Bengaluru-Chennai Expressway: 2024ರ ಅಂತ್ಯದ ವೇಳೆಗೆ ಪೂರ್ಣ, ಇಲ್ಲಿದೆ ಹೆದ್ದಾರಿ ವಿಶೇಷತೆ
ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 262 ಕಿಮೀ ಚತುಷ್ಪಥ ಹೆದ್ದಾರಿ 2024ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಬೆಂಗಳೂರು: ಬಹು ನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (Bengaluru-Chennai Expressway) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, 262 ಕಿಮೀ ಚತುಷ್ಪಥ ಹೆದ್ದಾರಿ 2024ರ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೂರು ರಾಜ್ಯಗಳಲ್ಲಿ ಹಾದು ಹೋಗುವ ಹೈಸ್ಪೀಡ್ ಕಾರಿಡಾರ್ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 2.5 ಗಂಟೆಗಳವರೆಗೆ ಕಡಿತಗೊಳಿಸಲಿದೆ. ಎರಡು ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಈ ಹೆದ್ದಾರಿ ನಿರ್ಮಾಣ ಹಂತದಲ್ಲಿದ್ದು ದಕ್ಷಿಣ ಭಾರತದ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ ಬರುವ ಪ್ರಮುಖ ನಗರಗಳು ಕರ್ನಾಟಕದ (Karnataka) ಹೊಸಕೋಟೆ ಮತ್ತು ಬಂಗಾರಪೇಟೆ, ಆಂಧ್ರಪ್ರದೇಶದ ಪಲಮನೇರ್ ಮತ್ತು ಚಿತ್ತೂರು ಮತ್ತು ತಮಿಳುನಾಡಿನ ಶ್ರೀಪೆರಂಬದೂರು.
ಹೆದ್ದಾರಿಯ ನಿರ್ಮಾಣವನ್ನು ದಕ್ಷಿಣ ಭಾರತದಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ, ಮೂರು ರಾಜ್ಯಗಳ ವಿವಿಧ ನಗರಗಳ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇ ಸಮಸ್ಯೆ ಬಗೆಹರಿದಿದೆ, ಮತ್ತೆ ಸಂಚಾರಕ್ಕೆ ಮುಕ್ತ -NHAI
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ – ಪ್ರಮುಖ ಮುಖ್ಯಾಂಶಗಳು
- ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂಲಕ ಹಾದುಹೋಗುವ ನಾಲ್ಕು-ಲೇನ್ ಎಕ್ಸ್‌ಪ್ರೆಸ್‌ವೇ ಆಗಿದೆ.
- ಈ ಹೆದ್ದಾರಿಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಮಿಸುತ್ತಿರುವ 26 ಹೊಸ ಹಸಿರು ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ.
- 262 ಕಿಮೀಗಳಲ್ಲಿ 85 ಕಿಮೀ ತಮಿಳುನಾಡಿನಲ್ಲಿ, 71 ಕಿಮೀ ಆಂಧ್ರಪ್ರದೇಶದಲ್ಲಿ ಮತ್ತು 106 ಕಿಮೀ ಕರ್ನಾಟಕದಲ್ಲಿ ಹಾದುಹೋಗುತ್ತದೆ.
- ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದರೂ ಮುಂದಿನ ವರ್ಷಾಂತ್ಯಕ್ಕೆ ಹೆದ್ದಾರಿ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆ ಇದೆ. NHAI ಈ ಯೋಜನೆಯನ್ನು ನಿರ್ಮಾಣದ ಮೂರು ಹಂತಗಳಾಗಿ ವಿಂಗಡಿಸಿದೆ.
- ಯೋಜನೆಯ ಅಂದಾಜು ವೆಚ್ಚ 16,700 ಕೋಟಿ ಇದ್ದು, ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದರು.
- ಹೈ-ಸ್ಪೀಡ್ ಎರಡೂ ಮೆಗಾಸಿಟಿಗಳ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಮತ್ತು ಹೆದ್ದಾರಿಯ ಉದ್ದಕ್ಕೂ ಸಿಗುವ ಶ್ರೇಣಿ-3 ನಗರಗಳ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ. ಇದು ಕರ್ನಾಟಕ, ಆಂಧ್ರಪ್ರದೇಶ ಕೈಗಾರಿಕಾ ಪ್ರದೇಶಗಳಿಗೆ ಮತ್ತು ಚೆನ್ನೈ ಬಂದರಿಗೆ ಸಂಪರ್ಕ ಕಲ್ಪಿಸುತ್ತದೆ .
- ಈ ಹೆದ್ದಾರಿಯು ಕರ್ನಾಟಕದ ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್), ಆಂಧ್ರದ ಪಲಮನೇರ್, ಚಿತ್ತೂರು ಮತ್ತು ತಮಿಳುನಾಡಿನ ರಾಣಿಪೇಟ್ ಮೂಲಕ ಹಾದು ಹೋಗುತ್ತದೆ.
- ಪ್ರಸ್ತುತ ರಸ್ತೆ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಸರಾಸರಿ ಪ್ರಯಾಣದ ಸಮಯ ಐದರಿಂದ ಆರು ಗಂಟೆಗಳು. ಹೊಸ ಎಕ್ಸ್‌ಪ್ರೆಸ್‌ವೇ ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರವನ್ನು 300 ಕಿ.ಮೀ ನಿಂದ 262 ಕಿ.ಮೀಗೆ ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು 2-3 ಗಂಟೆಗಳವರೆಗೆ ಕಡಿಮೆ ಮಾಡುತ್ತದೆ.
- ಎಕ್ಸ್‌ಪ್ರೆಸ್‌ವೇಯನ್ನು ಗಂಟೆಗೆ 120 ಕಿಮೀ ವೇಗಕ್ಕೆ ವಿನ್ಯಾಸಗೊಳಿಸಲಾಗಿದೆ. ನಿಧಾನವಾಗಿ ಚಲಿಸುವ ವಾಹನಗಳು, ಬೈಕ್‌ಗಳು ಮತ್ತು ಆಟೋ ರಿಕ್ಷಾಗಳಿಗೆ ಹೆದ್ದಾರಿಯಲ್ಲಿ ಸಂಚರಿಸಲು ಅನುಮತಿ ಇಲ್ಲ.
- ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೇ 2022 ರಲ್ಲಿ ಅಡಿಪಾಯ ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ