ಎರಡು ಸಬ್ಜೆಕ್ಟ್ಗಷ್ಟೇ ಒತ್ತು; ಉಳಿದ ವಿಷಯಗಳಲ್ಲಿ ಪೂರ್ಣ ಪಠ್ಯ ಕಲಿಸುವುದಿಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಮಕ್ಕಳಲ್ಲಿ ಕೊರೊನಾ ಕಂಡುಬಂದ್ರೆ ಇಡೀ ಶಾಲೆ ಸ್ಯಾನಿಟೈಸ್ ಮಾಡಿಸಲಾಗುವುದು. ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯುತ್ತವೆ. ಶನಿವಾರ ಮಾತ್ರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿಗಳು ಇರುತ್ತವೆ. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಸಹ ಕಡ್ಡಾಯಗೊಳಿಸಲಾಗಿದೆ.
ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಸಬ್ಜೆಕ್ಟ್ಗಳಲ್ಲಿ ಮಾತ್ರ ಶೇ. 100ರಷ್ಟು ಪೂರ್ಣ ಪಠ್ಯ ಮಾಡ್ತೇವೆ. ಉಳಿದ ವಿಷಯಗಳಲ್ಲಿ ಶೇ.100ರಷ್ಟು ಪಠ್ಯ ಬಗ್ಗೆ ಒತ್ತು ನೀಡ್ತಿಲ್ಲ. 2 ಭಾಷೆಗಳಲ್ಲಿ ಪಠ್ಯ ಪೂರೈಸದಿದ್ದರೆ ಮುಂದಿನ ತರಗತಿಗಳಲ್ಲಿ ತೊಂದರೆ ಆಗುತ್ತೆ ಎಂದು ಟಿವಿ9ಗೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಈ ಮಧ್ಯೆ, ಶಾಲೆ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಿದ್ದು, ಮಕ್ಕಳು ಶಾಲೆಗೆ ಬರಲು ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಇರುತ್ತದೆ. ಅನುದಾನ ರಹಿತ ಶಾಲೆಗಳಲ್ಲಿ ಮಕ್ಕಳೇ ಊಟ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ. ಕೊಠಡಿಯಲ್ಲಿ 15-20 ಮಕ್ಕಳ ತಂಡ ರಚಿಸಿ ಪಾಠ ಮಾಡಲಾಗುವುದು. ಶಾಲೆಯ ಗೇಟ್ಬಳಿ ಮಕ್ಕಳಿಗೆ ಕೊವಿಡ್ ತಪಾಸಣೆ ಮಾಡಲಾಗುವುದು.
ಮಕ್ಕಳಲ್ಲಿ ಕೊರೊನಾ ಕಂಡುಬಂದ್ರೆ ಇಡೀ ಶಾಲೆ ಸ್ಯಾನಿಟೈಸ್ ಮಾಡಿಸಲಾಗುವುದು. ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ತರಗತಿಗಳು ನಡೆಯುತ್ತವೆ. ಶನಿವಾರ ಮಾತ್ರ ಬೆಳಗ್ಗೆ 8ರಿಂದ 11.40ರವರೆಗೆ ತರಗತಿಗಳು ಇರುತ್ತವೆ. ಶಿಕ್ಷಕರು ಮತ್ತು ಮಕ್ಕಳಿಗೆ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಶಿಕ್ಷಕರು 2 ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ. 50 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಫೇಸ್ ಶೀಲ್ಡ್ ಸಹ ಕಡ್ಡಾಯಗೊಳಿಸಲಾಗಿದೆ.
(only science and maths subjects will be taught fully says karnataka education minister bc nagesh)
Published On - 11:57 am, Thu, 18 November 21