ಬೆಂಗಳೂರು, (ನವೆಂಬರ್ 06): ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ(Bengaluru) ಒಂದು ಕಡೆ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳ ಮೇಲೆ ಎನ್ಐಎ(NIA) ದಾಳಿ ಮಾಡಿದ್ದರೆ, ಮತ್ತೊಂದೆಡೆ ರೌಡಿಶೀಟರ್ಗಳಿಗೆ (rowdy sheeters) ಸಿಸಿಬಿ (CCB) ಶಾಕ್ ಕೊಟ್ಟಿದೆ. ಬೆಂಗಳೂರು ನಗರದ 20ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ಏಕಕಾಲಕ್ಕೆ ಸಿಸಿಬಿ ದಾಳಿ ಮಾಡಿದೆ. ವಾರೆಂಟ್ ಜಾರಿ ಮಾಡಿದ್ದರೂ ಸಹ ರೌಡಿ ಶೀಟರ್ಗಳು ನ್ಯಾಯಾಲಯಕ್ಕೆ ಹಾಜರಾಗದೇ ತೆಲೆ ಮರೆಸಿಕೊಂಡು ಓಡಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಿಸಿಬಿ ರೌಡಿ ಶೀಟರ್ಗಳ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಲಾಂಗ್ ,ಮಚ್ಚು,ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮನೆಗಳ ಮೇಲೆ NIA ದಾಳಿ, 8 ಮಂದಿ ವಶಕ್ಕೆ
ರೌಡಿಶೀಟರ್ ರಮೇಶ್ ಅಲಿಯಾಸ್ ,ಜಗದೀಶ್ ಅಲಿಯಾಸ್ ಟಾಮಿ ಸೇರಿದಂತೆ ನಗರದಾದ್ಯಂತ ಇರುವ 20ಕ್ಕೂ ಹೆಚ್ಚು ನಟೋರಿಯಸ್ ರೌಡಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು ನಗರದ ಪೂರ್ವ ,ಪಶ್ಚಿಮ , ಉತ್ತರ ,ದಕ್ಷಿಣ ,ವೈಟ್ ಫೀಲ್ಡ್ ,ಆಗ್ನೇಯ ,ಈಶಾನ್ಯ ವಿಭಾಗದಲ್ಲಿ ಸಿಸಿಬಿ ದಾಳಿ ನಡೆಸಿದೆ.
ಕೆಲ ರೌಡಿ ಗಳ ನಿವಾಸದಲ್ಲಿ ಚೆಕ್, ಸಹಿ ಪಡೆದಿರುವ ಚಾಪಾ ಕಾಗದಗಳು ಪತ್ತೆಯಾಗಿವೆ. ಅಲ್ಲದೇ ರೌಡಿಗಳು ಬಡ್ಡಿ ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವುದು ಸಹ ತಿಳಿದುಬಂದಿದ್ದು, ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಚೆಕ್ ಹಾಗೈ ಸ್ಟ್ಯಾಂಪ್ ಪೇಪರ್ ಯಾರಿಗೆ ಸೇರಿದ್ದು? ರೌಡಿ ಬಳಿ ಹೇಗೆ ಬಂದವು? ಬಲವಂತವಾಗಿ ಯಾವುದಾದರೂ ಲ್ಯಾಂಡ್ ಮತ್ತು ಸೈಟ್ ಕಬ್ಜಾ ಮಾಡಿದ್ದಾರೆ? ಬೆದರಿಕೆ ಹಾಕಿ ಸೆಟಲ್ ಮೆಂಟ್ ಮಾಡುತ್ತಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ.
Published On - 10:39 am, Wed, 8 November 23