Bengaluru: ಟ್ರಿಪ್ ಕ್ಯಾನ್ಸಲ್ ಮಾಡಿದ್ದೇ ತಪ್ಪಾಯ್ತು; ಬೆಂಗಳೂರು ಯುವತಿಗೆ ಕ್ಯಾಬ್ ಚಾಲಕನಿಂದ ಕಿರುಕುಳ

| Updated By: ಸುಷ್ಮಾ ಚಕ್ರೆ

Updated on: Nov 18, 2021 | 1:29 PM

ಕಾಲೇಜಿನಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದ ಯುವತಿ ಕ್ಯಾಬ್ ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರ 19 ವರ್ಷದ ವಿದ್ಯಾರ್ಥಿನಿಯನ್ನು ನಿಂದಿಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

Bengaluru: ಟ್ರಿಪ್ ಕ್ಯಾನ್ಸಲ್ ಮಾಡಿದ್ದೇ ತಪ್ಪಾಯ್ತು; ಬೆಂಗಳೂರು ಯುವತಿಗೆ ಕ್ಯಾಬ್ ಚಾಲಕನಿಂದ ಕಿರುಕುಳ
ಬೆಂಗಳೂರು ಕ್ಯಾಬ್
Follow us on

ಬೆಂಗಳೂರು: ಬೆಂಗಳೂರಿನ ಯಲಹಂಕದ ಕಾಲೇಜಿನಿಂದ ಕ್ಯಾಬ್ ಬುಕ್ ಮಾಡಿದ್ದ 19 ವರ್ಷದ ಯುವತಿ ಟ್ರಿಪ್ ಕ್ಯಾನ್ಸಲ್ ಮಾಡಿದಳೆಂದು ಆಕೆಗೆ ಬಾಯಿಗೆ ಬಂದಂತೆ ಬೈದಿರುವ ಘಟನೆ ನಡೆದಿದೆ. ಈ ಬಗ್ಗೆ ಆ ಯುವತಿ ದೂರು ದಾಖಲಿಸಿದ್ದಾಳೆ. ತಾನು ಒಂಟಿಯಾಗಿ ಪ್ರಯಾಣಿಸುತ್ತೇನೆ ಎಂದು ತಿಳಿದ ನಂತರ ಕ್ಯಾಬ್ ಚಾಲಕ ಅಸಭ್ಯ ಪದಗಳನ್ನು ಬಳಸಲಾರಂಭಿಸಿದ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಕಾಲೇಜಿನಿಂದ ಮನೆಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದ ಯುವತಿ ಕ್ಯಾಬ್ ಬುಕಿಂಗ್ ಅನ್ನು ರದ್ದುಗೊಳಿಸಿದ ನಂತರ 19 ವರ್ಷದ ವಿದ್ಯಾರ್ಥಿನಿಯನ್ನು ನಿಂದಿಸಿದ ಆರೋಪದ ಮೇಲೆ ಕ್ಯಾಬ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಆ ಆರೋಪಿಯನ್ನು ಹೆಣ್ಣೂರು ನಿವಾಸಿ ಎಸ್. ಪೂರ್ವಿಕ್ (22) ಎಂದು ಗುರುತಿಸಲಾಗಿದೆ.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ನವೆಂಬರ್ 11ರಂದು ಈ ಘಟನೆ ಸಂಭವಿಸಿದೆ. ಮಂಗಳವಾರ ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಲ್ಲಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆ ಆರೋಪಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) 354 ಡಿ, 509ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನ್ನ ಕಾಲೇಜು ಇರುವ ಯಲಹಂಕದಿಂದ ಕ್ಯಾಬ್ ಬುಕ್ ಮಾಡಿರುವುದಾಗಿ 19 ವರ್ಷದ ಯುವತಿ ದೂರು ದಾಖಲಿಸಿದ್ದಾಳೆ. ಕ್ಯಾಬ್‌ನಲ್ಲಿ ಎಷ್ಟು ಜನರು ಪ್ರಯಾಣಿಸುತ್ತಾರೆ ಎಂದು ಕ್ಯಾಬ್ ಡ್ರೈವರ್ ನನ್ನನ್ನು ಕೇಳಿದ್ದ. ಅದಕ್ಕೆ ನಾನು ಒಬ್ಬಂಟಿಯಾಗಿ ಪ್ರಯಾಣಿಸುತ್ತೇನೆ ಎಂದು ಉತ್ತರಿಸಿದೆ. ನಾನು ಒಂಟಿಯಾಗಿ ಪ್ರಯಾಣಿಸುತ್ತೇನೆ ಎಂದು ತಿಳಿದ ನಂತರ ಕ್ಯಾಬ್ ಚಾಲಕ ಅಸಭ್ಯ ಪದಗಳನ್ನು ಬಳಸಲಾರಂಭಿಸಿದ್ದಾನೆ ಎಂದು ಬಾಲಕಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಆ ಯುವತಿಯ ಆರೋಪವನ್ನು ಕ್ಯಾಬ್ ಚಾಲಕ ನಿರಾಕರಿಸಿದ್ದಾನೆ. 19 ವರ್ಷದ ಯುವತಿ ಕ್ಯಾಬ್ ಬುಕ್ ಮಾಡಿದ್ದಳು. ತಾನು ಬುಕ್ ಮಾಡಿದ್ದ ಏರಿಯಾಗೆ ಬರುತ್ತೀಯಾ? ಇಲ್ಲವಾ? ಎಂದು ಕೇಳಲು ನನಗೆ ಫೋನ್ ಮಾಡಿದ್ದಳು. ನಾನು ಆ ಲೊಕೇಶನ್​ಗೆ ಹೋದ ನಂತರ ಆಕೆ ಬುಕಿಂಗ್ ರದ್ದುಪಡಿಸಿದಳು. ಇದರಿಂದ ಬೇಸರಗೊಂಡ ನಾನು ಯಾಕೆ ಕ್ಯಾಬ್ ಬುಕಿಂಗ್ ಕ್ಯಾನ್ಸಲ್ ಮಾಡಿದ್ದು ಎಂದು ಕೇಳಿದೆ ಎಂದು ಕ್ಯಾಬ್ ಚಾಲಕ ತಿಳಿಸಿದ್ದಾನೆ.

ಆದರೆ, ಆ ಯುವತಿ ಮಾತ್ರ ತಾನು ಮನೆಗೆ ಬಂದಾಗ ಕ್ಯಾಬ್ ಚಾಲಕ ತನ್ನನ್ನು ಫೋನ್‌ನಲ್ಲಿ ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿಗರೇ‌ ಗಮನಿಸಿ; ಇಂದು ಈ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ!

IT raid in Bangalore: ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಕಡೆ ಐಟಿ ದಾಳಿ; ಚಾರ್ಟೆಡ್ ಅಕೌಂಟೆಂಟ್ ಅಮಲಾ ಮನೆ ಮೇಲೆ IT ರೇಡ್