AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Power Cut: ಬೆಂಗಳೂರಿಗರೇ‌ ಗಮನಿಸಿ; ಇಂದು ಈ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ!

Power cut in Bangalore: ಇಂದು ಬೆಂಗಳೂರಿನ ಈ ಕೆಲವು ಏರಿಯಾಗಳಲ್ಲಿ ಪವರ್​ ಕಟ್​ ಆಗಲಿದೆ. ಯಾವ ಯಾವ ಏರಿಯಾಗಳಲ್ಲಿ ವಿದ್ಯುತ್​ ಕಡಿತ ಉಂಟಾಗಲಿದೆ ಗಮನಿಸಿ.

Bengaluru Power Cut: ಬೆಂಗಳೂರಿಗರೇ‌ ಗಮನಿಸಿ; ಇಂದು ಈ ಕೆಲವು ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ!
ಪವರ್​ ಕಟ್​
TV9 Web
| Edited By: |

Updated on:Nov 16, 2021 | 11:03 AM

Share

ಬೆಂಗಳೂರು: ನಗರದಾದ್ಯಂತ ಯೋಜನಾ ಕಾಮಗಾರಿಗಳ ವಿಳಂಬದಿಂದಾಗಿ ನವೆಂಬರ್ 15 ರಿಂದ 17 ರವರೆಗೆ (ಸೋಮವಾರದಿಂದ ಬುಧವಾರ) ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ವಿದ್ಯತ್ ಕಡಿತ ಉಂಟಾಗಲಿದೆ. ಬೆಂಗಳೂರು ಎಲೆಕ್ಟ್ರಿಕ್ ಸಪ್ಲೈ ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್​ಮಿಷನ್​ ಕಾರ್ಪೊರೇಷನ್ ಲಿಮಿಟೆಡ್ (KPTCL) ಕೈಗೊಂಡಿರುವ ಕೇಬಲ್ ಪರಿವರ್ತನೆಯ ಕೆಲಸದಿಂದ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಎದುರಾಗಲಿದೆ.

ಬೆಂಗಳೂರಿನಲ್ಲಿ ಇಂದು ಮಂಗಳವಾರ (ನವೆಂಬರ್ 16) ಎಚ್ಎಸ್ಆರ್ ಲೇಔಟ್, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಬಿಡಿಎ ಅಂಜನಾಪುರ, ಆವಲಹಳ್ಳಿ ಸೇರಿದಂತೆ ಮೀನಾಕ್ಷಿ ಲೇಔಟ್​ನಲ್ಲಿ ಪವರ್ ಕಟ್ ಉಂಟಾಗಲಿದೆ. ನಾಳೆ ಬುಧವಾರ (ನವೆಂಬರ್ 17)ರಂದು ಬೆಂಗಳೂರಿನ 4ನೇ ಮೇನ್ ಎಚ್ಎಸ್ಆರ್ ಲೇಔಟ್ 17 ಕ್ರಾಸ್, ಅಂಜನಾಪುರ ಮೂರನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ರಾಘವನ್ ಪಾಳ್ಯ, ಸಹಾರ ಬೇಕರಿ ರಸ್ತೆ, ಆವಲಹಳ್ಳಿ ಸೇರಿದಂತೆ ಜಿಬಿ ಪಾಳ್ಯ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.

ನಿನ್ನೆ ಸೋಮವಾರ (ನವೆಂಬರ್ 15)ರಂದು ಬೆಂಗಳೂರಿನ ಎಸ್​ಬಿಐ ಲೇಔಟ್, ಆವಲಹಳ್ಳಿ, ಮೀನಾಕ್ಷಿ ಲೇಔಟ್, ವೆಂಕಟಪುರ, ಟೀಚರ್ಸ್ ಕಾಲೋನಿ, ಎಚ್ಎಸ್ಆರ್ ಸೆಕ್ಟರ್ 5 ಮತ್ತು ಜಕ್ಕಸಂದ್ರದಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.

ಕಲ್ಲಿದ್ದಲು ಕೊರತೆ, ಕರ್ನಾಟಕದಲ್ಲಿ ವಿದ್ಯುತ್ ಕಡಿತದ ಭೀತಿಯಿದ್ದರೆ, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆಯತ್ತಿರುವ ಕಾಮಗಾರಿಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ. ಕೊವಿಡ್ 19 ಎರಡನೇ ಅಲೆಯಿಂದ ಮತ್ತು ಗುತ್ತಿಗೆದಾರರ ಕೆಲಸದ ವಿಳಂಬದಿಂದಾಗಿ ಹೆಚ್ಚಿನ ಯೋಜನೆಗಳ ಕೆಲಸ ಸಾಗಲು ಸಮಯ ತೆಗೆದುಕೊಂಡಿದೆ. ಕೈಗೊಂಡ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದಿನಿಂದ ಬುಧವಾರದವರೆಗೆ ಪವರ್ ಕಟ್

ಬೆಂಗಳೂರಿನಲ್ಲಿ ಫೆ. 26ರವರೆಗೆ ದಿನಾ 8 ಗಂಟೆ ಪವರ್​ಕಟ್​.. ಯಾವ ಯಾವ ಏರಿಯಾಗಳಲ್ಲಿ ಪವರ್​ ಕಟ್?

Published On - 10:56 am, Tue, 16 November 21

Follow Us
Web contact
Web contact

TV9 Kannada

Read More
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್