ದರು. ಈ ಫೈಲ್ ಮೂಲಕ ಕ್ರೋಮ್ ಬ್ರೌಸರ್ ವ್ಯವಸ್ಥೆಗೆ ಅಕ್ರಮ ಪ್ರವೇಶ ಪಡೆದು ವಾಟ್ಸ್ಆ್ಯಪ್ ವೆಬ್‌ಗೆ ಲಾಗಿನ್ ಆಗಿದ್ದರು.

ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್‌ನಿಂದ ಕೊಲೆ ರಹಸ್ಯ ರಿವೀಲ್

ಸಿಬ್ಬಂದಿಯ ಗಮನಕ್ಕೆ ಬಾರದಂತೆ ವಿಶ್ವವಿದ್ಯಾಲಯದ ದತ್ತಾಂಶಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದ ವಂಚಕರು, ಸುಮಾರು 15 ರಿಂದ 20 ದಿನಗಳ ಕಾಲ ಹಣಕಾಸು ವಹಿವಾಟುಗಳ ಮೇಲೆ ನಿರಂತರ ನಿಗಾ ಇಟ್ಟಿದ್ದರು. ನಂತರ ಅಧ್ಯಕ್ಷರ ಸೋಗಿನಲ್ಲಿ ಅಕೌಂಟೆಂಟ್ ಜೊತೆ ಚಾಟ್ ಮಾಡಿ, ತಮ್ಮ ನಿಯಂತ್ರಣದಲ್ಲಿದ್ದ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು. ಈ ಕೃತ್ಯಕ್ಕೆ ವಿದೇಶಿ ಐಪಿ ವಿಳಾಸಗಳನ್ನು ಬಳಸಲಾಗಿತ್ತು.

ಇನ್ನು ಸೈಬರ್ ಕಮಾಂಡ್ ಪೊಲೀಸರು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ದೊಡ್ಡಮಟ್ಟದ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿ-1 ಅಣ್ಣಯ್ಯ (25) ದೇವಸಂದ್ರ, ಕೆ.ಆರ್. ಪುರ, ಬೆಂಗಳೂರಿನಲ್ಲಿ ಕೃತ್ಯ ಮಾಡುತ್ತಿದ್ದ (ಎ5 ಸೂಚನೆಯಂತೆ ಸ್ಥಳೀಯ ಸ್ನೇಹಿತರಿಗೆ ಹಣದ ಆಮಿಷವೊಡ್ಡಿ ಮ್ಯೂಲ್ ಖಾತೆಗಳನ್ನು ತೆರೆಸಿಕೊಡುತ್ತಿದ್ದ) ಆರೋಪಿ-2 ಬುಸ್ಸಳ್ಳಿ ರವಿಕುಮಾರ್ ರೆಡ್ಡಿ (26), ಅನಂತಪುರ, ಆಂಧ್ರಪ್ರದೇಶದಲ್ಲಿ ಈ ಕೃತ್ಯಗಳನ್ನು ಮಾಡುತ್ತಿದ್ದ (ಹೈದರಾಬಾದ್‌ನಲ್ಲಿ ಬಂಧನ). ಆರೋಪಿ -3 ಅಂಬರಾಯ (39) ಕೊನ್ನೂರು, ಅಫಜಲಪುರ, ಕಲಬುರಗಿಯಲ್ಲಿ (ಹೈದರಾಬಾದ್‌ನಲ್ಲಿ ಬಂಧನ) ಆರೋಪಿ-4 ಸೈಯದ್ ವಜಿಹುದ್ದೀನ್ ಖಾದ್ರಿ (25), ಖೈರತಾಬಾದ್, ಹೈದರಾಬಾದ್. (ಚೆಕ್ ಮೂಲಕ ಹಣ ಹಿಂಪಡೆಯಲು ಬಂದಾಗ ಹೈದರಾಬಾದ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ).

ಪ್ರಕರಣದ ಮುಖ್ಯ ರೂವಾರಿ ಎ5 ‘ಸನ್ನಿ ಅಲಿಯಾಸ್ ಡೇವಿಡ್’ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಜಾಲ ಬೀಸಲಾಗಿದೆ. ವಿಚಾರಣೆ ವೇಳೆ ಈ ಜಾಲವು ಹಲವು ರಾಜ್ಯಗಳಲ್ಲಿ 22 ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ 60ಕ್ಕೂ ಹೆಚ್ಚು ಮೂಲ್ ಖಾತೆಗಳನ್ನು ಬಳಸಿರುವುದು ಬೆಳಕಿಗೆ ಬಂದಿದೆ. ಸೈಬರ್ ಕಮಾಂಡ್ ಡಿಜಿಪಿ ಪ್ರಣಬ್ ಮೊಹಂತಿ, ಎಡಿಜಿಪಿ ಚಂದ್ರಶೇಖರ್ ಎ. ಹಾಗೂ ಡಿಐಜಿ ಎಚ್.ಡಿ. ಆನಂದ್ ಕುಮಾರ್ ಅವರ ನಿರ್ದೇಶನದಲ್ಲಿ ಎಸಿಪಿ ನವೀನ್ ಕುಮಾರ್ ಎಲ್., ಪಿಐ ಸಿದ್ದಪ್ಪ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಶಿವಪ್ರಸಾದ್​ ಬಿ.
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ಮಂಜುಗೆ ಸುತ್ತಿಕೊಂಡು ಬಂದ ಕರ್ಮ; ಚಿತ್ರಹಿಂಸೆ ಅನುಭವಿಸಿದ ಮಾಡರ್ನ್ ಮಹಾಕವಿ
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ರಾಜ್ಯದ ವಿವಿಗಳಲ್ಲಿನ ಸಾವಿರಾರು ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಸಿದ್ಧತೆ!
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ದೆಹಲಿಯಲ್ಲಿ ಇಂಡಿ ಮೈತ್ರಿಕೂಟದ ಪ್ರತಿಭಟನೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಬಸ್ ಚಾಲನೆ ಮಾಡುತ್ತಲೇ ಮೊಬೈಲ್‌ನಲ್ಲಿ ಹರಟೆ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಅತ್ತಿಬೆಲೆ ಪೆಟ್ರೋಲ್ ಬಂಕ್​ಗೆ ನುಗ್ಗಿದ ಜಾಗ್ವಾರ್ ಕಾರು: ಭಾರಿ ಅಗ್ನಿ ಅವಘಡ
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಯಾರಿಗೆ ವೆಂಕಟೇಶ್ವರ ಸ್ವಾಮಿ ಕೃಪೆ?, ಯಾರಿಗೆ ಧನಲಾಭ?
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಹುಟ್ಟಿ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶ: ಇನ್ವೆಸ್ಟರ್ ಆದ ಮಗು!
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು