ಬೆಂಗಳೂರಿನಲ್ಲಿ ಫೆ. 26ರವರೆಗೆ ದಿನಾ 8 ಗಂಟೆ ಪವರ್‌ಕಟ್.. ಯಾವ ಯಾವ ಏರಿಯಾಗಳಲ್ಲಿ ಪವರ್ ಕಟ್?
ಫೆ. 26ರವರೆಗೆ 8 ಗಂಟೆಗಳ ಕಾಲ ಬೆಂಗಳೂರಿನಲ್ಲಿ ವಿದ್ಯುತ್ ಕಡಿತಗೊಳಿಸಲಾಗುವುದು. ಹಾಗಿದ್ದರೆ, ಯಾವ ಯಾವ ನಗರಗಳಲ್ಲಿ ಪವರ್ ಕಟ್ ಆಗಲಿದೆ?
ಬೆಂಗಳೂರು: ರಾಜಧಾನಿಯಲ್ಲಿ ಬೆಳಗ್ಗೆ 10. 30 ರಿಂದ ಸಂಜೆ 6. 30 ರವರೆಗೆ ಎಂಟು ಗಂಟೆಗಳ ಕಾಲ ವಿದ್ಯುತ್ ಸರಬರಾಜಿಗೆ ಅಡ್ಡಿಯಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಮ್) ತಿಳಿಸಿದೆ. ಜಯದೇವ, ಸೇಂಟ್ ಜಾನ್ಸ್, ಆರ್‌ಬಿಐ ಮತ್ತು ಸಾರಕ್ಕಿ ಸಬ್‌ಸ್ಟೇಶನ್‌ಗಳಲ್ಲಿ ನಿಗದಿತ ಅವಧಿಯಲ್ಲಿ ವಿದ್ಯುತ್ ಸರಬರಾಜನ್ನು 8 ಗಂಟೆಗಳ ಕಾಲ ಕಡಿತಗೊಳಿಸಲಾಗುತ್ತದೆ.
ವಿದ್ಯುತ್ ಕಡಿತ ದಿನಾಂಕಗಳ ಪಟ್ಟಿ:
ಫೆಬ್ರವರಿ 23ರಂದು, ಇಡಬ್ಲ್ಯೂಎಸ್ ಲೇಔಟ್, ಬಿಟಿಎಂ ಲೇಔಟ್. ಫೆಬ್ರವರಿ 24ರಂದು ಲೇಕ್ ರಸ್ತೆ, ಮದೀನಾ ನಗರ, ಬಿಟಿಎಂ ಲೇಔಟ್, ಫೆಬ್ರವರಿ 25 ರಂದು ಜೆ.ಪಿ.ನಗರ, ಡಾಲ್ಮಿಯಾ ಸಿಗ್ನಲ್ ಮತ್ತು ಹತ್ತಿರದ ನಗರಗಳು, ಡಾಲರ್ ಲೇಔಟ್, ತಿಪ್ಪಸಂದ್ರ, ಚೆನ್ನಮ್ಮ ಗಾರ್ಡನ್ ಹಾಗೂ ಫೆಬ್ರವರಿ 26ರಂದು ಬಿಟಿಎಂ ಲೇಔಟ್, ಜೆಪಿ ನಗರ, ವಿನಾಯಕನಗರದಲ್ಲಿ ವಿದ್ಯುತ್ ಕಡಿತಗೊಳಿಸಲಾಗುವುದು.
ಕಡುಬೀಸನಹಳ್ಳಿ ನಿಲ್ದಾಣದ ವ್ಯಾಪ್ತಿಯ ನಗರಗಳು ಈಗಾಗಲೇ ಫೆಬ್ರವರಿ 20 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ 7 ಗಂಟೆಗಳ ಕಾಲ ಪವರ್‌ಕಟ್ ಮಾಡಲಾಗಿದೆ. ಇದರಲ್ಲಿ ಹಳೆಯ ವಿಮಾನ ನಿಲ್ದಾಣ ರಸ್ತೆ, ಮರಾಠಹಳ್ಳಿ, ಆನಂದನಗರ, ಕೆಬಿ ಹಳ್ಳಿ, ಕೃಷ್ಣಪ್ಪ ಗಾರ್ಡನ್, ಎಕೆ ಕಾಲೋನಿ ಮತ್ತು ಔಟರ್ ರಿಂಗ್ ರೋಡ್ ಸೇರಿದ್ದವು.
ಏತನ್ಮಧ್ಯೆ ಜನವರಿಯಲ್ಲಿ, ಕರ್ನಾಟಕದ ಹೈಕೋರ್ಟ್ ಬೆಸ್ಕಾಂಗೆ ನಗರದಾದ್ಯಂತ ಫುಟ್‌ಪಾತ್‌ಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಾಪಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಿಂದ ಅನುಮತಿ ಪಡೆದಿದೆಯೇ ಎಂದು ಸ್ಪಷ್ಟಪಡಿಸುವಂತೆ ನಿರ್ದೇಶಿಸಿದೆ. ಪಾದಾಚಾರಿಗಳಿಗೆ ತೊಂದರೆಯಾಗದಂತೆ ಫುಟ್‌ಪಾತ್‌ಗಳಲ್ಲಿ ಅಳವಡಿಸಲಾಗಿರುವ ಟ್ರಾನ್ಸ್‌ಫಾರ್ಮರ್‌ಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಬಿಬಿಎಂಪಿಗೆ ಆದೇಶಿಸಿದೆ. ಇದಕ್ಕೆ ಬೆಸ್ಕಾಮ್ ಪ್ರತಿಕ್ರಿಯಿಸಿದ್ದು, ನಗರದಲ್ಲಿ ಫುಟ್‌ಪಾತ್, ರಸ್ತೆ ಇತ್ಯಾದಿಗಳಲ್ಲಿ 8,659 ಟ್ರಾನ್ಸ್‌ಫಾರ್ಮರ್ ವಿತರಣಾ ಕೇಂದ್ರಗಳಿವೆ ಮತ್ತು ಈ 4,035 ಟ್ರಾನ್ಸ್‌ಫಾರ್ಮರ್‌ಗಳು ಸಾರ್ವಜನಿಕರಿಗೆ ಅಡಚಣೆಯನ್ನು ಉಂಟುಮಾಡಿವೆ ಎಂದು ತಿಳಿಸಿದೆ.
ಇದನ್ನೂ ಓದಿ: ಪವರ್ ಕಟ್: 20 ಗಂಟೆಗಳ ಕಾಲ ರೈಲಿನಲ್ಲೇ ಪ್ರಯಾಣಿಕರು Lock ಆಗಿದ್ದರು!
Published On - 6:08 pm, Tue, 23 February 21