ಜನತಾದರ್ಶನ ವೇಳೆ ಸಿಎಂ ಬೊಮ್ಮಾಯಿ ಎದುರೇ ನೊಂದವರನ್ನು ಎಳೆದು ಹೊರಗೆ ಹಾಕಲು ಮುಂದಾದ ಪೊಲೀಸರು!

CM Basavaraj Bommai: ಬೆಳಗ್ಗೆಯಿಂದ ಮಳೆಯಲ್ಲೇ ಸಿಎಂ ನಿವಾಸದ ಎದುರು ಅಭ್ಯರ್ಥಿಗಳು ನಿಂತಿದ್ದರು. ಆದರೆ ತುರ್ತಾಗಿ ಹೋಗಬೇಕಿದ್ದರಿಂದ ಸರಿಯಾಗಿ ಸಮಸ್ಯೆ ಕೇಳಲು ಆಗದೆ ಸಿಎಂ ಬೊಮ್ಮಾಯಿ ಮನೆಯಿಂದ ಹೊರಟಿದ್ದಾರೆ. ಇದೇ ವೇಳೆ ಪೊಲೀಸರು ಅಭ್ಯರ್ಥಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಿಡದೇ ಅಡ್ಡಿಪಡಿಸಿದ್ದಾರೆ. ಅಕ್ಷರಶ: ಸಿಎಂ ಬೊಮ್ಮಾಯಿ ಎದುರೇ ನೊಂದ ಅಭ್ಯರ್ಥಿಗಳನ್ನು ಪೊಲೀಸರು ಎಳೆದು ಹೊರಗೆ ಹಾಕಲು ಮುಂದಾಗಿದ್ದಾರೆ.

ಜನತಾದರ್ಶನ ವೇಳೆ ಸಿಎಂ ಬೊಮ್ಮಾಯಿ ಎದುರೇ ನೊಂದವರನ್ನು ಎಳೆದು ಹೊರಗೆ ಹಾಕಲು ಮುಂದಾದ ಪೊಲೀಸರು!
ಸಿಎಂ ಬಸವರಾಜ ಬೊಮ್ಮಾಯಿ
Follow us
| Updated By: ಸಾಧು ಶ್ರೀನಾಥ್​

Updated on:Nov 18, 2021 | 11:05 AM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಇಂದು ಜನತಾದರ್ಶನ ನಡೆದಿತ್ತು. ಆದರೆ ನೊಂದವರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಮುಂದಾದಾಗ ಪೊಲೀಸರಿಂದ ಅಡ್ಡಿಯಾಗಿದೆ. ಇನ್ನು ಸಿಎಂ ಬೊಮ್ಮಾಯಿ ಅವರು ಪ್ರವಾಸಕ್ಕೆ ತುರ್ತಾಗಿ ಹೋಗಬೇಕಿದ್ದರಿಂದ ಸರಿಯಾಗಿ ಸಮಸ್ಯೆ ಕೇಳದ ಮನೆಯಿಂದ ಹೊರಟಿದ್ದಾರೆ. ವಸತಿ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ ಸಮಸ್ಯೆ ಹೇಳಿಕೊಳ್ಳಲು ಅಭ್ಯರ್ಥಿಗಳು ಇಂದು ಸಿಎಂ ಬೊಮ್ಮಾಯಿ ನಿವಾಸದ ಎದುರು ಜನತಾದರ್ಶನಕ್ಕೆ ಬಂದಿದ್ದರು. ಮೊರಾರ್ಜಿ ವಸತಿ ಶಾಲಾ ಶಿಕ್ಷಕರ ಹುದ್ದೆಗೆ ಹೆಚ್ಚುವರಿ ನೇಮಕಾತಿ ಲಿಸ್ಟ್ ಪ್ರಕಟ ವಿಳಂಬವಾಗುತ್ತಿರುವ ಬಗ್ಗೆ ನೊಂದ ಅಭ್ಯರ್ಥಿಗಳು ಸಿಎಂ ಬಳಿ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು.

ಬೆಳಗ್ಗೆಯಿಂದ ಮಳೆಯಲ್ಲೇ ಸಿಎಂ ನಿವಾಸದ ಎದುರು ಅಭ್ಯರ್ಥಿಗಳು ನಿಂತಿದ್ದರು. ಆದರೆ ತುರ್ತಾಗಿ ಹೋಗಬೇಕಿದ್ದರಿಂದ ಸರಿಯಾಗಿ ಸಮಸ್ಯೆ ಕೇಳಲು ಆಗದೆ ಸಿಎಂ ಬೊಮ್ಮಾಯಿ ಮನೆಯಿಂದ ಹೊರಟಿದ್ದಾರೆ. ಇದೇ ವೇಳೆ ಪೊಲೀಸರು ಅಭ್ಯರ್ಥಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಿಡದೇ ಅಡ್ಡಿಪಡಿಸಿದ್ದಾರೆ. ಅಕ್ಷರಶ: ಸಿಎಂ ಬೊಮ್ಮಾಯಿ ಎದುರೇ ನೊಂದ ಅಭ್ಯರ್ಥಿಗಳನ್ನು ಪೊಲೀಸರು ಎಳೆದು ಹೊರಗೆ ಹಾಕಲು ಮುಂದಾಗಿದ್ದಾರೆ. ಆಗ ಅಭ್ಯರ್ಥಿಗಳು ಜೋರಾಗಿ ಕೂಗಾಡಿ, ತಮ್ಮ ನೋವು ತೋಡಿಕೊಂಡಿದ್ದಾರೆ. ಕೊನೆಗೆ ಕಾರು ಹತ್ತಿದ್ದ ಸಿಎಂ ಬೊಮ್ಮಾಯಿ, ಕಾರಿನಿಂದ ಇಳಿದು ಬಂದು, ಸಮಸ್ಯೆ ಆಲಿಸಿ, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಿಎಂ ಜನತಾ ದರ್ಶನದಲ್ಲಿ ಸಮಸ್ಯೆ ಹೇಳ್ಕೊಳ್ಳೋರಿಗೆ ಪೊಲೀಸರ ಅಡ್ಡಿ |Students |Tv9 kannada

Also Read:

‘ಆರು ಕೋಟಿ ಜನರ ಪರವಾಗಿ ಪುನೀತ್​ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ

(Janata darshan by chief minister basavaraj bommai teacher manhandled by security police at cm house)

Published On - 10:58 am, Thu, 18 November 21

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ