AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ ಕ್ವಾರಿ ಸ್ಫೋಟ ಪ್ರಕರಣದ ತನಿಖೆ CID ಹೆಗಲಿಗೆ: ವರದಿ ಬಂದ 24 ಗಂಟೆಯಲ್ಲಿ ಕ್ರಮ -ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಜಿಲ್ಲೆ ಗುಡಿಬಂಡೆಯ ಹಿರೆನಾಗವೇಲಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ಸ್ಪೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ವಹಿಸಲು ತೀರ್ಮಾನಿಸಿರುವುದಾಗಿ ಹೇಳಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದರು. ಸ್ಪೋಟ ಸಂಭವಿಸಿದ ಕ್ವಾರಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಘಟನೆ ಸಂಭವಿಸುತ್ತಿದ್ದಂತೆಯೇ ಚಿಕ್ಕಬಳ್ಳಾಪುರದ ಹಿರೆನಾಗವೇಲಿ ಕ್ವಾರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ […]

ಚಿಕ್ಕಬಳ್ಳಾಪುರ ಕ್ವಾರಿ ಸ್ಫೋಟ ಪ್ರಕರಣದ ತನಿಖೆ CID ಹೆಗಲಿಗೆ: ವರದಿ ಬಂದ 24 ಗಂಟೆಯಲ್ಲಿ ಕ್ರಮ -ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
ಸಾಧು ಶ್ರೀನಾಥ್​
|

Updated on: Feb 23, 2021 | 5:31 PM

Share

ಚಿಕ್ಕಬಳ್ಳಾಪುರ: ಜಿಲ್ಲೆ ಗುಡಿಬಂಡೆಯ ಹಿರೆನಾಗವೇಲಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ಸ್ಪೋಟ ಪ್ರಕರಣದ ತನಿಖೆಯನ್ನು ಸಿಐಡಿಗೆ (CID) ವಹಿಸಲು ತೀರ್ಮಾನಿಸಿರುವುದಾಗಿ ಹೇಳಿರುವ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸುವುದಾಗಿ ಹೇಳಿದರು. ಸ್ಪೋಟ ಸಂಭವಿಸಿದ ಕ್ವಾರಿಗೆ ಮಂಗಳವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಘಟನೆ ಸಂಭವಿಸುತ್ತಿದ್ದಂತೆಯೇ ಚಿಕ್ಕಬಳ್ಳಾಪುರದ ಹಿರೆನಾಗವೇಲಿ ಕ್ವಾರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದ ಸಚಿವ ಬೊಮ್ಮಾಯಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಈ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು. ಹೀಗಾಗಿ ಈ ಪ್ರಕರಣವನ್ನು ಸಿಐಡಿಗೆ ವಹಿಸಿಲು ತೀರ್ಮಾನಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದರು. ವರದಿ ಬಂದ 24 ಗಂಟೆಗಳಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಜರುಗಿಸುತ್ತೇನೆ‌. ಈ ಪ್ರಕರಣದಲ್ಲಿ ನನ್ನ ಇಲಾಖೆಯಿಂದಲೇ ಕ್ರಮ ಆರಂಭಿಸುತ್ತೇನೆ. ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ದುರ್ಘಟನೆ ನಡೆದಿದ್ದು ಹೇಗೆ? ಈ ಕ್ವಾರಿಯ ಮಾಲೀಕರು ಯಾರು? ಯಾವ ರೀತಿ ಈ ಸ್ಫೋಟ ಸಂಭವಿಸಿರಬಹುದು? ಇಲ್ಲಿ ಇರಿಸಲಾಗಿದ್ದ ಸ್ಪೋಟಕಗಳು ಮತ್ತು ಅವುಗಳ ತೀವ್ರತೆ ಬಗ್ಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾದ ಮಾಹಿತಿ ವಿವರಗಳನ್ನು ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ಹೇಳಿದರು.

ಹಿರೆನಾಗವೇಲಿಯಲ್ಲಿ 3 ಎಕರೆಯಲ್ಲಿ ಕಲ್ಲು ಕ್ವಾರಿ ಇದೆ. ಜೊತೆಗೆ ಇನ್ನೂ 3 ಎಕರೆಯಲ್ಲಿ ಕ್ರಷರ್ ಇದೆ. ಈ ಕ್ವಾರಿಯ ಹೆಸರು ಶ್ರೀ ಶಿರಡಿ ಸಾಯಿ ಎಜೆನ್ಸೀಸ್​. ಇದಕ್ಕೆ 3 ಜನ ಪಾಲುದಾರರು. ಒಬ್ಬರು ಕರ್ನಾಟಕದ ನಾಗರಾಜ ಮತ್ತು ಇಬ್ಬರು ಆಂಧ್ರ ಮೂಲದ ರೆಡ್ಡಿ ಎಂಬುವರು.

Chikkaballapura Gelatin Blast case investigation to CID ಈ ಕ್ವಾರಿಯ ಮೇಲೆ ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠ ಆಧಿಕಾರಿ ದಾಳಿ ನಡೆಸಿದ್ದರು. ಅದರ ಆಧಾರದ ಮೇಲೆ ಫೆ. 7 ರಂದು ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದರು. ಆಗ ಪೊಲೀಸರು ಒಂದು ವಾಹನ ಸೀಜ್ ಮಾಡಿದ್ದರು. ಆ ಸಂದರ್ಭದಲ್ಲಿ ಇಲ್ಲಿ ಅಪಾರ ಪ್ರಮಾಣದ ಸ್ಪೋಟಕಗಳನ್ನು ಬಚ್ವಿಟ್ಟಿರಬಹುದು. ಆ ಸ್ಪೋಟಕ ತಮ್ಮ ಕ್ವಾರಿಯಲ್ಲಿ ಸಿಕ್ಕರೆ ದೊಡ್ಡ ಕೇಸ್ ಆಗಬಹುದು ಎಂಬ ಆತಂಕ ಅವರನ್ನು ಕಾಡುತ್ತಿರಬಹುದು. ಹೀಗಾಗಿ ರಾತ್ರೋ ರಾತ್ರಿ ಅಲ್ಲಿನ ಸ್ಫೋಟಕಗಳನ್ನು ತರಬೇತಿ ಇಲ್ಲದ ಕೆಲ ಯುವಕರು ಸ್ಥಳಾಂತರಿಸುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಪೋಟಗೊಂಡ ಸ್ಥಳದಲ್ಲಿ ನೆಲ ತಗ್ಗು ಬಿದ್ದಿಲ್ಲ. ನೆಲದ ಮೇಲೆ ಯಾವುದೇ ಗುರುತು ಇಲ್ಲ. ಸ್ಫೋಟಕಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿಯೇ ಅವು ಸ್ಪೋಟಗೊಂಡಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಆರು ಜನರ ದೇಹಗಳು ಛಿದ್ರಗೊಂಡಿವೆ. ಒಂದು ಮೋಟರ್ ಸೈಕಲ್ ಮತ್ತು ಒಂದು ನಾಲ್ಕು ಚಕ್ರದ ವಾಹನ ಜಖಂ ಗೊಂಡಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನೆಯ ಕುರಿತು ಎಳೆ ಎಳೆಯಾಗಿ ವಿವರಿಸಿದರು.

ಇದು ಜೆಲ್ ಎಕ್ಸ್ ಪ್ಲೋಸಿವ್? ಸ್ಪೋಟಗೊಂಡ ವಸ್ತು ಮೇಲ್ನೋಟಕ್ಕೆ ಜೆಲ್ ಎಕ್ಸ್ ಪ್ಲೋಸಿವ್ ಇರಬಹುದು ಎಂದು ತರ್ಕಿಸಲಾಗಿದೆ. ಪೆಟ್ರೋಲಿಯಂ ಜೆಲ್ ಎಕ್ಸ್ ಪ್ಲೋಸಿವ್ ಮತ್ತು ಅಮೋನಿಯಂ ನೈಟ್ರೇಟ್ ವಸ್ತುಗಳು ಸ್ಫೋಟಗೊಂಡಿರುವ ಸಾಧ್ಯತೆಗಳಿವೆ ಎಂಬುದು ಪ್ರಾಥಮಿಕ ‌ಮಾಹಿತಿಯಿಂದ ತಿಳಿದು ಬರುತ್ತದೆ. ಇದು ಬಹಳ ದೊಡ್ಡ ಪ್ರಮಾಣದ ಸ್ಫೋಟ. ಬಹಳ ನೋವಿನ ಸಂಗತಿ. ಸ್ಫೋಟದಲ್ಲಿ ದೇಹಗಳು ಛಿದ್ರಗೊಂಡಿವೆ. ದೇಹಗಳನ್ನು ಗುರುತಿಸಲು ಸಹ ಆಗುತ್ತಿಲ್ಲ. ನೋಡಿದರೆ ಕರುಳು ಕಿತ್ತು ಬರುತ್ತದೆ. ನಮ್ಮ ಕುಟುಂಬದವರಿಗೇ ಹೀಗಾದ್ರೆ ಹೇಗೆ ಎಂಬ ಯೋಚನೆ ಬರುತ್ತಿದೆ. -ಬಸವರಾಜ ಬೊಮ್ಮಾಯಿ, ಗೃಹ ಸಚಿವರ

Also Read: Chikkaballapura Gelatin Blast | ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ: ಕ್ರಷರ್​ ಹಾವಳಿಗೆ ಮುಚ್ಚಿಹೋದ ಪುರಾತನ ಹನುಮ ದೇಗುಲ!

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್